ವಚನ ಸಾಹಿತ್ಯದ ಮುಕುಟ ಮಣಿ, ಭಕ್ತಿ ಭಂಡಾರಿ ಬಸವಣ್ಣನವರ ಜಯಂತಿ ಇಂದು. ಬಸವಣ್ಣ ಓರ್ವ ಶ್ರೇಷ್ಠ ದಾರ್ಶನಿಕ, ಮಹಾ ತತ್ವಜ್ಞಾನಿ, ಪ್ರಾಮಾಣಿಕ ರಾಜಕಾರಣಿ, ಕವಿ-ಸಾಹಿತಿ, ಮಹೋನ್ನತ ವಿದ್ವಾಂಸ, ಸಹೃದಯ ಸಮಾಜ ಸುಧಾರಕ. ಅವರ ತತ್ವ ಸಂದೇಶಗಳು ನಿತ್ಯಪ್ರಸ್ತುತ. ಅವರ ಬಹುಮುಖ ವ್ಯಕ್ತಿತ್ವದ ಕುರಿತು ಶಿವಗಂಗೆ ಮೇಲಣಗವಿ ವೀರಸಿಂಹಾಸನ ಮಠದಶ್ರೀ ಡಾ. ಮಲಯಶಾಂತಮುನಿ ಶಿವಾಚಾರ್ಯ ಸ್ವಾಮಿಗಳುನೀಡಿರುವ ಲೇಖನ ಇಲ್ಲಿದೆ.
ಶರಣ ಸಮೂಹದಲ್ಲಿ ಬಸವಣ್ಣನವರಲ್ಲಿ ಕಾಣುವ ಅತಿ ಮುಖ್ಯ ಭಾವನೆಯೇ ದಾಸೋಹ ಭಾವನೆ ಹಾಗೂ ಸ್ತಿತಪ್ರಗ್ನ್ಯ ಮನಸ್ತಿತಿ.. ದಾಸೋಹಂ ಎಂದರೆ ನಾನು ದಾಸನಾಗಿದ್ದೇನೆ ಎಂಬ ಕಿಂಕರ ಭಾವನೆಯಿಂದ ಮಾಡುವ ಯಾವದೇ ಕಾರ್ಯಗಳು ದಾಸೋಹ ಎನಿಸಿಕೊಳ್ಳುತ್ತವೆ. ಬಸವಣ್ಣ ತಮ್ಮ ಜೀವನುದ್ದಕ್ಕೂ ಚಾಚೂ ತಪ್ಪದೇ ಪಾಲಿಸಿಕೊಂಡು ಬಂದ ವಿಶಿಶ್ಟ ಗುಣವೇ ವಿನೀತ ಭಾವ. ಎನಗಿಂತ ಕಿರಿಯರಿಲ್ಲ ಎನ್ನುವ ಮೂಲಕ ಎಲ್ಲರೂ ತನಗಿಂತ ದೊಡ್ಡವರೆಂಬ ಭಾವದಿಂದ ನಡೆದು ಕೊಳ್ಳುವದು. ಅವರ ಗುಣ ಸಾಮಾಜಿಕ ಧ್ಯೇಯ ಧೋರಣೆಯನ್ನು ನೋಡಿ ಇಡೀ ಸಮಾಜವೇ ಅವರ ಬೆನ್ನಹಿಂದೆ ಬೆಂಬಲವಾಗಿ ನಿಂತರೂ ಈ ಎಲ್ಲ ಸಮುದಾಯದ ನಾಯಕನೆಂಬ ಅಹಮಿಕೆಯನ್ನು ತಂದುಕೊಳ್ಳಲಿಲ್ಲ. ಬಸವಣ್ಣ ಕಿಂಕರ ಭಾವದ ಸಾಕಾರರೂಪವಾಗಿದ್ದ. ಅವರ ಗುಣಾದರ್ಶವು ಇಡೀ ಚಳುವಳಿಗೆ ಸಮಸ್ತರೂ ಮಾರುಹೋಗಿ ಬೆಂಬಲವಾಗಿ ನಿಲ್ಲಲು ಕಾರಣವಾಯಿತು. ಅನುಭವ ಮಂಟಪ ಅಧಿಪತಿಯಾಗಿ ಅಲ್ಲಮರನ್ನು ನಿಯಮಿಸಿದ ಬಸವಣ್ಣ ತಾನು ಮಾತ್ರ ಭಕ್ತರ ಭಕ್ತನಾಗಿ ಚಲುವಳಿಯನ್ನು ಮುಂದುವರೆಸಿದ ಮಹಾನುಭಾವ. ಅಂತೆಯೇ ಪಂಚ ಆಚಾರಗಳಲ್ಲೊಂದಾದ ಬೃತ್ಯಾಚಾರಕ್ಕೆ ಬಸವಾಚಾರ ಎಂಬುದಾಗಿ ಕರೆಯಲಾಗಿದೆ. ಅವರು ಎನಗಿಂತ ಕಿರಿಯರಿಲ್ಲ ಎಂದುಕೊಂಡರೂ ಜಗತ್ತು ಮಾತ್ರ ಬಸವಣ್ಣನಿಗಿಂತ ಅಧಿಕರಿಲ್ಲ ಎಂದು ಭಾವಿಸಿ ಗೌರವಿಸಿತು. ದೇವರಿಗೆ ಭಕ್ತರಾಗುವವರು ಅಸಂಖ್ಯಾತರಿರಬಹುದು. ಭಕ್ತರಿಗೂ ಭಕ್ತನಾಗಿ ನಡೆದುಕೊಂಡ ಅಪರೂಪದ ವ್ಯಕ್ತಿತ್ವ ಬಸವಣ್ಣನವರದು.
ಮರನನೆಳಲಿದ್ದು ತನ್ನ ನೆಳನರಸಬಹುದೇ ?ನಿಮ್ಮ ಶರಣರ ಮೊಂದೆ ನಾನೇತರ ಭಕ್ತನಯ್ಯ?ನಿಮ್ಮ ಶರಣರಮುಂದೆ ನಾನೇತರ ಯುಕ್ತನಯ್ಯ?ಆನು ಭಕ್ತನೆಂಬ ನುಡಿ ಸುಡದೇ ಕೂಡಲಸಂಗಮ ದೇವಾ?
ಇಂತಹ ವಚನಗಳಲ್ಲಿ ಅವರ ವಿನೀತಭಾವ ಎದ್ದು ಕಾಣುತ್ತದೆ. ಇಲ್ಲಿ ನಾನು ಎನ್ನುವವ ಭವಿ, ಅವನು ಎನ್ನುವವ ಭಕ್ತ. ನನ್ನದು ಎನ್ನುವವ ಭವಿ, ಅವನದು ಎನ್ನುವವ ಭಕ್ತ. ಪ್ರಪಂಚದಲ್ಲಿ ಹಲವಾರು ಜಾತಿಮಅ ಪಂಥಗಳಿರಬಹುದು. ಆದರೆ ಬಸವಣ್ಣ ನವರಲ್ಲಿ ಇರುವುದು ಎರಡೇ ಜಾತಿ. ಅದು ಒಂದು ಭವಿ , ಇನ್ನೊಂದು ಭಕ್ತ. ಬಸವಣ್ಣನವರ ನಡೆ ನುಡಿಗಳು ಧರ್ಮಾಚರಣೆಗಳಿಗೆ ಹೊಸ ಭಾಷ್ಯೆ ಬರೆದಂದ್ದವು. ಜನತೆ ಬಸವಣ್ಣನವರಿಗೆ ಮಾರು ಹೋಗಿ ಅವರನ್ನು ಬೆಂಬಲಿಸಿ ಶರಣ ಚಳುವಳಿಯನ್ನು ಮುಂದುವರೆಸಿದ್ದು ಅವರ ಈ ನಿಸ್ವಾರ್ಥ ಮನೋಭಾವನೆಯಿಂದ. ಕನಸು ಮನಸಿನಲ್ಲಿಯೂ ಕಿಂಚಿತ್ತೂ ಅಹಮಿಕೆಯನ್ನು ತಂದುಕೊಳ್ಳದೇ ನಡೆದುಕೊಂಡದ್ದು ಅವರ ವ್ಯಕ್ತಿತ್ವ ಹೆಗ್ಗುರುತು. ಎನಗಿಂತ ಕಿರಿಯರಿಲ್ಲ ಎಂಬುದು ದೊಡ್ಡವರಗುಣ, ನಾನೇ ದೊಡ್ಡವ ಎನ್ನುವವ ಅತೀ ಸಣ್ಣವ. ಹಿರಿತನನ ಎಂಬುದು ಗುಣದಲ್ಲಿ,ಹೃದಯ ವೈಶಾಲ್ಯತೆಯಿಂದ ಕೂಡಿದ ನಡೆ ನುಡಿಯಲ್ಲಿರಬೇಕೆ ವಿನಹ ಕೇವಲ ಬಾಯಿ ಮಾತಿನಲ್ಲಲ್ಲ.
