ಪಾಂಡವಪುರ:ಕುಟುಂಬದಲ್ಲಿ ಉಂಟಾಗಿದ್ದ ಸಮಸ್ಯೆ ಪರಿಹಾರಕ್ಕಾಗಿ ಸೋಮವಾರ ಕರೆಸಲಾಗಿದ್ದ ಬಸವ ಜಮೀನಿನ ನೆಲದಲ್ಲಿ ಹುದುಗಿದ್ದ ನಾಡದೇವತೆ ಚಾಮುಂಡೇಶ್ವರಿ ವಿಗ್ರಹವನ್ನು ಪತ್ತೆ ಹಚ್ಚುವ ಮೂಲಕ ಗ್ರಾಮಸ್ಥರಲ್ಲಿ ವಿಸ್ಮಯ ಮೂಡಿಸಿದೆ.
ದೇವರಹಳ್ಳಿ ಗ್ರಾಮದ ಬಸ್ತಿಕಾಳೇಗೌಡರ ಮಗ ಮೋಟೇಗೌಡರ ಮನೆಯಲ್ಲಿ ಕೌಟುಂಬಿಕ ಸಮಸ್ಯೆಗಳು ಎದುರಾಗಿದ್ದವು. ಈ ಹಿನ್ನೆಲೆಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರಾಮನಗರ ತಾಲೂಕಿನ ಜಯಪುರದಿಂದ ದೇವರ ಬಸವನನ್ನು ಕರೆಸಿದ್ದರು. ಗ್ರಾಮಕ್ಕೆ ಆಗಮಿಸಿದ ಬಸವನಿಗೆ ಪೂಜೆ ಸಲ್ಲಿಸಿದ ಮೋಟೇಗೌಡರ ಕುಟುಂಬ ಸಮಸ್ಯೆಗೆ ಕಾರಣ ಹುಡುಕಿ ಪರಿಹರಿಸುವಂತೆ ಬೇಡಿಕೊಂಡರು.
ಜಮೀನಿಗೆ ತೆರಳಿದ ಬಸವ ಮೊದಲಿಗೆ ವಾಮಾಚಾರ ಮಾಡಿರುವ ಸ್ಥಳ ಗುರುತು ಮಾಡಿತು. ಆ ಸ್ಥಳ ಅಗೆದಾಗ ವಾಮಾಚಾರ ಮಾಡಿ ಹೂತಿಟ್ಟ ವಸ್ತು ಕಾಣಿಸಿತು. ನಂತರ ಜಮೀನಿನನ್ನು ಸುತ್ತು ಹಾಕಿದ ಬಸವ ಒಂದು ಸ್ಥಳದಲ್ಲಿ ನಿಂತು ತನ್ನ ಗೊರಸಿನಿಂದ ನೆಲ ಕೆರೆಯಿತು. ಮೋಟೇಗೌಡರ ಕುಟುಂಬ ಮತ್ತು ಗ್ರಾಮಸ್ಥರು ಆ ಜಾಗ ಅಗೆದಾಗ ಚಿನ್ನ ಲೇಪನದ ಚಾಮುಂಡೇಶ್ವರಿ ವಿಗ್ರಹ ಪತ್ತೆಯಾಯಿತು. ದೇವಿ ಮೂರ್ತಿಯನ್ನು ದೇವಸ್ಥಾನದಲ್ಲಿಟ್ಟು ಪೂಜೆ ಸಲ್ಲಿಸುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
