ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಶ್ರೀತರಳಬಾಳು ಜಗದ್ಗುರು ಶಾಖಾಮಠ, ಸಾಣೇಹಳ್ಳಿಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟ. ಕರ್ನಾಟಕ ಎನ್ನುತ್ತಲೇ ನೆನಪಾಗುವುದು 12ನೇ ಶತಮಾನದ ಕಲ್ಯಾಣ. ಕಲ್ಯಾಣ ಒಂದು ಸ್ಥಳವಾಚಕ ಪದವಾಗಿರುವಂತೆ ಧರ್ಮ, ಸಾಹಿತ್ಯ, ರಾಜಕೀಯ ಹಾಗೂ ಸಂಸ್ಕೃತಿಯ ಸಂಕೇತವೂ ಹೌದು. ಅದು ಇಂದು ಬಸವಕಲ್ಯಾಣ ಎಂದೇ ಪ್ರಖ್ಯಾತವಾಗಿದೆ. ವೈವಿಧ್ಯತೆಯಲ್ಲೇ ಏಕತೆಯನ್ನು ಕಾಯ್ದುಕೊಂಡ ಪ್ರದೇಶ ಕಲ್ಯಾಣ. ಕ್ರಾಂತಿಗೆ ಕಾರಣವಾದದ್ದು ಕಲ್ಯಾಣ. ಸಮಸಮಾಜ ನೆಲೆಗೊಂಡದ್ದು ಕಲ್ಯಾಣದಲ್ಲಿ. ಆರ್ಥಿಕ ಸ್ವಾಯತ್ತತೆ ತಂದುಕೊಟ್ಟದ್ದು ಕಲ್ಯಾಣ. ಈ ಎಲ್ಲ ಪರಿವರ್ತನೆಗೆ ಕಾರಣರಾದವರು ಬಸವಾದಿ ಶಿವಶರಣರು. ಹಾಗಾಗಿ ಬಸವಕಲ್ಯಾಣ ಕ್ಷೇತ್ರಕ್ಕೆ ಚಾರಿತ್ರಿಕ, ಧಾರ್ವಿುಕ, ರಾಜಕೀಯ ಮತ್ತು ಸಾಂಸ್ಕೃತಿಕ ಮಹತ್ವ ಇದೆ. ಮಾನವೀಯ ನೆಲೆಯಲ್ಲಿ ಸಕಲ ಜೀವಾತ್ಮರ ಒಳಿತು ಬಯಸುವ ಕಾರ್ಯ ಅಂದು ಕಲ್ಯಾಣದಲ್ಲಿ ನಡೆದದ್ದು ಐತಿಹಾಸಿಕ ಸತ್ಯ.
ಬಸವಾದಿ ಶಿವಶರಣರು ಕಾಯಕ, ದಾಸೋಹ ತತ್ವಗಳ ಮೂಲಕ ಆರ್ಥಿಕ, ಸಾಮಾಜಿಕ, ನೈತಿಕ ಸಮಾನತೆಯನ್ನು ಎತ್ತಿಹಿಡಿದರು. ಮಹಾಮನೆ, ಅನುಭವ ಮಂಟಪದ ಮೂಲಕ ಮಾನವರೆಲ್ಲ ಒಂದೇ ಎಂದು ಸಾರಿದರು. ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ, ನುಲಿಯ ಚಂದಯ್ಯ, ಸಮಗಾರ ಹರಳಯ್ಯ, ಹಡಪದ ಅಪ್ಪಣ್ಣ, ಸೂಳೆ ಸಂಕವ್ವೆ, ಕಸಗುಡಿಸುವ ಸತ್ಯಕ್ಕ, ಕಾಳವ್ವೆ, ಅಕ್ಕಮ್ಮ, ಲಿಂಗಮ್ಮ ಇಂಥ ತಳಸಮುದಾಯದ ಸ್ತ್ರೀ-ಪುರುಷರ ಮೂಲಕವೇ ಸಮಾಜದಲ್ಲಿ ಪರಿವರ್ತನೆಯ ತಂಗಾಳಿ ಬೀಸುವಂತೆ ಮಾಡಿದರು. ಈ ಪರಿವರ್ತನೆಯ ನಾಯಕರಾಗಿದ್ದವರು ಅಣ್ಣ ಬಸವಣ್ಣ. ಅವರು ಇವನಾರವ ಇವನಾರವ ಎನ್ನದೆ ಎಲ್ಲರನ್ನೂ ಕರುಳಬಳ್ಳಿಯ ಸಂಬಂಧದ ಮೂಲಕ ಸಮಾನತೆಯ ತತ್ವವನ್ನು ಜಾರಿಯಲ್ಲಿ ತಂದರು. ಮೇಲು-ಕೀಳು, ಸ್ಪ ೃ್ಯ-ಅಸ್ಪ ೃ್ಯ, ಬಡವ-ಶ್ರೀಮಂತ, ಸ್ತ್ರೀ-ಪುರುಷ ಎನ್ನುವ ಭಿನ್ನತೆಯನ್ನು ತೊಲಗಿಸಿ ಮಾನವ ಮಾತ್ರರೆಲ್ಲರೂ ಒಂದು ಎಂದು ಮನುಷ್ಯತ್ವಕ್ಕೆ ಗೌರವ ತಂದುಕೊಟ್ಟವರು ಬಸವಣ್ಣ.