ಮುಖಂಡರೆನಿಸುವ ಯಾರಿಗೇಯಾಗಲಿ ಬಸವಣ್ಣನವರ ಜೀವನ ರೀತಿ ಆದರ್ಶವಾದುದು. ವ್ಯಕ್ತಿಯ ಅಹಂಕಾರದಿಂದ ಅವನ ಕ್ರಿಯಾಶೀಲತೆ ಉಡುಗಿಹೋಗುತ್ತದೆ. ಸಾಧನೆಯ ಯಾತ್ರೆ ಕುಂಠಿತವಾಗುತ್ತದೆ. ಅಹಂಕಾರವನ್ನು ದೂರವಿಟ್ಟು ಸಾಧನೆ ಮಾಡುವವರು ಸದಾ ಕ್ರಿಯಾ ಶೀಲರಾಗಿ ಮೊಂದುವರೆಯುತ್ತಾರೆ. ಬಸವಣ್ಣ ಬಾನಿನೆತ್ತರಕ್ಕೆ ಬೆಳಿದರೂ ಕಿಂಕರ ಭಾವವನ್ನು ಬಿಟ್ಟು ನಡೆಯಲಿಲ್ಲ. ಸದಾ ಜನಸೇವಕರಾಗಿಯೇ ತಮ್ಮನ್ನು ಗುರುತಿಸಿಕೊಂಡರೇ ವಿನಃ ನಾಯಕರಾಗಿ ಬೀಗಲಿಲ್ಲ. ಗುರು, ಲಿಂಗ, ಜಂಗಮರ ಸೇವೆಗಾಗಿಯೇ ತಮ್ಮ ಬದುಕನ್ನು ಮುಡುಪಾಗಿಟ್ಟ ಬಸವಣ್ಣ ಸಾಧನೆಯ ಶಿಖರಾರೋಹಿಗಳಾದರು. ಮಂತ್ರಿ ಪದವಿಯಲ್ಲಿಯೇ ಇರಲಿ, ಅನುಭವ ಮಂಟಪದಲ್ಲಿಯೇ ಇರಲಿ ಅವರವಿನೀತ ಭಾವ ಕಿಂಚಿತ್ತೂ ಕಡಿಮೆಯಾಗಲಿಲ್ಲ. ಕೀಂಕರತ್ವವೇ ಶಂಕರತ್ವ ಎಂಬುದನ್ನು ಅರಿತು ನಡೆದವರು ಬಸವಣ್ಣನವರು. ಸದಾ ಮೇಲಿದ್ದವರಿಗೆ ಕೆಳಗೆ ಬೀಳುವ ಭಯವಿರುತ್ತದೆ, ಸಾಂಸಾರಿಕ ಬದುಕಿನಲ್ಲಾಗಲಿ ಸನ್ಯಾಸ ಬದುಕಿನಲ್ಲಾಗಲಿ ಸಮಾಧಾನ ಚಿತ್ತರಾಗಿ ಬಾಳಿ ಸಾರ್ಥಕ ಬದುಕು ನಡೆಸಬೇಕೆನ್ನುವ ಯಾರಿಗೇ ಯಾಗಲಿ ಬಸವಣ್ಣನವರ ಇಂತಹ ಮನಸ್ತಿತಿ ಅತ್ಯಗತ್ಯ. ಬಸವಣ್‌ಣ್ಣ ಕೇವಲ ಧರ್ಮದ ದಾರಿಯನ್ನು ಮಾತ್ರವಲ್ಲ ಬದಲಿಗೆ ಶಾಂತಿ ಸಮಾಧಾನದ ಬದುಇನ ದಾರಿಯನ್ನೂ ತೋರಿದ ಮಹಾನುಭಾವ. ಅವರ ಸ್ತಿತಪ್ರಗ್ನಸ್ತಿ ಪ್ರತಿಯೊಬ್ಬರಿಗೂ ಅತ್ಯಗತ್ಯ.
