ಬೆಂಗಳೂರು:ಕಾಂಗ್ರೆಸ್ ಮತ್ತು ಎಸ್​ಡಿಪಿಐ ನಡುವಿನ ರಾಜಕೀಯ ವೈಮನಸ್ಯದಿಂದ ಡಿಜೆ ಹಳ್ಳಿ ಗಲಭೆ ನಡೆದಿದೆ ಎಂದು ಗೃಹ ಸಚಿವ ಬಸವರಾಜ್​ ಬೊಮ್ಮಾಯಿ ಅವರು ಹೇಳಿಕೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿ ಪ್ರಕರಣ ಸದ್ಯ ನಿಯಂತ್ರಣದಲ್ಲಿದೆ. ನವೀನ್ ಎಂಬ ಯುವಕ ಒಂದು ಪೋಸ್ಟ್ ಮಾಡಿದ್ದ. ಫಿರೋಜ್ ಪಾಷ ಎಂಬಾತ ರಾತ್ರಿ 7.40 ಕ್ಕೆ ಬಂದು ದೂರು ನೀಡಿದರು. 7.45 ಕ್ಕೆ ದೂರು ದಾಖಲಾಗಿರುತ್ತದೆ. ಎಫ್ಐಆರ್ ದಾಖಲು ಮಾಡಲು ವಿಳಂಬ ಮಾಡಿದರು ಎಂಬುದು ಶುದ್ಧ ಸುಳ್ಳು ಎಂದರು.
ಇದನ್ನೂ ಓದಿ:ಡಿಜೆ ಹಳ್ಳಿ ಗಲಭೆಕೋರರಿಗೆ ಸರ್ಕಾರದ ಸೌಲಭ್ಯ ಕೊಡದಿರಲು ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ಆಗ್ರಹ
ಸುಮಾರು 9 ಗಂಟೆಯೊಳಗೆ ಠಾಣೆಯ ಬಳಿ ಜಮಾಯಿಸಿದ ಜನರಿಗೆ ಪ್ರಕರಣ ದಾಖಲಾಗಿರುವ ಬಗ್ಗೆ ಪೊಲೀಸರು ತಿಳಿಸಿದರು. ಆದರೆ, ಅವರು ಆರೋಪಿಯನ್ನು ನಮಗೆ ಒಪ್ಪಿಸಿ ಎಂದು ಕೇಳಿದರು. ಅದು ಸಾಧ್ಯವಿಲ್ಲ ಎಂದು ಪೋಲಿಸರು ಹೇಳಿದರು. ಆ ನಂತರವೂ ಅಲ್ಲಿ ಜನ ಸೇರುತ್ತಿದ್ದರು. ಬಳಿಕ ಗಲಭೆ ಉಂಟು ಮಾಡಿದರು. ಈ ಹಿಂದಿನ ಕೆಲ ರಾಜಕೀಯ ಘಟನೆ ಹಿನ್ನೆಲೆ ಗಲಭೆ ನಡೆದಿದೆ. ಇದರಲ್ಲಿ ಎಸ್​​ಡಿಪಿಐ ಕೈವಾಡವು ಇದೆ ಎಂದು ಬೊಮ್ಮಾಯಿ ತಿಳಿಸಿದರು.
