ಬೆಂಗಳೂರು:“ವಿನಾಶಕಾಲೇ ವೀಪರಿತ ಬುದ್ದಿ” ಕರ್ನಾಟಕವನ್ನು ಆರ್ಥಿಕವಾಗಿ ದಿವಾಳಿ ಮಾಡಿರುವ ಕಾಂಗ್ರೆಸ್​ ಸರ್ಕಾರ ಈಗ ಪಾಕಿಸ್ತಾನಕ್ಕೆ ಜೈಕಾರ ಕೂಗಿದವರನ್ನು ರಕ್ಷಿಸುತ್ತಾ ನೈತಿಕವಾಗಿ ಸಹ ದಿವಾಳಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ:ಸ್ಥೂಲಕಾಯದವರಿಗೆ ಸಿಹಿ ಸುದ್ದಿ: ಅಮೆರಿಕದ ತೂಕ ಕರಗಿಸುವ ಔಷಧ ತಯಾರಿಕೆ ಕಂಪನಿ ಬರಲಿದೆ ಭಾರತಕ್ಕೆ
“ಪವಿತ್ರ ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನಕ್ಕೆ ಜೈಕಾರ ಕೂಗಿದ ದೇಶದ್ರೋಹಿಯನ್ನು ಬಂಧಿಸಲು ತಾಕತ್ತು, ದಮ್ಮು ಇಲ್ಲದ ಕಾಂಗ್ರೆಸ್‌, ಪ್ರಕರಣದ ಸಾಕ್ಷಿಗಳನ್ನು ನಾಶಗೊಳಿಸಲು ಯತ್ನಿಸುತ್ತಿರುವುದು ಎಫ್.ಎಸ್.ಎಲ್‌ ವರದಿ ಬಗ್ಗೆ ಆ ಪಕ್ಷದ ನಾಯಕರು ನೀಡುತ್ತಿರುವ ಹೇಳಿಕೆಗಳೇ ಸಾಕ್ಷಿ. ಹೇಳಿಕೆ ಬಗ್ಗೆ ವಿಡಿಯೋ ಸಾಕ್ಷಿಯಿದ್ದರೂ ದೇಶದ್ರೋಹಿಗಳನ್ನು ಬಂಧಿಸಲು ಎಫ್.ಎಸ್.ಎಲ್‌ ವರದಿ ಬರುವ ತನಕ ಕಾಯುತ್ತಿರುವುದು ಯಾವ ಪುರುಷಾರ್ಥ ಸಾಧನೆಗೆ..??” ಎಂದು ಪ್ರಶ್ನಿಸಿದ್ದಾರೆ.
“ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ಎಲ್ಲಾ ಪ್ರಕರಣಗಳಲ್ಲಿಯೂ ಎಫ್.ಎಸ್.ಎಲ್‌ ವರದಿ ಬಂದ ನಂತರವೇ ಅಪರಾಧಿಗಳನ್ನು ಬಂಧಿಸುತ್ತಿದ್ದಾರಾ?? ಸಿಎಂ ಅವರೇ ನಿಮ್ಮ ಅಂತರಾಳದಲ್ಲಿ ಕನಿಷ್ಟ ದೇಶ ಪ್ರೇಮವಿದ್ದರೆ, ಪಾಕಿಸ್ತಾನಕ್ಕೆ ಜೈಕಾರ ಹಾಕಿದ ಆ ದೇಶದ್ರೋಹಿಯನ್ನು ಮೊದಲು ಬಂಧಿಸಿ, ನಿಮಗೆ ಮತ ಹಾಕಿದ ಕನ್ನಡಿಗರಿಗೆ ಹಾಗೂ ಸಂವಿಧಾನಕ್ಕೆ ಗೌರವ ಸಲ್ಲಿಸಿ” ಎಂದು ಟ್ವೀಟ್ ಮಾಡಿ ತಿಳಿಸಿದ್ದಾರೆ.
ಕ್ಯಾಡ್ಬರಿ ಚಾಕೊಲೇಟ್‌ ತಿನ್ನುವಾಗ ‘ಹುಳುಗಳು’ ಪತ್ತೆ! ತಕ್ಷಣವೇ ರಿಪೋರ್ಟ್​ ಮಾಡಿದವನಿಗೆ ಪ್ರಯೋಗಾಲಯ ವರದಿ ಹೇಳಿದ್ದಿಷ್ಟು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 14 =
Remember me
