ವಿಜಯಪುರ:ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಮತ್ತೆ ಅಸಮಾಧಾನ ಹೊರಹಾಕಿದ್ದಾರೆ.
ಕಂದಾಯ ಸಚಿವ ಆರ್. ಅಶೋಕ ನೇತ್ರತ್ವದಲ್ಲಿ ವಿಜಯಪುರ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಸಮಧಾನ ಸ್ಫೋಟ ಮಾಡಿದ್ದಾರೆ.
ಇದನ್ನೂ ಓದಿ:ಟೀ ಅಥವಾ ನೀರಿನಲ್ಲಿ ನಾಲ್ಕು ಡ್ರಾಪ್​ ಬೆರೆಸಿ ಕೊಡು: ರಿಯಾ ವಾಟ್ಸ್​ಆ್ಯಪ್​ ಚಾಟ್​ನಲ್ಲಿದೆ ಮಹತ್ವದ ಸುಳಿವು!
ವಿಜಯಪುರ ಮಹಾನಗರ ಪಾಲಿಕೆಗೆ 125 ಕೋಟಿ ರೂಪಾಯಿ ಬಂದಿತ್ತು. ಆದ್ರೆ ಕೋವಿಡ್ ಹೆಸರಲ್ಲಿ ಬಿಎಸ್​​ವೈ ಹಿಂಪಡೆದಿದ್ದಾರೆ‌ ಎಂದು ಬೇಸರ ಹೊರಹಾಕಿದ್ದಾರೆ. ಇದು ಬಿಎಸ್​ವೈ ಕೊಟ್ಟ ಹಣವಲ್ಲ, ಹಿಂದಿನ ಸಿಎಂ ನೀಡಿದ್ದ ಅನುದಾನ. ನಮ್ಮ‌ ಸಿಎಂ ತಡೆ ಹಿಡದಿದ್ದಾರೆ ಎಂದು ಯತ್ನಾಳ ಹೇಳಿದ್ರು.
ನಿನ್ನೆ ಆಲಮಟ್ಟಿಯಲ್ಲಿ ಸಿಎಂ‌ ನಡೆಸಿದ ಸಭೆಗೆ ಬಾರದೆ ಯತ್ನಾಳ ಗೈರಾಗಿದ್ದರು. ವಿಜಯಪುರ, ಬಾಗಲಕೋಟೆ ಹಾಗೂ ಗದಗ ಜಿಲ್ಲೆಗಳ ಜನಪ್ರತಿನಿಧಿಗಳೊಂದಿಗೆ ಮಳೆಹಾನಿಯ ಕುರಿತು ಸಿಎಂ ಕರೆದಿದ್ದ ಸಭೆ. ಈ ವೇಳೆ ಸಿಎಂ ಸಭೆಗೆ ಯತ್ನಾಳ ಬಂದಿರಲಿಲ್ಲ. ಆದ್ರೆ, ಇಂದು ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರತ್ಯಕ್ಷವಾಗಿದ್ದಾರೆ. ಸಿಎಂ ಮೇಲೆ ತಮಗಿರುವ ಮುನಿಸನ್ನು ಈ ರೀತಿಯಾಗಿ ಯತ್ನಾಳ ಹೊರಹಾಕಿದ್ದಾರೆ.(ದಿಗ್ವಿಜಯ ನ್ಯೂಸ್​)
ಇದನ್ನೂ ಓದಿ:ಕಂಡೋರ ಹೆಂಡತಿಯನ್ನು ಕರೆದೊಯ್ದ ಪೊಲೀಸಪ್ಪ: ಪತ್ನಿಗಾಗಿ ಸಂತ್ರಸ್ತ ಪತಿಯ ಅಳಲು!
ಕರೊನಾ, ಪ್ರವಾಹದಿಂದ ಪಾರಾಗಲು ಹೀಗೆ ಮಾಡಿ: ವಿನಯ್​ ಗುರೂಜಿ ಕೊಟ್ಟ ಸಲಹೆ ಇವು!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five − 4 =
Remember me
