ಉಡುಪಿ:ರಾಜ್ಯದಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನು ಬಂದೇ ಬರುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಲವ್ ಜಿಹಾದ್ ವಿರುದ್ಧ ಕಾನೂನು ತರುವ ಬಗ್ಗೆ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಅಲಹಾಬಾದ್ ಹೈಕೋರ್ಟ್ ಲವ್ ಜಿಹಾದ್ ವಿಚಾರದಲ್ಲಿ ಆದೇಶ ಕೊಟ್ಟಿದೆ. ಯುಪಿ, ಹರಿಯಾಣ, ಮಧ್ಯಪ್ರದೇಶವೂ ಜಾರಿಗೆ ತರುವ ಚಿಂತನೆ ಮಾಡಿವೆ. ಕರ್ನಾಟಕ ಸರ್ಕಾರವೂ ಈ ಬಗ್ಗೆ ಚಿಂತನೆ ನಡೆಸಿದೆ. ಲವ್ ಜಿಹಾದ್ ಕಾನೂನನ್ನು ಹೇಗೆ ಜಾರಿಗೆ ತರಬೇಕು? ಯಾವ ಅಂಶಗಳನ್ನು ಸೇರಿಸಬೇಕು ಎಂಬುದು ಮುಖ್ಯ. ಉತ್ತರಪ್ರದೇಶ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಯುಪಿ ಸರ್ಕಾರ ಹೊರಡಿಸುವ ಅಧಿಸೂಚನೆಯ ಪ್ರತಿಗಳನ್ನು ಪಡೆದುಕೊಳ್ಳಲು ಅಧಿಕಾರಿಗಳಿಗೆ ಹೇಳಿದ್ದೇನೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡ ಇದನ್ನು ಒಪ್ಪಿದ್ದಾರೆ ಎಂದು ವಿವರಿಸಿದರು.
ಇನ್ನು ಡಿ.5 ಕರ್ನಾಟಕ ಬಂದ್ ವಿಚಾರವಾಗಿ ಪ್ರತಿಕ್ರಿಯಿಸಿದ ಗೃಹ ಸಚಿವರು, ಅಂದು ಎಲ್ಲ ಸರ್ಕಾರಿ ಕಚೇರಿಯೂ ಎಂದಿನಂತೆ ಕಾರ್ಯನಿರ್ವಹಿಸಲಿವೆ. ಬಂದ್ ಮಾಡದಂತೆ ಸುಪ್ರೀಂ ಸ್ಪಷ್ಟ ಆದೇಶ ಇದೆ. ಬಂದ್ ಮಾಡಿದ್ರೆ ಸುಪ್ರೀಂ ಆದೇಶ ಉಲ್ಲಂಘನೆ ಆಗುತ್ತೆ. ಬಂದ್ ಮಾಡಬೇಡಿ ಎಂದು ಸಿಎಂ ಜತೆ ನಾನೂ ಮನವಿ ಮಾಡ್ತೇನೆ ಎಂದರು.
ಇನ್ನು ಕರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ನೈಟ್ ಕರ್ಪ್ಯೂ ಬಗ್ಗೆ ಯಾವುದೇ ಸಭೆ ಕರೆದಿಲ್ಲ. ಜನ ಸೇರದಂತೆ ನೋಡಿಕೊಳ್ಳಬೇಕು ಎಂದು ತಜ್ಞರು ಹೇಳಿದ್ದಾರೆ. ಇವತ್ತು ಅಥವಾ ನಾಳೆ ಈ ಬಗ್ಗೆ ಸರ್ಕಾರ ತೀರ್ಮಾನ ಮಾಡಲಿದೆ. ಹೊಸ ವರ್ಷಾಚರಣೆಯಲ್ಲಿ ಜನಸಂದಣಿ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಇದೆ ಎಂದರು.
ಮುನ್ನೂರು ವರ್ಷದಿಂದ ಲವ್ ಜಿಹಾದ್ ಇದೆ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ಇನ್ನೂ ಮೊಘಲ್ ಶಕೆಯಲ್ಲಿದ್ದಾರೆ ಎಂದು ಗೃಹ ಸಚಿವರು ಕಿಡಿಕಾರಿದರು.
ಇನ್ನು ಮಂಗಳೂರಲ್ಲಿ ಉಗ್ರ ಪರ ಗೋಡೆಬರಹ ಪ್ರಕರಣ ಸಂಬಂಧ ಆರೋಪಿ ಬಂಧನದ ಬಗ್ಗೆ ಖಚಿತ ಪಡಿಸದ ಗೃಹ ಸಚಿವ ಬೊಮ್ಮಾಯಿ, ಮಂಗಳೂರು ಪೊಲೀಸರು ಚುರುಕಿನ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇಂದು ಅಥವಾ ನಾಳೆ ಆರೋಪಿಯನ್ನು ಬಂಧಿಸುತ್ತಾರೆ. ಈ ಕೃತ್ಯದ ಹಿಂದೆ ಯಾವ ಸಂಘಟನೆ ಇದೆ ಅನ್ನೋದನ್ನು ಪತ್ತೆ ಮಾಡುತ್ತೇವೆ. ಬರೆದ ವ್ಯಕ್ತಿ ಮಾತ್ರವಲ್ಲ, ಅವನ ಹಿಂದಿರುವ ಶಕ್ತಿ ಯಾವುದೂ ಅಂತ ಪತ್ತೆ ಮಾಡುತ್ತೇವೆ ಎಂದರು.
3 ಕೋಟಿ ಖರ್ಚು ಮಾಡಿಸಿ ಮದ್ವೆಯಾದವ ಮೊದಲ ರಾತ್ರಿಯೇ ಫುಲ್ ಟೈಟ್! ಮುಂದೆ ಆಗಿದ್ದೆಲ್ಲವೂ…

ಸರ್ಕಾರದ 2 ಲಕ್ಷ ರೂ. ಪರಿಹಾರ ಪಡೆಯಲು ಯಾರೂ ಇಲ್ಲ..! ಇದ್ದರೆ ದಯವಿಟ್ಟು ಸಂಪರ್ಕಿಸಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 9 =
Remember me