ಬಸವಣ್ಣ ಬಿಜ್ಜಳನ ರಾಜ್ಯದಲ್ಲಿ ಅರ್ಥಸಚಿವರಾಗಿ ಶೋಷಣಾರಹಿತ ಸಮಸಮಾಜದ ಕನಸನ್ನು ಕಂಡು ಅದನ್ನು ತಮ್ಮ ಆಡಳಿತದ ಅವಧಿಯಲ್ಲೇ ನನಸು ಮಾಡಿದರು. ಕಾಯಕದಿಂದ ಬಂದ ಸಂಪಾದನೆಯಲ್ಲಿ ಕೆಲವು ಭಾಗವನ್ನು ಸಮಾಜದ ಸತ್ಕಾರ್ಯಗಳಿಗೆ ವಿನಿಯೋಗಿಸಬೇಕು ಎನ್ನುವ ದಾಸೋಹ ತತ್ವವನ್ನು ಕಾಯಕ ತತ್ವಕ್ಕೆ ಜೋಡಿಸಿದರು. ಕಾಯಕ-ದಾಸೋಹ ತತ್ವ, ಜಾತ್ಯತೀತ ಮನೋಭಾವ, ಸ್ತ್ರೀ ಸಮಾನತೆ ಎತ್ತಿಹಿಡಿದದ್ದು, ಸ್ಥಾವರ ದೇವಾಲಯ ನಿರಾಕರಿಸಿ ದೇಹವೇ ದೇವಾಲಯ ಆಗಬೇಕೆಂದು ಇಷ್ಟಲಿಂಗವನ್ನು ಕರುಣಿಸಿದ್ದು ಹೀಗೆ ಆರ್ಥಿಕ, ಧಾರ್ವಿುಕ, ನೈತಿಕ ಸಮಾನತೆಯನ್ನು ಎತ್ತಿಹಿಡಿದವರು ಬಸವಣ್ಣ. ಇಂಥ ಅನೇಕ ಪ್ರಗತಿಪರ ತತ್ವ ಸಿದ್ಧಾಂತಗಳನ್ನು ಜನಮನದಲ್ಲಿ ಬಿತ್ತಿ ಹುಲುಸಾದ ಬೆಳೆ ಪಡೆದ ಕಾರಣದಿಂದ ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕರು.
ಬಸವಣ್ಣನವರ ಜನಪರ, ಜೀವಪರ ಹೋರಾಟದ ಫಲವಾಗಿ ಆತ್ಮಕಲ್ಯಾಣ, ಲೋಕಕಲ್ಯಾಣ ಏಕಕಾಲಕ್ಕೆ ಸಾಧಿತವಾಯ್ತು. ಈ ನೆಲೆಯಲ್ಲಿ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೊಷಿಸಬೇಕೆಂದು ನಮ್ಮನ್ನೂ ಒಳಗೊಂಡಂತೆ ಹಲವು ಮಠಾಧೀಶರು, ಪ್ರಗತಿಪರರು, ಬಸವತತ್ವಪ್ರೇಮಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ 2024 ಜನವರಿ 8ರಂದು ಖುದ್ದಾಗಿ ಮನವಿ ಸಲ್ಲಿಸಿದ್ದು ಗಮನಾರ್ಹ. ಮುಖ್ಯಮಂತ್ರಿಗಳು ಜನವರಿ 18ರಂದು ಮಂತ್ರಿಮಂಡಳದ ಸಭೆಯಲ್ಲಿ ಈ ವಿಷಯವನ್ನು ರ್ಚಚಿಸಿ ಸರ್ವಾನುಮತದಿಂದ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೊಷಣೆ ಮಾಡಿದ್ದು ಕನ್ನಡ ನಾಡಿನ ಪ್ರತಿಯೊಬ್ಬರಿಗೂ ಹೆಮ್ಮೆಯ ವಿಷಯ.