ಬಸವ ಬಾರೈ, ಮರ್ತ್ಯಲೋಕದೊಳಗೆ ಭಕ್ತರುಂಟೆ? ಹೇಳಯ್ಯ;ಮತ್ತಾರೂ ಇಲ್ಲಯ್ಯ ಮತ್ತಾರೂ ಇಲ್ಲಾಯ್ಯ ಮತ್ತಾರೂ ಇಲ್ಲಾಯ್ಯನಾನೊಬ್ಬನೇ ಭಕ್ತನು, ಮರ್ತ್ಯಲೋಕದೊಳಗಣ ಭಕ್ತರೆಲ್ಲರೂಜಂಗಮಲಿಂಗ, ನೀನೆ ಅಯ್ಯ ಕೂಡಲ ಸಂಗಮದೇವಾ
ಸಭೆಯಲ್ಲಿ ನಿಜವಾದ ಭಕ್ತರಾರು ಎಂಬ ಪ್ರಶ್ನೆಗ ಬಸವಣ್ಣನಿಂದ ಬಂದ ಉತ್ತರ ನಾನೊಬ್ಬನೆ ಎಂಬುದಾಗಿತ್ತು. ವಿನೀತ ಭಾವನೆಗೆ ಹೆಸರಾದ ಬಸವಣ್ಣ ಈರೀತಿ ಹೇಳಿದ್ದು ಎಲ್ಲರಿಗೂ ಅಚ್ಚರಿ. ಕೊನೆಗೆ ಬಸವಣ್ಣ ಹೇಳಿದ್ದು ಎಲ್ಲರೂ ಶಿವ ಸ್ವರೂಪಿಗಳು ನಾನೊಬ್ಬ ಅವರ ಭಕ್ತಎಂದು. ಮೇಲಾಗಿರಿಸಿಕೊಳ್ಳಲು ಬಯಸುವ ಈ ಕಾಲದಲ್ಲಿ ಇಡೀ ಜನಮಾನಸವನ್ನೇ ಗೆದ್ದ ಸಂತನೊಬ್ಬ ತನ್ನನ್ನು ತಾನು ಸೇವಕ, ಕಿಂಕರ ಎಂದು ಭಾವಿಸಿ ನಡೆದು ಕೊಳ್ಳುವುದು ನಿಜಕ್ಕೂ ಅಚ್ಚರಿಯೇ ಸರಿ. ಏನಿಲ್ಲದವರು ಹೇಳಬಹುದು, ಆದರೆ ಇಡೀ ಶರಣ ಕ್ರಾಂತಿಯ ಮುಖಂಡರಾಗಿ, ಬಿಜ್ಜಳ ರಾಜನ ಆಸ್ಥಾನದ ಅರ್ಥ ಮಂತ್ರಿಯಾಗಿಯೂ ತಮ್ಮನ್ನು ತಾವು ಸೇವಕ ಎಂದು ಭಾವಿಸುವುದು ಅವರ ಹಿರಿಯ ಗುಣ. ಮಾತ್ರವಲ್ಲ ನಾನು ಕಿರೆಯವ ಎಂದು ಕರೆದು ಕೊಳ್ಳುವಲ್ಲಿಯೇ ಅವರಿಗೆ ಸಂತಸ ಸಂಭ್ರಮ. ಅದರಲ್ಲಿಯೇ ಅವರು ಬದುಕಿನ ಸಾರ್ಥಕತೆಯನ್ನು ಕಂಡರು.ಶರಣು ಎಂದವರಿಗೆ ಪ್ರತಿಯಾಗಿ ಶರಣು ಶರಣು ಎಂದು ಹೇಳಿ ಸದಾ ಬಾಗಿದ ತಲೆ ಮುಗಿದ ಕೈಗಳಿಂದಲೇ ಜಗತ್ತನ್ನು ಪೂಜ್ಯ ಭಾವದಿಂದ ನೋಡಿದ ಬಸವಣ್ಣನವರನ್ನು ಜಗತ್ತು ಕಣ್ಣುತೆರೆಸಲು ಬಂದ ಜಗಜ್ಯೋತಿ ಎಂಬುದಾಗಿ ಗೌರವಿಸಿತು. ಇದು ಇದು ಅವರ ವಿನಂಬ್ರಭಾವಕ್ಕೆ ಸಂದ ಗೌರವ.
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:one + two =
Remember me
