ಮಂಡ್ಯ:ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದ್ದು, ಈ ಗಲಭೆಯ ಹಿನ್ನೆಲೆ ಸದ್ಯ ಶಿವಮೊಗ್ಗ ನಗರದಾದ್ಯಂತ ಸೆಕ್ಷನ್​ 144 ಜಾರಿಯಾಗಿದೆ. ಈ ಪ್ರಕರಣವನ್ನು ಸಣ್ಣ ಘಟನೆ ಎಂದು ಹೇಳಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿಕೆಗೆ ಇದೀಗ ಮಾಜಿ ಸಿಎಂ, ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ:ಕಾಣೆಯಾದ ಮೂವರು ಸಹೋದರಿಯರು ಶವವಾಗಿ ಪೆಟ್ಟಿಗೆಯಲ್ಲಿ ಪತ್ತೆ!
ಪರಮೇಶ್ವರ್ ಹೇಳಿಕೆಯನ್ನು ಟೀಕಿಸಿದ ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ, “ಅವರು ಈ ರೀತಿ ಹೇಳಿಕೆ ಕೊಡುತ್ತಿರುವುದು ಇದೇ ಮೊದಲೇನಲ್ಲ. ಗಂಭೀರವಾದ ಘಟನೆ ನಡೆದರೂ, ಸಣ್ಣ ಘಟನೆ ಎಂದು ಹೇಳುವ ಪ್ರವೃತ್ತಿಯಿದೆ. ಕೋಮು ಗಲಭೆ ಸೃಷ್ಟಿ ಮಾಡುವ ಕುಮ್ಮಕ್ಕು ಕೊಡುವ ಶಕ್ತಿಗಳನ್ನು ಬಂಧಿಸಬೇಕು” ಎಂದು ಹೇಳಿದರು.
“ಈ ರೀತಿ ಹೇಳಿಕೆ ಕೊಟ್ಟರೆ ಇನ್ನು ಪ್ರೋತ್ಸಾಹಿಸಿದಂತೆ ಆಗುತ್ತದೆ. ಘಟನೆ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸಾಕ್ಷಿಯಾಗಿದೆ. ರಾಜ್ಯದಲ್ಲಿ ಅಕ್ರಮ ದಂಧೆ ನಡೆಸುವ ಶಕ್ತಿಗಳೇ ಕೋಮು ಗಲಭೆಗೆ ಕುಮ್ಮಕ್ಕು ನೀಡುತ್ತಿವೆ. ಗೃಹ ಸಚಿವವರಿಗೆ ಇದ್ಯಾವುದೂ ಕಾಣುವುದಿಲ್ಲ, ಅದಕ್ಕೆ ಸಣ್ಣ ಘಟನೆ ಎಂದು ಹೇಳಿದ್ದಾರೆ” ಎಂದು ಬೊಮ್ಮಯಿ ಹೇಳಿದರು.
ಇವನು ಫೈಟರ್​ ಅಂದ್ರು, ನಾಶ ಮಾಡೋಕೆ ಪ್ರಯತ್ನಿಸಿದ್ರು; ನಟ ದುನಿಯಾ ವಿಜಯ್​ ಹೇಳಿದ್ಯಾರಿಗೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 10 =
Remember me