ಬಸವಣ್ಣ ವಚನ ಸಾಹಿತ್ಯದ ಮೂಲಕ ಕನ್ನಡ ಭಾಷೆಯನ್ನು ದೇವಭಾಷೆಯ ಎತ್ತರಕ್ಕೇರಿಸಿದರು. ಲಿಂಗಾಯತ ಧರ್ಮದ ದ್ರಷ್ಟಾರರಾದವರು. ಇಷ್ಟಲಿಂಗ ಜನಕ ಎಂದು ಪ್ರಖ್ಯಾತರಾದವರು. ಒಬ್ಬ ಜನಪ್ರತಿನಿಧಿ ಹೇಗೆ ಇರಬೇಕು ಎನ್ನುವುದಕ್ಕೆ ಅವರೇ ಮಾದರಿಯಾಗಿದ್ದರು. ಅವರು ಅಪ್ಪಟ ಕನ್ನಡ ಧರ್ಮವನ್ನು ಪ್ರತಿಪಾದಿಸಿದರು. ವಿಶ್ವಸಾಹಿತ್ಯಕ್ಕೆ ವಚನ ಸಾಹಿತ್ಯದ ಮಹತ್ವವನ್ನು ಮನಗಾಣಿಸಿದರು. ಏನೆಲ್ಲ ಸಾಧನೆ ಮಾಡಿದ್ದರೂ ‘ಎನಗಿಂತ ಕಿರಿಯರಿಲ್ಲ, ಶಿವಶರಣರಿಗಿಂತ ಹಿರಿಯರಿಲ್ಲ’ ಎನ್ನುವ ಅವರು ತಾವೆಂದೂ ನಾಯಕ ಎಂದುಕೊಂಡವರಲ್ಲ. ಅವರ ವಿನಯ, ತತ್ವನಿಷ್ಠೆ, ಸಮಸಮಾಜದ ನಿರ್ವಣ, ಎಲ್ಲರೊಳಗೆ ತಾನೊಬ್ಬ ಎನ್ನುವ ಅಹಂಕಾರ ನಿರಶನ ಇತ್ಯಾದಿ ಸಾಂಸ್ಕೃತಿಕ ಗುಣಗಳಿಂದಾಗಿ ಎಲ್ಲರನ್ನೂ ಒಳಗೊಳ್ಳುವ ಮೂಲಕ ಅಂದೇ ಸಾಂಸ್ಕೃತಿಕ ನಾಯಕರಾಗಿದ್ದು ಗಮನಾರ್ಹ. ಇದಕ್ಕೆ ಸರ್ಕಾರ ಅಂಗೀಕಾರದ ಮುದ್ರೆಯೊತ್ತುವ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಅವರ ಸಚಿವ ಸಂಪುಟದವರು ಜನಮನ್ನಣೆಗೆ ಅರ್ಹರಾಗಿದ್ದಾರೆ.
ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೊಷಣೆ ಮಾಡಿದರೆ ಸಾಲದು. ಬಸವ ಸಂಸ್ಕೃತಿಯನ್ನು ಜನಮನಕ್ಕೆ ಮುಟ್ಟಿಸಿ ಅವರಲ್ಲಿ ಬಸವ ಪ್ರಜ್ಞೆ ಬೆಳೆಸುವ ವಿಧಾಯಕ ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಳ್ಳಬೇಕಿದೆ. ವಚನ ಸಾಹಿತ್ಯದ ಪ್ರಸಾರ, ಭಾಷಾಂತರ, ವಚನ ಚಳವಳಿಗೆ ಕಾರಣರಾದ ಶರಣ-ಶರಣೆಯರ ಕ್ಷೇತ್ರಗಳ ಸಂರಕ್ಷಣೆ ಆಗಬೇಕಿದೆ. ವಚನ ಸಾಹಿತ್ಯ ಪ್ರತಿಪಾದಿಸುವ ಮೌಲ್ಯಗಳ ಕುರಿತಂತೆ ಪುಸ್ತಕ ಪ್ರಕಟಣೆ, ವಿಚಾರಗೋಷ್ಠಿ, ತರಬೇತಿ, ನಾಟಕ, ನೃತ್ಯ, ಸಂಗೀತ ನಿರಂತರವಾಗಿ ನಡೆಯಬೇಕು. ಮುಖ್ಯವಾಗಿ ಪಠ್ಯದಲ್ಲಿ ಅಳವಡಿಸುವ ಕಾರ್ಯವೂ ನಡೆಯಬೇಕು. ಇದಕ್ಕಾಗಿ ‘ಬಸವ ಸಾಂಸ್ಕೃತಿಕ ನಾಯಕ ನಿಗಮ’ ಮಾಡಬೇಕು. ಈ ನಿಗಮದಲ್ಲಿ ಬಸವತತ್ವ ನಿಷ್ಠರನ್ನೇ ಸದಸ್ಯರು ಮತ್ತು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು. ಇದಕ್ಕಾಗಿ ಸಾಕಷ್ಟು ಮೂಲಧನವನ್ನು ಸಹ ನೀಡಬೇಕು. ಜೊತೆಗೆ ವಚನ ವಿಶ್ವವಿದ್ಯಾಲಯ ಪ್ರಾರಂಭವಾಗಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ದೃಢವಾದ ಹೆಜ್ಜೆಗಳನ್ನಿಡಬೇಕಿದೆ.
ಪಾಕಿಸ್ತಾನ ದ್ವೇಷಿಸುವುದು ನನ್ನ ರಕ್ತದಲ್ಲೇ ಇದೆ; ಸಾವಿರ ಬಾರಿ ಜೈ ಶ್ರೀರಾಮ್​ ಹೇಳೋಕ್ಕೂ ಸಿದ್ಧ ಎಂದ ಶಮಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
