ವಿಜಯಪುರ:ಬ್ಲಾಕ್​ಮೇಲ್​ ಮಾಡಿದವರಿಗೆ, ಹಣ ಕೊಟ್ಟವರಿಗೆ ಮಾತ್ರ ಮಂತ್ರಿ ಸ್ಥಾನ ನೀಡಲಾಗುತ್ತಿದೆ. ಕೆಲವರು ಸಿಡಿ ತೋರಿಸಿ ಹೆದರಿಸಿ ಮಂತ್ರಿ ಸ್ಥಾನ ಪಡೆಯುತ್ತಿದ್ದಾರೆ. ಕೆಲವರು ಜಾತಿ ಮುಂದಿಟ್ಟುಕೊಂಡು ಬ್ಲಾಕ್​ಮೇಲ್​ ಮಾಡಿ ಮಂತ್ರಿ ಸ್ಥಾನ ಪಡೆದಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದರು.
ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ, ಸಿಎಂ ಯಡಿಯೂರಪ್ಪ ವಿರುದ್ಧ ಆಕ್ರೋಶ ಹೊರ ಹಾಕಿದರು. ನಿಜಲಿಂಗಪ್ಪ, ವಿರೇಂದ್ರ ಪಾಟೀಲ, ಜೆ.ಎಚ್​. ಪಟೇಲ್​ ನಮ್ಮ ಸಮುದಾಯಕ್ಕೆ ಗೌರವ ತರುವ ಕೆಲಸ ಮಾಡಿದ್ದರು. ಯಡಿಯೂರಪ್ಪನವರೇ ನಮ್ಮ ಸಮುದಾಯದ ಮಾನ ಮರ್ಯಾದೆ ಕಳೆಯುತ್ತಿದ್ದೀರಿ. ವೀರಶೈವ- ಲಿಂಗಾಯತ ಸಮುದಾಯ ನಿಮ್ಮೊಂದಿಗಿಲ್ಲ. ನೀವು ವೀರಶೈವ-ಲಿಂಗಾಯತ ಸಮುದಾಯ ಮುಂದಿಟ್ಟುಕೊಂಡು ನಮ್ಮ ಹೈಕಮಾಂಡ್​ಗೆ ಬ್ಲಾಕ್​ಮೇಲ್​ ಮಾಡುತ್ತಿದ್ದೀರಿ. ಇನ್ಮುಂದೆ ನಿಮ್ಮ ಅಂತ್ಯ ಆರಂಭವಾಗಲಿದೆ. ಮಕರ ಸಂಕ್ರಮಣದಂದೇ ಸವಾಲು ಹಾಕುತ್ತಿದ್ದು, ನಿಮ್ಮ ಅಂತ್ಯ ಇಂದಿನಿಂದಲೇ ಆರಂಭವಾಗಿದೆ ಎಂದರು.ಇದನ್ನೂ ಓದಿರಿಅಬಕಾರಿ ಸಚಿವ ಸ್ಥಾನಕ್ಕೆ ನಾಗೇಶ್​ ರಾಜೀನಾಮೆ ಕೊಟ್ಟಿದ್ದಕ್ಕೆ ಸ್ವಕ್ಷೇತ್ರದಲ್ಲೇ ಪಟಾಕಿ ಸಿಡಿಸಿ ಸಂಭ್ರಮಾಚರಣೆ!
ಕೆಲ ದಿನಗಳ ಹಿಂದೆ ಯಡಿಯೂರಪ್ಪನನ್ನೇ ಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಕುತಂತ್ರ ನಡೆದಿತ್ತು. ಈಗ ಮಂತ್ರಿ ಆಗಿರುವವರಲ್ಲಿ ಕೆಲವರು ನೆಲಮಂಗಲದ ಗೆಸ್ಟ್​ ಹೌಸ್​ನಲ್ಲಿ ಯಡಿಯೂರಪ್ಪನನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ನನ್ನೊಂದಿಗೆ ಮಾತುಕತೆ ನಡೆಸಿದ್ದರು. ಯಡಿಯೂರಪ್ಪನನ್ನು ಇಳಿಸಿ ಸಿಎಂ ಆಗಲು ನೂರಾರು ಕೋಟಿ ರೂ. ಖರ್ಚು ಮಾಡಲು ತಯಾರಾಗಿದ್ದರು. ಈ ವಿಚಾರ ಗೊತ್ತಾಗಿ ನಾನೇ ಗಾಬರಿಗೊಂಡಿದ್ದೆ ಎಂದರು ಎಂದು ಸಿಎಂ ವಿರುದ್ಧ ಏಕವಚನದಲ್ಲೇ ಯತ್ನಾಳ ಕಿಡಿಕಾರಿದರು.
