ಹಾವೇರಿ:ಜನರ ಈ ತೀರ್ಪನ್ನು ಅತ್ಯಂತ ಗೌರವ ಪೂರ್ವಕವಾಗಿ ನಾನು ಒಪ್ಪಿಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದ್ದಾರೆ.
ಹಾವೇರಿ ದೇವಗಿರಿಯ ಮತ ಎಣಿಕೆ‌ ಕೇಂದ್ರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿಯ ಈ ಸೋಲಿನ‌ ಜವಾಬ್ದಾರಿಯನ್ನು ರಾಜ್ಯದ ಮುಖ್ಯಮಂತ್ರಿಯಾಗಿ ನಾನೇ ಹೊರುತ್ತೇನೆ. ಇದನ್ನು ಯಾರ ಹೆಗಲಿಗೂ ಹಾಕುವುದಿಲ್ಲ. ಈ ಸೋಲಿನ ಬಗ್ಗೆ ಸಂಪೂರ್ಣವಾದ ಪರಾಮರ್ಶೆ ಮಾಡುವ ಅವಶ್ಯಕತೆ ಇದೆ. ಇದಕ್ಕೆ ಹಲಾವರು ಕಾರಣಗಳಿವೆ. ಇದನ್ನು ಪಕ್ಷದಲ್ಲಿ ಆಂತರಿಕವಾಗಿ ಆತ್ಮಾವಲೋಕನ ಮಾಡುತ್ತೇವೆ ಎಂದಿದ್ದಾರೆ.
ಪ್ರತಿಯೊಂದು ಕ್ಷೇತ್ರದ ಕುರಿತು ಕೂಲಂಕಷವಾಗಿ ಪರಿಶೀಲನೆ ಮಾಡುತ್ತೇವೆ. ಏನೆಲ್ಲ ಕೊರತೆಗಳು ಆಗಿವೆ. ಅವುಗಳನ್ನು ನೀಗಿಸಿ ಮತ್ತೊಮ್ಮೆ ಸಂಘಟಿತರಾಗಿ ಮತ್ತೆ ಪುಟಿದು ಏಳುವ ಪಕ್ಷ ಬಿಜೆಪಿ. ಬರುವಂಥ ಸಂಸತ್ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಎಲ್ಲ ಸಂಘಟನಾತ್ಮಕ ಬಲದಿಂದ ತಪ್ಪುಗಳನ್ನು ಸರಿ ಮಾಡಿಕೊಂಡು ತಯಾರಿ ಮಾಡಿಕೊಳ್ಳುತ್ತೇವೆ. ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತೇವೆ ಎಂದು ಹೆಳಿದ್ದಾರೆ.
ಮೋದಿ, ಅಮಿತ್ ಷಾ ಪ್ರಚಾರ ಕೈ ಹಿಡಿಯಲಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, ಸೋಲಿಗೆ ಹಲವಾರು ಕಾರಣಗಳಿವೆ. ಅದನ್ನು ಅವಲೋಕನ ಮಾಡಿದಾಗ ಗೊತ್ತಾಗುತ್ತದೆ. ಈ ಬಗ್ಗೆ ಈಗಲೇ ಹೇಳುವುದು ಸರಿಯಲ್ಲ ಎಂದರು.
ಶಿಗ್ಗಾಂವಿ ಕ್ಷೇತ್ರದಲ್ಲಿ ಬಹಳ ದೊಡ್ಡ ಅಂತರದಲ್ಲಿ ಗೆಲುವು ಕುರಿತು ಮಾತನಾಡಿದ ‌ಸಿಎಂ, ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳು ಕೈಹಿಡಿದಿವೆ. ನಿರಂತರವಾಗಿ ನಾಲ್ಕನೇ ಬಾರಿಗೆ ಬೆಂಬಲ‌ ಕೊಟ್ಟಿದ್ದಾರೆ. ನಾನು ಇನ್ನಷ್ಟು ಜವಾಬ್ದಾರಿಯಿಂದ ಕೆಲಸ‌ಮಾಡುತ್ತೇನೆ. ಕಾಂಗ್ರೆಸ್ ಗೆಲುವಿಗೆ ಕಾರಣ ಅವರು ಹೇಳಬೇಕು. ಅವರು‌ ನಮಗಿಂತ ವ್ಯವಸ್ಥಿತವಾಗಿ ಚುನಾವಣೆ ಮಾಡಿದ್ದಾರೆ ಎನಿಸುತ್ತದೆ‌ ಎಂದರು.
ಗೆದ್ದು ಬೀಗಿದ ತಂದೆ-ಮಗ; ಕಾಂಗ್ರೆಸ್​​ಗೆ ಆಶೀರ್ವಾದ ಮಾಡಿದ ದಾವಣಗೆರೆ ಜನತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
