ಬೆಂಗಳೂರು:ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ ರಾಮ ರಾಜ್ಯ ಸ್ಥಾಪನೆಗೆ ಅಡಿಗಲ್ಲು ಹಾಕಿದಂತಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.
ಬಸವನಗುಡಿಯ ಉತ್ತರಾಧಿ ಮಠದಲ್ಲಿ ಡಾ.ಜಯಶ್ರೀ ಅರವಿಂದ್​ ಪ್ರತಿಷ್ಠಾನ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶೀರಾಮನ ಕುರಿತ ಹಾಡುಗಳ ಧ್ವನಿ ಸುರುಳಿ ಬಿಡುಗಡೆಗೊಳಿಸಿ ಮಾತನಾಡಿದರು.
ಸಮೃದ್ದಿ ತುಂಬಿ, ಬಡತನ ಮಾಯವಾಗುವುದು, ಎಲ್ಲರಿಗೂ ನ್ಯಾಯ ಸಿಗುವುದೇ ರಾಮರಾಜ್ಯ. ಎಲ್ಲದಕ್ಕೂ ಕಾಲ ಕೂಡಿ ಬರಬೇಕು. ಐನೂರು ವರ್ಷಕ್ಕಿಂತ ಹೆಚ್ಚು ಅಯೋಧ್ಯೆಯ ಜನ್ಮ ಸ್ಥಳದಿಂದ ರಾಮನನ್ನು ದೂರ ಇಟ್ಟಿದ್ದರು. ಜ. 22ಕ್ಕೆ ಮತ್ತೆ ರಾಮನ ಪ್ರಾಣ ಪ್ರತಿಷ್ಠಾಪನೆ ಆಗುತ್ತಿರುವುದು ಅಮೃತಗಳಿಗೆ ಎಂದು ಹೇಳಿದರು.
ತ್ರೇತಾಯುಗದ ರಾಮ ಕಲಿಯುಗದಲ್ಲಿ ಅಯೋಧ್ಯೆಗೆ ಮತ್ತೆ ಬಂದಿದ್ದಾನೆ. ಪ್ರಾಣ ಪ್ರತಿಷ್ಠೆ ಎಷ್ಟು ಮುಖ್ಯವೋ, ಯಾರು ಪ್ರಾಣ ಪ್ರತಿಷ್ಟೆ ಮಾಡುತ್ತಿದ್ದಾರೆ ಎಂಬುದು ಕೂಡ ಅಷ್ಟೇ ಮುಖ್ಯ. ಅಪಾತ್ರರಿಂದ ಈ ಕೆಲಸ ಸಾಧ್ಯವಿಲ್ಲ. ಉತ್ಕೃಷ್ಟ ಪ್ರೀತಿಯೇ ನಿಜವಾದ ಭಕ್ತಿ. ಈ ಗುಣ ಪ್ರಧಾನಿ ಮೋದಿ ಅವರಲ್ಲಿದೆ. ಹೀಗಾಗಿ ಬಾಲರಾಮನ ಮೂರ್ತಿ ಪ್ರತಿಷ್ಠೆ ಮಾಡುವ ಯೋಗ ಅವರಿಗೆ ಲಭ್ಯವಾಗಿದೆ ಎಂದರು.
ವಿಷ್ಣುವಿನ ಅವತಾರದಲ್ಲಿ ರಾಮನ ಅವತಾರ ಶ್ರೇಷ್ಠವಾದದ್ದು. ನಾವು ಎಲ್ಲಿ ದಾರಿ ತಪ್ಪುತ್ತೇವೆಯೋ, ಅಲ್ಲಿ ರಾಮ ಬಂದು ಆದರ್ಶದ ಮಾರ್ಗ ತೋರಿಸುತ್ತಾನೆ. ನಾವು ಎಲ್ಲರ ಮುಂದೆ ನಡೆದುಕೊಳ್ಳುವ ವರ್ತನೆಯೇ ಬೇರೆ, ಅಂತರಂಗದ ನಡವಳಿಕೆಯೇ ಬೇರೆ. ಆದರೆ ರಾಮ ಬಾಲ್ಯದಿಂದ ಹಿಡಿದು, ವನವಾಸಕ್ಕೆ ಹೋದಾಗಲೂ ತತ್ವ, ಆದರ್ಶ ಬಿಟ್ಟು ಬದುಕಲಿಲ್ಲ.
ವಾಲ್ಮೀಕಿ ಬರೆದ ರಾಮಾಯಣದಿಂದ ಕಲಿತುಕೊಳ್ಳುವುದು ಬಹಳಷ್ಟಿದೆ. ತಂದೆ- ಮಗನ ಸಂಬಂಧ, ಸೋದರ ಸಂಬಂಧ, ಪತಿ- ಪತ್ನಿ ಸಂಬಂಧ, ಗುರು- ಶಿಷ್ಯರ ಸಂಬಂಧ, ರಾಮ- ಆಂಜನೇಯ ಸಂಬಂಧ ಇಂದಿನ ಕಾಲಘಟ್ಟದಲ್ಲಿ ನಾವು ಹೇಗಿರಬೇಕು ಎಂಬುದನ್ನು ತಿಳಿಸಿಕೊಡುತ್ತದೆ ಎಂದು ಹೇಳಿದರು.
ಸಂಗೀತ ನಿರ್ದೇಶಕಿ ಡಾ. ಜಯಶೀ ಅರವಿಂದ ಮಾತನಾಡಿ, ರಾಮ ಎಂಬ ಎರಡಕ್ಷರ ಕೊಡುವ ನೆಮ್ಮದಿಯನ್ನು ವಿವರಿಸಲು ಸಾಧ್ಯವಿಲ್ಲ. ಅಂದುಕೊಂಡಿರುವುದನ್ನು ರಾಮ ಸಫಲಗೊಳಿಸುತ್ತಾನೆ ಎಂದರು.
ಬಸವನಗುಡಿ ಶಾಸಕ ರವಿಸುಬ್ರಮಣ್ಯ, ಉತ್ತರಾಧಿ ಮಠದ ಸಂಚಾಲಕ ಸತ್ಯಧ್ಯಾಚಾರ್ಯ ಕಟ್ಟಿ ಇದ್ದರು.
ಭರತನಿಗೆ ಆಡಳಿತ ನಡೆಸಲು ಕೊಟ್ಟಾಗ, ಈ ರಾಜ್ಯ ಅಣ್ಣನದ್ದು ಎನ್ನುತ್ತಾ ರಾಮನ ಪಾದುಕೆ ಇಟ್ಟು ಅಧಿಕಾರ ನಡೆಸಿದ. ಈಗ ಯಾರೂ ಅಧಿಕಾರ ಬಿಟ್ಟುಕೊಡಲು ತಯಾರಿಲ್ಲ. ಸ್ವಲ್ಪ ಸಮಯ ರಾಜ್ಯಭಾರ ಮಾಡುತ್ತೇನೆ ಎಂದವರು, ಅದೇ ಕುರ್ಚಿಯಲ್ಲಿ ಕಾಯಂ ಆಗಿರುತ್ತಾರೆ.-ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − fourteen =
Remember me
