ಹುಬ್ಬಳ್ಳಿ:ಕೊಂಯ್ಕ್ ಅಂದ್ರೆ ಎನ್​ಕೌಂಟರ್… ಹಿಂದುಗಳ ಬಗ್ಗೆ ಮತ್ತು ಭಾರತದ ವಿರುದ್ಧ ಮಾತಾಡಿದ್ರೆ ಢಂ ಢಂ… ರೋಡ್ ಮೇಲೆಯೇ ಡಿಷ್ಕ್ಯಾಂ… ಮುಂದೆ ರಾಜ್ಯದಲ್ಲಿ ಈ ವ್ಯವಸ್ಥೆ ಜಾರಿಗೆ ಬರುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಕುಂದಗೋಳ ವಿಧಾನಸಭಾ ಕ್ಷೇತ್ರದ ಹಿರೇಹರಕುಣಿ ಗ್ರಾಮದಲ್ಲಿ ಪ್ರಚಾರಸಭೆಯಲ್ಲಿ ಬಹಿರಂಗವಾಗಿ ಯತ್ನಾಳ್ ಮಾತನಾಡುತ್ತಾ, ಬಿಜೆಪಿ ಅಧಿಕಾರಕ್ಕೆ ಬಂದರೆ ಉತ್ತರ ಪ್ರದೇಶ ಮಾದರಿಯ ಕಾನೂನು ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ:‘ನಾನು ಹೇಳಿದ್ದೂ ಆಯ್ತು… ಅವರು ಉತ್ತರಿಸಿದ್ದೂ ಆಯ್ತು’: ‘ವಿಷಕಂಠ’ ಹೇಳಿಕೆ ವಿವಾದ ತಣ್ಣಗಾಗಿಸುವ ಪ್ರಯತ್ನದಲ್ಲಿ ಖರ್ಗೆ!
ಯತ್ನಾಳ್ ಮಾತನಾಡುತ್ತಾ, ಉತ್ತರ ಪ್ರದೇಶದಲ್ಲಿ ಇಬ್ಬರು ಅಣ್ಣ-ತಮ್ಮಂದಿರನ್ನು ಎನ್​ಕೌಂಟರ್ ಮಾಡಲಾಯಿತು. ಹೀಗಾಗಿ ಕೆಲವರು ಜೈಲಿನಿಂದ ಹೊರಗೆ ಬರಲು ಹೆದರುತ್ತಿದ್ದಾರೆ. ಯುಪಿಯಲ್ಲಿ ವಾಹನಗಳು ಪಲ್ಟಿಯಗುತ್ತಲೇ ಇರುತ್ತವೆ. ರೌಡಿಗಳ ಹರಣವಾಗುತ್ತಲೇ ಇರುತ್ತದೆ. ಇನ್ನು ಮುಂದೆ ಕರ್ನಾಟಕದಲ್ಲಿ ಯಾರಾದರೂ ಹಾರಾಡಿದರೆ ಎನ್​ಕೌಂಟರ್ ಖಚಿತ ಎಂದು ಹೇಳಿದರು.
ಟಿಪ್ಪು ಸುಲ್ತಾನ್ ಹರಾಂ ಕೋರ್ ಎಂದ ಯತ್ನಾಳ್, ನಮ್ಮ ಸರ್ಕಾರ ಆಡಳಿತಕ್ಕೆ ಬಂದರೆ ಅವನ ಫೋಟೋ ತೆಗೆದು ಸಂಗೊಳ್ಳಿ ರಾಯಣ್ಣ, ಬಾಬಾ ಸಾಹೇಬ್ ಅಂಬೇಡ್ಕರ್ ಫೋಟೋ ಹಾಕುತ್ತೇವೆ ಎಂದರು.
ಇದನ್ನೂ ಓದಿ:ಬಿಜೆಪಿಯ ಪ್ರಣಾಳಿಕೆ ಓದುವುದು ಸತ್ತ ಮಗನ ಜಾತಕ ಓದುವುದು ಎರಡೂ ಒಂದೇ! ಕಾಂಗ್ರೆಸ್ ಟ್ವೀಟ್
ಪ್ರಿಯಾಂಕ್ ಖರ್ಗೆ ಮಾತನಾಡುತ್ತಾ, ಮೋದಿ ನಾಲಾಯಕ್ ಎಂದು ಹೇಳಿರುವ ಬಗ್ಗೆ ಕಿಡಿಕಾರಿದ ಯತ್ನಾಳ್, ಊರ ಬದ್ಮಾಷರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಮೂರು ಬಿಟ್ಟವರು ಎಲ್ಲ ಬಿಟ್ಟು ನಿಂತ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಕಾಂಗ್ರೆಸ್​ನಲ್ಲಿದ್ದಾರೆ. ನರೇಂದ್ರ ಮೋದಿ 150 ಕೋಟಿ ಜನರ ಆಶೀರ್ವಾದದಿಂದ ಪ್ರಧಾನಿಯಾಗಿದ್ದಾರೆ. ಅವರ ಬಗ್ಗೆ ಹಗುರವಾಗಿ ಮಾತಾಡುತ್ತೀರಾ ಎಂದಾದರೆ ಯೋಚನೆ ಮಾಡಿ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
