|ಕೇಶವಮೂರ್ತಿ ವಿ.ಬಿ.ಹಾವೇರಿ
ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನು ಕೊಟ್ಟ ಹಾವೇರಿ ಜಿಲ್ಲೆಯ ಶಿಗ್ಗಾಂವಿ-ಸವಣೂರ ವಿಧಾನಸಭಾ ಕ್ಷೇತ್ರ 2023ರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರವಾಗಲಿದೆ. ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕ್ಷೇತ್ರವಾದ್ದರಿಂದ ಇಡೀ ರಾಜ್ಯದ ಚಿತ್ತ ಶಿಗ್ಗಾಂವಿಯತ್ತ ಕೇಂದ್ರಿತವಾಗಲಿದೆ. ಇದೇ ಕ್ಷೇತ್ರದಿಂದ 1967ರಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದ ಎಸ್. ನಿಜಲಿಂಗಪ್ಪ ಮುಖ್ಯಮಂತ್ರಿಯಾಗಿದ್ದರು.
ಈ ಹಿಂದೆ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಶಿಗ್ಗಾಂವಿ ಹಾಗೂ ಸವಣೂರ ತಾಲೂಕುಗಳನ್ನು ಒಳಗೊಂಡಿರುವ ಕ್ಷೇತ್ರದಲ್ಲಿ ಹಿಡಿತ ಸಾಧಿಸುವಲ್ಲಿ ಬಸವರಾಜ ಬೊಮ್ಮಾಯಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದಾರೆ. 2008ರಿಂದ ಶಾಸಕರಾಗಿರುವ ಬೊಮ್ಮಾಯಿಗೆ ಪ್ರಬಲ ಎದುರಾಳಿಯಾಗಿರುವುದು ಕಾಂಗ್ರೆಸ್​ನ ಅಭ್ಯರ್ಥಿ, ಮಾಜಿ ಶಾಸಕ ಸೈಯದ್ ಅಜೀಮಪೀರ್ ಖಾದ್ರಿ. ಬೊಮ್ಮಾಯಿ ಎದುರು ಖಾದ್ರಿ ಮೂರು ಬಾರಿ ಸೋಲು ಕಂಡಿದ್ದರೂ ಮತಗಳ ಅಂತರ 8, 9 ಸಾವಿರ ದಾಟಿಲ್ಲ. ಮುಸ್ಲಿಂ ಹಾಗೂ ಪಂಚಮಸಾಲಿ ಮತದಾರರೇ ನಿರ್ಣಾಯಕರಾಗಿರುವ ಕ್ಷೇತ್ರದಲ್ಲಿ ಖಾದ್ರಿ 1999ರಲ್ಲಿ ಜನತಾದಳದಿಂದ ಗೆಲುವು ಸಾಧಿಸಿದ್ದರು. ನಂತರ ಸತತವಾಗಿ ನಾಲ್ಕು ಬಾರಿ ಸೋಲುಂಡಿದ್ದಾರೆ. ಆದರೆ, ಪ್ರತಿ ಬಾರಿಯೂ ಎದುರಾಳಿಗೆ ಪ್ರಬಲ ಪೈಪೋಟಿ ನೀಡುವಲ್ಲಿ ಸಫಲರಾಗಿದ್ದಾರೆ. ಈ ಬಾರಿಯೂ ತಮಗೇ ಕಾಂಗ್ರೆಸ್ ಟಿಕೆಟ್ ಪಕ್ಕಾ ಎಂದು ಕ್ಷೇತ್ರದ ತುಂಬ ಓಡಾಡುತ್ತಿದ್ದಾರೆ.
ಪಂಚಮಸಾಲಿ ಸಮಾಜ ನಿರ್ಣಾಯಕ: ಪ್ರಬಲ ಪಂಚಮಸಾಲಿ ಸಮುದಾಯ ಪ್ರವರ್ಗ 2ಎ ಮೀಸಲಾತಿ ಹೋರಾಟ ನಡೆಸಿದ್ದು, ಬೇಡಿಕೆ ಈಡೇರದಿದ್ದರೆ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡುತ್ತಿರುವ ಸಂದರ್ಭದಲ್ಲೇ ಬೊಮ್ಮಾಯಿ ಶಿಗ್ಗಾಂವಿ ಕ್ಷೇತ್ರ ಬಿಟ್ಟು ಬೇರೆಡೆ ಸ್ಪರ್ಧಿಸುತ್ತಾರೆಂಬ ಸುದ್ದಿ ಹಬ್ಬಿತ್ತು. ಆದರೆ, ಮೂರು ಬಾರಿ ಆಶೀರ್ವದಿಸಿರುವ ಶಿಗ್ಗಾಂವಿ ಕ್ಷೇತ್ರದಿಂದಲೇ ಈ ಬಾರಿಯೂ ಸ್ಪರ್ಧಿಸುತ್ತೇನೆ ಎಂದು ಇತ್ತೀಚೆಗೆ ಸಿಎಂ ಸ್ಪಷ್ಟಪಡಿಸಿದ್ದಾರೆ. ಪಂಚಮಸಾಲಿ ಮೀಸಲಾತಿ ಸಂಬಂಧ ಸೋಮವಾರ ಬೆಳಗಾವಿಯಲ್ಲಿ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆದಿದ್ದು, ಸದ್ಯದಲ್ಲೇ ಮೀಸಲು ಘೋಷಣೆ ವಿಚಾರವಾಗಿ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ. ಹಾಗಾಗಿ ಕ್ಷೇತ್ರದಲ್ಲಿ ಬೊಮ್ಮಾಯಿ ಗೆಲುವು ಲೀಲಾಜಾಲವಾಗಲಿದೆ ಎನ್ನಲಾಗಿದೆ.

