ಬೆಂಗಳೂರು:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ರಚನೆ ಆದಾಗಿನಿಂದ ಪ್ರಬಲ ಖಾತೆ ನೀಡಿಲ್ಲ ಎಂದು ಅಸಮಾಧಾನಗೊಂಡು ಸಚಿವರಾಗಿಯು ಅಧಿಕಾರವನ್ನು ಸ್ವೀಕರಿಸದೇ ಅನೇಕ ದಿನಗಳವರೆಗೆ ಬೇಸರಗೊಂಡಿದ್ದ ಸಚಿವ ಆನಂದ್​ ಸಿಂಗ್​ ಮುನಿಸು ಕೊನೆಗೂ ತಣ್ಣಗಾಗಿದ್ದು, ರಾಜೀನಾಮೆ ವದಂತಿಗೆ ಕೊನೆಗೂ ತೆರೆಬಿದ್ದಿದೆ.
ಇಂದು ವಿಕಾಸಸೌಧದಲ್ಲಿ ಮಾತನಾಡಿದ ಆನಂದ್ ಸಿಂಗ್, ಪಕ್ಷ ಹಾಗೂ ಮುಖ್ಯಮಂತ್ರಿಗಳ ಆದೇಶದಂತೆ ಪ್ರವಾಸೋದ್ಯಮ ಖಾತೆ ಸಚಿವರಾಗಿ ಅಧಿಕಾರ ಸ್ವೀಕರಿಸುವೆ. ಈ ಹಿಂದೆ ನಾನು ಮಾಡಿದ ಖಾತೆ ಬದಲಾವಣೆ ಮನವಿಯಲ್ಲಿ ಯಾವುದೇ ಬದಲಾವಣೆಯಿಲ್ಲ. ವರಿಷ್ಠರ ಜತೆಗೆ ಚರ್ಚಿಸಿ ಮನವಿ ಬಗ್ಗೆ ಸೂಕ್ತ ಕ್ರಮವಹಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿಯಾಗಿ ಮನವಿ ಮಾಡಿಕೊಂಡಿದ್ದೇನೆಂದು ಹೇಳಿದರು.
ಇದಕ್ಕೂ ಮುಂಚೆ ಪಕ್ಷದ ರಾಜ್ಯ ಕಚೇರಿಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಕಟೀಲ್ ಅವರು ವಸ್ತುಸ್ಥಿತಿ ವಿವರಿಸುವ ಮೂಲಕ ಆನಂದ್ ಸಿಂಗ್ ಮನವೊಲಿಸಿ ಮುನಿಸು ಶಮನಗೊಳಿಸಿದರು ಎಂದು ಹೇಳಲಾಗಿದೆ.
ಆಸ್ತಿಗಾಗಿ ದಂಪತಿ ಕೊಲೆ ಪ್ರಕರಣ: ಐದು ವರ್ಷಗಳ ಮಹತ್ವದ ತೀರ್ಪು ನೀಡಿದ ನ್ಯಾಯಾಲಯ
ವ್ಯಾಕ್ಸಿನೇಟ್ ಇಂಡಿಯಾ ಕಾರ್ಯಕ್ರಮಕ್ಕೆ ಉಪರಾಷ್ಟ್ರಪತಿಗಳಿಂದ ಬೆಂಗಳೂರಿನಲ್ಲಿ ಚಾಲನೆ
ಮಂಡ್ಯದ ನಟನ ಬಾಳಲ್ಲಿ ಪತ್ನಿಯೇ ವಿಲನ್!​  ಕಾಡಿಸಿ-ಪೀಡಿಸಿ ಮದ್ವೆಯಾದ ‘ಆದರ್ಶ ಪತ್ನಿ’ ಪರಾರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
