ದುಬೈ:ರಾಮಾಯಣದಲ್ಲಿ ಹನುಮಂತ ಲಂಕೆಗೆ ಹಾರಿ ಸೀತೆಯನ್ನು ರಕ್ಷಿಸಿದಂತೆ, ಉದ್ಯೋಗ ಬಯಸಿ ಭಾರತದಿಂದ ದುಬೈಗೆ ಹಾರಿಬಂದ ಸಾಗರದಾಚೆಯ ಕನ್ನಡಿಗರು ಬಸವಾಭಿಮಾನಿಗಳಾಗಿ ತಮ್ಮ ಮಕ್ಕಳಿಗೆ ವಚನ ಸಾಹಿತ್ಯ, ಸಂಸ್ಕೃತಿ ಬೆಳೆಸುತ್ತಿರುವುದು ಪ್ರಶಂಸನೀಯ ಎಂದು ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಪ್ರಶಂಸೆ ವ್ಯಕ್ತಪಡಿಸಿದರು.
ಇದನ್ನೂ ಓದಿ:ಡಿಮ್ಯಾಟ್ ಖಾತೆ ಸಂಬಂಧಿತ ಸಂಗತಿಗಳು: ಷೇರು ಮಾರುಕಟ್ಟೆಯಲ್ಲಿ ಟ್ರೇಡಿಂಗ್​ ಮಾಡುವವರಿಗೆ ಇವು ಗೊತ್ತಿರಲೇಬೇಕು…
ಯುಎಇ ಬಸವ ಸಮಿತಿ ದುಬೈ ವತಿಯಿಂದ 17ನೇ ವರ್ಷದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಜಯಂತಿ ಆಚರಣೆಗೆ ಮಾತ್ರ ಸೀಮಿತವಾಗದೆ ಶರಣರ ತತ್ವಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳುವಂತೆ ಕಿವಿಮಾತು ಹೇಳಿದರು.

ಜಗತ್ತಿನ ಐತಿಹ್ಯದ ಹೋರಾಟಗಾರರು ಒಂದೇ ಕ್ಷೇತ್ರದಲ್ಲಿ ಛಾತಿ ಮೂಡಿಸಿದ ಕ್ರಾಂತಿಕಾರಿಗಳಾಗಿದ್ದರೆ, ಬಸವಣ್ಣನವರು ಸಾಂಸ್ಕೃತಿಕ ವಲಯದ ಪರಿಮಿತಿಗೆ ಬಸವಣ್ಣನವರು ಒಳಪಡದೆ ಆಧ್ಯಾತ್ಮಿಕ, ಧಾರ್ಮಿಕ, ಸಾಹಿತ್ಯಿಕ ಸಾಂಸ್ಕೃತಿಕ, ರಾಜಕೀಯ, ಆರ್ಥಿಕ, ಕರುಣೆ, ಜಾತ್ಯಾತೀತ, ಕ್ರಾಂತಿಕಾರಕ ಸೇರಿದಂತೆ ಇನ್ನೂ ಹಲವಾರು ಕ್ಷೇತ್ರಗಳನ್ನು ಉದ್ಧರಿಸಿದ ವಿಶ್ವದ ಏಕಮೇವಾದ್ವೀತೀಯ ಪ್ರವರ್ತಕರು, ಇತ್ತೀಚೆಗೆ ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರೆಂದು ಘೋಷಿಸಿರುವುದು ಸರಿಯಾಗಿದ್ದರು, ಬಸವಣ್ಣನವರು ವಿಶ್ವದ ಸಮಗ್ರ ನಾಯಕ ಎಂದು ಹೇಳಿದರು.
ಬಸವಾದಿ ಶರಣರ ವಚನಗಳು ಷಟ್ಸ್ತಲಗಳ ಆಧಾರದ ಮೇಲೆ ರಚಿತವಾಗಿವೆ ಎಂಬ ಅಭಿಪ್ರಾಯ ಇದೆ. ಆದರೆ ನಮ್ಮ ಅಭಿಪ್ರಾಯದಲ್ಲಿ ಶರಣರ ಎಲ್ಲಾ ವಚನಗಳು ಜನ ಸಾಮಾನ್ಯರ ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ, ರಾಜಕೀಯ, ಕಾಯಕದ ಅನುಭವದಲ್ಲಿ ರಚಿತವಾಗಿವೆ ಎಂಬುದಕ್ಕೆ ವಚನಗಳಲ್ಲಿಯೇ ಉತ್ತರವಿದೆ ಎಂದರು.