ಬ್ಲಾಕ್​ಮೇಲ್​ ಮಾಡಿದವರಲ್ಲಿ ಒಬ್ಬರು ರಾಜಕೀಯ ಕಾರ್ಯದರ್ಶಿಯಾಗಿದ್ದರೆ, ಇನ್ನಿಬ್ಬರು ಮಂತ್ರಿಯಾಗಿದ್ದಾರೆ. ಅದರಲ್ಲಿ ಒಬ್ಬರು ವಿಜಯೇಂದ್ರಗೆ ಹಣ ಸಂದಾಯ ಮಾಡಿದ್ದಾರೆ. ವೀರಶೈವ ಲಿಂಗಾಯತ ಸಮುದಾಯದ ಹೆಸರಿನಿಂದ ಬ್ಲಾಕ್​ಮೇಲ್​ ಮಾಡಿ ಪ್ರಧಾನಿ ಹಾಗೂ ಅಮಿತ್​ ಷಾಗೆ ಮನಸ್ಸಿಲ್ಲದಿದ್ದರೂ ಮಂತ್ರಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ಎಂದರು.ಇದನ್ನೂ ಓದಿರಿವಿಶ್ವನಾಥ್​ಗೆ ನಾಡದೇವಿ ಚಾಮುಂಡೇಶ್ವರಿ ಶಾಪ ತಟ್ಟಿದೆ… ಪರಿಣಾಮ ಏನಾಗಿದೆ ಗೊತ್ತಾ?
ಪ್ರಧಾನಿ ಮೋದಿ ಅವರು ಕುಟುಂಬ ರಾಜಕಾರಣ ಕಿತ್ತೊಗೆಯುವ ಬಗ್ಗೆ ಮಾತನಾಡುತ್ತಿದ್ದು, ಆ ಕೆಲಸ ಮೊದಲು ಕರ್ನಾಟಕದಿಂದಲೇ ಅದೂ ಯಡಿಯೂರಪ್ಪ ಅವರ ಮನೆಯಿಂದಲೇ ಆರಂಭವಾಗಬೇಕು. ಆ ಮೂಲಕ ದೇಶಕ್ಕೆ ಒಂದು ಸಂದೇಶ ರವಾನಿಸಬೇಕು. ಯಡಿಯೂರಪ್ಪ ಮನೆಯಲ್ಲಿ ಒಬ್ಬರು ಸಿಎಂ, ಇನ್ನೊಬ್ಬರು ಲೋಕಸಭೆ ಸದಸ್ಯ, ಮತ್ತೊಬ್ಬರು ಬಿಜೆಪಿ ರಾಜ್ಯ ಉಪಾಧ್ಯಕ್ಷ ಇದ್ದಾರೆ. ಯಡಿಯೂರಪ್ಪ ದೆಹಲಿಗೆ ಹೋಗಬೇಕಾದರೆ ಪಕ್ಷದ ಮುಖಂಡರನ್ನು ಕರೆದೊಯ್ಯದೆ ತಮ್ಮ ಪುತ್ರನನ್ನು ಕರೆದೊಯ್ಯುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಬಿಎಸ್​ವೈ ಸಂಪುಟ ಸೇರಿದ ‘ಸಪ್ತ’ ಸಚಿವರು: ಯಾರಿಗೆ ಯಾವ ಖಾತೆ? ಇಲ್ಲಿದೆ ಸಂಭಾವ್ಯ ಪಟ್ಟಿ

ಪ್ರೀತಿಸಿ ಮದ್ವೆ ಮಾಡಿಕೊಂಡಾಗ ಅಡ್ಡಿಯಾಗದ ಆ ಸಮಸ್ಯೆ ವರ್ಷದ ಬಳಿಕ ದೊಡ್ಡದಾಯ್ತೆ..? ಗಂಡನ ಮನೆ ಬಾಗಿಲಲ್ಲಿ ಕಣ್ಣೀರಿಟ್ಟ ಪತ್ನಿ

ತಾನೇ ಸಾಕಿದ್ದ ಹಸುಗೆ ಬಲಿಯಾದ ಬಾಲಕ! ಮುಗಿಲುಮುಟ್ಟಿದೆ ಕುಟುಂಬಸ್ಥರ ಆಕ್ರಂದನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 5 =
Remember me