ಪ್ರಕರಣದಲ್ಲಿ ಯಾವೆಲ್ಲಾ ರಾಜಕಾರಣಿಗಳ ಪಾತ್ರ ಇದೆ ಎಂಬ ಬಗ್ಗೆ ಪೋಲಿಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ಬಳಿಕ ಎಲ್ಲಾ ಗೊತ್ತಾಗಲಿದೆ. ಕೆಜೆ ಹಳ್ಳಿ ಹಾಗೂ ಡಿಜೆ ಹಳ್ಳಿ ವ್ಯಾಪ್ತಿಯಲ್ಲಿ ಪರಿಸ್ಥಿತಿ ಶಾಂತವಾಗಿದೆ. ಈಗಾಗಲೇ ಅಲ್ಲಿ ಸಾಕಷ್ಟು ಭದ್ರತೆ ಇದೆ. ಆಗಸ್ಟ್​ 15ರವರಗೆ ಕರ್ಪ್ಯೂ ವಿಸ್ತರಣೆ ಆಗಲಿದೆ. ರಾಜಕೀಯ ಭಿನ್ನಾಭಿಪ್ರಾಯ ಜೊತೆಗೆ ಎಸ್​ಡಿಪಿಐನ ಕಾನೂನು ಹದಗೆಡಿಸುವ ಪಾತ್ರ ಕೂಡ ಸೇರಿದೆ. ತನಿಖೆ ಮುಂದುವರಿದಿದೆ. ಈಗಾಗಲೇ 206 ಮಂದಿ ಬಂಧನವಾಗಿದೆ. ಕೆಲವರು ಬಳ್ಳಾರಿ ಜೈಲಿನಲ್ಲಿದ್ದಾರೆ. ಕಾರ್ಯಾಚರಣೆ ಮುಂದುವರಿಯಲಿದೆ. ಸಮಾಜ ವಿರೋಧಿ ಚಟುವಟಿಕೆಗೆ ಎಲ್ಲಾ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಕಾಂಗ್ರೆಸ್ ಮುಖಂಡನೇ ಡಿಜೆ ಹಳ್ಳಿ ಗಲಭೆಯ ಕಿಂಗ್​ಪಿನ್! ಮನೆಯಲ್ಲೇ ಕೂತು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿಸಿದ
ಜಮೀರ್ ಅಹಮದ್ ‌ನಿಲುವು ಮತ್ತು ನಿರ್ಣಯಗಳು ಅವರು ಯಾರ ಪರ ಇದ್ದಾರೆಂದು ಹೇಳುತ್ತದೆ. ಅವರೂ ಕೂಡ ಗಲಭೆ ಸ್ಥಳಕ್ಕೆ ಬಂದಿದ್ದರು. ಕಾಂಗ್ರೆಸ್​ನ ತುಷ್ಟೀಕರಣ ರಾಜಕಾರಣ ಇನ್ನೂ ಮುಂದುವರಿದೆ. ಸದ್ಯಕ್ಕೆ ಸ್ಥಳೀಯ ರಾಜಕಾರಣಿಗಳ ಪಾತ್ರ ಇದೆ ಎಂಬುದರಲ್ಲಿ ಕೆಲವರನ್ನು ಅರೆಸ್ಟ್ ಮಾಡಿದ್ದೇವೆ. ಮುಂದೆ‌ ತನಿಖೆ ಹಂತದಲ್ಲಿ ಎಲ್ಲವನ್ನೂ ಗೊತ್ತಾಗುತ್ತದೆ ಎಂದರು.
ಅಪರಾಧಿಗಳಿಗೆ ನಿರ್ದಾಕ್ಷಿಣ್ಯವಾಗಿ ಕ್ರಮವಾಗಬೇಕೆಂದು ಸಿಎಂ ಹೇಳಿದ್ದಾರೆ. ಯಾರು ದೊಂಬಿ ಮಾಡಿದ್ದಾರೆ ಅವರಿಂದಲೇ ವಸೂಲಿ ಮಾಡುತ್ತೇವೆ. ಸುಪ್ರೀಂಕೋರ್ಟ್ ಆದೇಶವೇ ಕಾನೂನು ಎಂದು ತಿಳಿದುಕೊಂಡೇ ನಾವು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಹಿಂದೆ ನಡೆದ ಚುನಾವಣೆಯಲ್ಲಿ ಸಂಭವಿಸಿದ ಬಿರುಕು, ಭಿನ್ನಾಭಿಪ್ರಾಯಗಳು ಹಾಗೂ ಮುಂದಿನ ಚುನಾವಣೆ ಗಮನದಲ್ಲಿಟ್ಟುಕೊಂಡು ಈ ಗಲಭೆ ಮಾಡಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.(ದಿಗ್ವಿಜಯ ನ್ಯೂಸ್​)
ಸುಪ್ರೀಂಕೋರ್ಟ್‌ಗೆ ಅವಹೇಳನ- ಖ್ಯಾತ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಅಪರಾಧಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 1 =
Remember me
