ಬೆಂಗಳೂರು:ಕ್ರಾಂತಿಯೋಗಿ ಬಸವಣ್ಣ ರಾಜ್ಯದ ‘ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಿ ರಾಜ್ಯ ಸಚಿವ ಸಂಪುಟ ಸಭೆಯು ಗುರುವಾರ ತೀರ್ಮಾನ ಕೈಗೊಂಡಿದೆ. ಮಹಾರಾಷ್ಟ್ರ ಸರ್ಕಾರ ಛತ್ರಪತಿ ಶಿವಾಜಿ ಮಹಾರಾಜರಿಗೆ ಸಾಂಸ್ಕೃತಿಕ ನಾಯಕನೆಂದು ಅಧಿಕೃತ ಮುದ್ರೆಯೊತ್ತಿದೆ. ಬಸವೇಶ್ವರರಿಗೆ ಸಾಂಸ್ಕೃತಿಕ ನಾಯಕನೆಂದು ಸಾರಿದ ಕರ್ನಾಟಕ ಎರಡನೇ ರಾಜ್ಯವಾಗಿದೆ.
ಸಭೆಯ ನಂತರ ಸಚಿವ ಈಶ್ವರಖಂಡ್ರೆ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಮಠಾಧೀಶರು, ಸಮುದಾಯದ ಗಣ್ಯರು, ಸಚಿವ, ಶಾಸಕರು, ಬಸವೇಶ್ವರರ ವಿಚಾರಧಾರೆ ಬಲ್ಲವರು ಹಾಗೂ ಅನುಯಾಯಿಗಳ ಅಪೇಕ್ಷೆಯನ್ನು ರಾಜ್ಯ ಸರ್ಕಾರ ಈಡೇರಿಸಿದೆ. ಬಸವಕಲ್ಯಾಣದಲ್ಲಿ ಆಧುನಿಕ ಅನುಭವ ಮಂಟಪ ನಿರ್ಮಾಣ ಪ್ರಗತಿಯಲ್ಲಿದೆ. ಪೂರ್ವನಿಗದಿ ಪ್ರಕಾರ 2025ರೊಳಗೆ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು.
ಅಲ್ಲಮಪ್ರಭು ಮೈದಾನ:ಶಿವಮೊಗ್ಗದ ಹಳೆಯ ಜೈಲು ಆವರಣದ ವಿಶಾಲ 46.32 ಎಕರೆ ವಿಸ್ತೀರ್ಣದಲ್ಲಿ ಉದ್ಯಾನ ನಿರ್ವಿುಸಲು ಕಾಯ್ದಿರಿಸಿದ ಪ್ರದೇಶಕ್ಕೆ ವಚನಕಾರ ‘ಅಲ್ಲಮಪ್ರಭು ಮೈದಾನ’ವೆಂದು ನಾಮಕರಣ ಮಾಡಲು ಸಚಿವ ಸಂಪುಟ ಸಮ್ಮತಿಸಿದೆ ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಬಸವ ಭಕ್ತರಿಗೆ ಸಂತಸ:ಸರ್ಕಾರ ಬಸವಣ್ಣನನ್ನು ಕರ್ನಾಟಕ ಸಾಂಸ್ಕೃತಿಕ ನಾಯಕ ಎಂದು ಗುರುವಾರ ನಡೆದ ಸಚಿವ ಸಂಪುಟದಲ್ಲಿ ಘೊಷಿಸಿರುವುದು ಬಸವ ಭಕ್ತರಿಗೆ ಹಾಗೂ ಅನುಯಾಯಿಗಳ ಸಂತಸಕ್ಕೆ ಕಾರಣವಾಗಿದೆ. ಕೂಡಲಸಂಗಮ ಬಸವ ಧರ್ಮ ಪೀಠದಲ್ಲಿ ಜನವರಿ 13ರಂದು ನಡೆದ 37ನೇ ಶರಣಮೇಳ ಉದ್ಘಾಟನೆಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಸವ ಧರ್ಮ ಪೀಠದ ಅಧ್ಯಕ್ಷೆ ಮಾತೆ ಗಂಗಾದೇವಿ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೊಷಿಸುವಂತೆ ವಿನಂತಿಸಿದ್ದರು. ಇದಕ್ಕೆ ಮುಖ್ಯಮಂತ್ರಿಗಳು ಸಚಿವ ಸಂಪುಟ ಸಭೆಯಲ್ಲಿ ರ್ಚಚಿಸಿ ಘೊಷಿಸುವ ಭರವಸೆ ಕೊಟ್ಟಿದ್ದರು. ಶರಣ ಮೇಳದ ಕೊನೇ ದಿನ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಘೊಷಿಸಬೇಕೆಂಬ ನಿರ್ಣಯ ಕೂಡ ಕೈಗೊಳ್ಳಲಾಗಿತ್ತು.
ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೊಷಿಸುವ ಮೂಲಕ ಶರಣರಿಗೆ ಸಿಎಂ ಸಿದ್ದರಾಮಯ್ಯ ಗೌರವ ಸಲ್ಲಿಸಿದ್ದಾರೆ. ಕಲಬುರಗಿ ವಿಶ್ವವಿದ್ಯಾಲಯಕ್ಕೆ ಬಸವಣ್ಣನವರ ಹೆಸರು ಇಡಬೇಕು ಎಂಬುದು ಬಹುದಿನದ ಬೇಡಿಕೆಯಾಗಿದ್ದು, ಶೀಘ್ರ ಈಡೇರಿಸಬೇಕು. ಬೆಂಗಳೂರು ಮೆಟ್ರೊಗೆ ಬಸವಣ್ಣನವರ ಹೆಸರಿಡಬೇಕು.
| ಬಸವಜಯ ಮೃತ್ಯುಂಜಯ ಸ್ವಾಮೀಜಿ, ಲಿಂಗಾಯತ ಪಂಚಮಸಾಲಿ ಪೀಠ, ಕೂಡಲಸಂಗಮ
ವಿಶ್ವಗುರು ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೊಷಣೆ ಮಾಡಿರುವ ಸರ್ಕಾರದ ನಡೆ ಸಂತಸ ಉಂಟು ಮಾಡಿದೆ. ಇದು ಜನತೆಗೆ ಮಾತ್ರವಲ್ಲ, ಇಡೀ ಭಾರತೀಯರು ಮೆಚ್ಚಬಹುದಾದ, ಗೌರವಿಸಬಹುದಾದ ಸಂಗತಿಯಾಗಿದೆ.
| ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾಣೇಹಳ್ಳಿ ಮಠ
ಸಾಮಾಜಿಕ ನ್ಯಾಯದ ಮೊದಲ ಹರಿಕಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂಬ ಘೋಷಣೆ ಅತೀವ ಹೆಮ್ಮೆ, ತೃಪ್ತಿಯನ್ನು ಉಂಟುಮಾಡಿದೆ. ಈ ಘೋಷಣೆಯನ್ನಷ್ಟೇ ಮಾಡಿ ನಾವು ವಿರಮಸುವುದಿಲ್ಲ. ಬಸವ ತತ್ವವನ್ನು ಮನೆ-ಮನೆಗೆ ತಲುಪಿಸುವ ಕಾರ್ಯಕ್ರಮ ರೂಪಿಸಿ, ಜಾರಿಗೆ ತರುತ್ತೇವೆ.
| ಸಿದ್ದರಾಮಯ್ಯ ಸಿಎಂ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × five =
Remember me