ಶಿಗ್ಗಾಂವಿ ಕ್ಷೇತ್ರದಲ್ಲಿ 65 ಸಾವಿರ ಪಂಚಮ ಸಾಲಿ ಹಾಗೂ 50 ಸಾವಿರ ಮುಸ್ಲಿಂ ಮತದಾರರಿ ದ್ದಾರೆ. ಅಭ್ಯರ್ಥಿಗಳ ಗೆಲುವಿಗೆ ಈ ಮತಗಳೇ ನಿರ್ಣಾಯಕ. ಉಳಿದಂತೆ ಕುರುಬ- 20 ಸಾವಿರ, ಎಸ್​ಸಿ- 20 ಸಾವಿರ, ಎಸ್​ಟಿ- 17 ಸಾವಿರ ಮತದಾರರಿದ್ದಾರೆ. ಕೈ ಪಡೆ ಜಾತಿ ಲೆಕ್ಕಾಚಾರ ಹಾಕಿದರೆ ಮುಸ್ಲಿಂ ಸಮಾಜದಲ್ಲಿ ಹಿಡಿತ ಸಾಧಿಸಿ ರುವ ಖಾದ್ರಿ ಅವರಿಗೇ ಮತ್ತೆ ಟಿಕೆಟ್ ಸಿಗುವ ಲಕ್ಷಣಗಳು ಗೋಚರಿಸುತ್ತಿವೆ. ಹಾಗಾಗಿ, ಸದ್ಯದ ಮಟ್ಟಿಗೆ ಖಾದ್ರಿ ವರ್ಸಸ್ ಬೊಮ್ಮಾಯಿ ನೇರ ಹಣಾಹಣಿ ನಡೆಯುವ ಸಾಧ್ಯತೆ ದಟ್ಟವಾಗಿದೆ. ಈ ಬಾರಿ ಕಾಂಗ್ರೆಸ್ ಪಂಚಮಸಾಲಿ ಸಮಾಜದ ಸೋಮಣ್ಣ ಬೇವಿನಮರದ, ಶಶಿಧರ ಯಲಿಗಾರ ಅಥವಾ ಹೊಸಬರಿಗೆ ಟಿಕೆಟ್ ನೀಡುವ ಸಾಧ್ಯತೆ ಯನ್ನೂ ಅಲ್ಲಗಳೆಯುವಂತಿಲ್ಲ. ಕಾಂಗ್ರೆಸ್ ಹೊಸ ಬರಿಗೆ ಮಣೆ ಹಾಕಿದರೆ ಬೊಮ್ಮಾಯಿಗೆ ಎದು ರಾಳಿಯೇ ಇಲ್ಲದಂತಾಗುವ ಸಾಧ್ಯತೆಯೂ ಇದೆ.
ಹಿಂದಿನ ಫಲಿತಾಂಶ:2018ರ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ 83,868 ಮತಗಳನ್ನು ಪಡೆದು ವಿಜಯಶಾಲಿಯಾಗಿದ್ದರು. ಕಾಂಗ್ರೆಸ್ ಅಭ್ಯರ್ಥಿ ಅಜೀಮಪೀರ್ ಖಾದ್ರಿ 74,603 ಮತ ಪಡೆದು ಪರಾಭವಗೊಂಡಿದ್ದರು. ಪಕ್ಷೇತರ ಅಭ್ಯರ್ಥಿ ಸೋಮಣ್ಣ ಬೇವಿನಮರದ 7,203 ಮತಗಳನ್ನು ಪಡೆದಿದ್ದರು. ಜೆಡಿಎಸ್​ನ ಅಶೋಕ ಬೇವಿನಮರದ 1,353 ಮತ ಪಡೆದಿದ್ದರು.
ಕಾಂಗ್ರೆಸ್​ನಿಂದ 14 ಅರ್ಜಿ:ಸಿಎಂ ಎದುರು ಸ್ಪರ್ಧಿಸಲು ಕಾಂಗ್ರೆಸ್​ನಲ್ಲಿ ತೀವ್ರ ಪೈಪೋಟಿ ಶುರುವಾಗಿದ್ದು, ಕೈಪಡೆಯ 14 ಮುಖಂಡರು ಟಿಕೆಟ್​ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಖಾದ್ರಿ ಹೊರತುಪಡಿಸಿ ಪ್ರಬಲ ಅಭ್ಯರ್ಥಿಗಳು ಕಾಣಸಿಗುತ್ತಿಲ್ಲ. ಕಳೆದ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಸೋಮಣ್ಣ ಬೇವಿನಮರದ, ಹಾವೇರಿ ನಗರಸಭೆ ಅಧ್ಯಕ್ಷ ಸಂಜೀವಕುಮಾರ, ನೀರಲಗಿ ಸೇರಿ ಹಲವರು ಕಾಂಗ್ರೆಸ್​ಟಿಕೆಟ್ ಆಕಾಂಕ್ಷಿಗಳು.

ಪಾದಚಾರಿ ಮಾರ್ಗದಲ್ಲಿ ವಾಹನ ನಿಲ್ಲಿಸಿದ್ರೆ ಕಾನೂನುಕ್ರಮ; ಹೊರಬಿತ್ತು ಹೊಸ ಸುತ್ತೋಲೆ

ಅಭಿಮಾನಿಗಳ ಅತಿರೇಕ: ಎಲ್ಲ ಫ್ಯಾನ್ಸ್​​ಗೆ ನಟಿ ರಮ್ಯಾ ಕಿವಿಮಾತು, ನಟರಿಗೆ ಸಲಹೆ; ಕೆಲ ಖಾತೆಗಳ ಬ್ಲಾಕ್​ ಮಾಡಲು ಮನವಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