ನಮ್ಮನ್ನು ಭಕ್ತಿಪೂರ್ವಕವಾಗಿ ಬರಮಾಡಿಕೊಂಡ ಮಹಿಳೆಯರು ಆರತಿ ಬೆಳಗಿ ಸಂಪ್ರದಾಯ ಮೆರೆದರು. ನಮ್ಮ ಮಹಿಳೆಯರು ಆರತಿಯನ್ನು ಬೆಳಗುವುದರ ಜೊತೆ ಸಂದರ್ಭ ಬಂದರೆ ಒನಕೆ ಓಬವ್ವ, ಕಿತ್ತೂರ ಚೆನ್ನಮ್ಮ ನಂತೆ ಹೋರಾಡ ಬಲ್ಲರು ಎಂದು ಮಹಿಳಾ ಶಕ್ತಿಯನ್ನು ಅರ್ಥೈಸಿದರು.
ಎದೆಯ ಮೇಲೆ ಲಿಂಗ ಇರದಿದ್ದರೂ ಎಲ್ಲರ ಕೈಯಲ್ಲೂ ಈಗ ಮೊಬೈಲ್ ಇದ್ದೇ ಇದೆ. ನಾವು ಬಹು ಶ್ರಮವಹಿಸಿ ಹೊರ ತಂದಿರುವ ಶಿವ ಶರಣರ ವಚನ ಸಂಪುಟವು ಎಲ್ಲರ ಮೊಬೈಲ್​ಗಳಲ್ಲಿ ಲಭ್ಯವಿದೆ. ಹಲವಾರು ಭಾಷೆಗಳಲ್ಲಿ ತರ್ಜುಮೆಗೊಂಡ ಶರಣರ 22 ಸಾವಿರ ವಚನಗಳು ವಿವಿಧ ಭಾಷೆಗಳಲ್ಲಿ ಲಭ್ಯವಿದ್ದು ವಿದೇಶಗಳಲ್ಲಿ ಇರುವ ನಿಮಗೆ ನಿಮ್ಮ ಮಕ್ಕಳಿಗೆ ಅನುಕೂಲವಾಗಿದೆ ಈ ಆ್ಯಪ್​ ಮೂಲಕ ವಚನ ಪಠಣ ಮಾಡುವಂತೆ ತಿಳಿಸಿದರು.

ಅಲ್ಲಮ ಪ್ರಭುಗಳು ವಚನ ಉಲ್ಲೇಖಿಸಿದ ಪೂಜ್ಯರು ದೇವರು ಬ್ರಹ್ಮಾಂಡದ ಒಳ ಒರೆಗೆ ಇದ್ದಾನೆ ಎಂಬುದನ್ನು ಇದ್ದಲ್ಲಿಯೇ ಒಳಗಣ್ಣಿನಿಂದ ಕಂಡುಕೊಳ್ಳಲು ಬಸವಣ್ಣನವರು ಇಷ್ಟ ಲಿಂಗ ಕರುಣಿಸಿದರು. ದೇವರನ್ನು ದರ್ಶಿಸುವ ದರ್ಶಕವೇ ಲಿಂಗವಾಗಿದೆ. ಬಸವಣ್ಣನವರ ಹೃದಯವು ಶರಣರ ಸಂಘಕ್ಕೆ ಸದಾ ಮಿಡಿಯುತ್ತಿತ್ತು. ಈ ಜಗತ್ತಿನಲ್ಲಿ ಅಸಂಖ್ಯಾತ ಜನರು ಮರೆಯಾಗಿದ್ದಾರೆ. ಆದರೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿದರು ಮಾತ್ರ ಪ್ರಾತಃ ಸ್ಮರಣೀಯರಾಗಿದ್ದಾರೆ. ಅದರಲ್ಲಿ ಬಸವಣ್ಣನವರು ಮನುಕುಲ ಜಗತ್ತಿನ ಉದ್ಧಾರಕ್ಕೆ ಉದಯಿಸಿದ ಯುಗ ಪ್ರವರ್ತಕರು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಶಾಂತವೀರ ಮುರುಘರಾಜೇಂದ್ರ ಸ್ವಾಮಿಗಳು, ಖಾಸ ಮಠ ಗುರುಮಠಕಲ್, ಆಶೀರ್ವಚನ ನೀಡಿದರು. ದುಬೈ ಕೌನ್ಸಿಲ್​ನ ಸತೀಶ್ ಶಿವನ್, ನಿವೃತ್ತ ಐಎಎಸ್ ಅಧಿಕಾರಿ, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಸೋಮಶೇಖರ್, ಖ್ಯಾತ ಚಲನ ಚಿತ್ರ ನಟ ಶ್ರೀ ದೊಡ್ಡಣ್ಣ, ಯುಎಇ ಬಸವ ಸಮಿತಿ ಅಧ್ಯಕ್ಷ ಡಾ. ಬಸವರಾಜ ಹೊಂಗಲ, ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ದುಬೈ ಬಸವಾಭಿಮಾನಿಗಳ ಮಕ್ಕಳಿಂದ ವಚನ ನೃತ್ಯ, ಭಕ್ತಿ ಗೀತೆಗಳ ರೂಪಕಗಳು ಜನಮನ ರಂಜಿಸಿದವು.
ಸಿಎಂ ಕೇಜ್ರಿವಾಲ್ ವಿರುದ್ಧ ದೆಹಲಿ ನ್ಯಾಯಾಲಯಕ್ಕೆ ಇಡಿ ಮೊರೆ, ನ್ಯಾಯಾಂಗ ಬಂಧನ ವಿಸ್ತರಿಸುವಂತೆ ಕೋರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 13 =
Remember me
