ಯಾದಗಿರಿ:ಅತ್ಯಮೂಲ್ಯ ಸಂಪನ್ಮೂಲಗಳಲ್ಲಿ ಒಂದಾಗಿರುವ ನೀರು ಪೋಲಾಗದಂತೆ, ಪ್ರತಿ ಹನಿ ನೀರನ್ನು ಸಮಗ್ರವಾಗಿ ಬಳಸಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ನಾವು ಶ್ರಮಿಸುತ್ತೀದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಜಲಜೀವನ್ ಮಿಷನ್ ಯೋಜನೆಯಡಿ ಯಾದಗಿರಿ ಜಿಲ್ಲೆಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗಳಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಮಾತನಾಡಿದರು.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಜಲಜೀವನ್ ಮಿಷನ್ ಯೋಜನೆ ಆರಂಭವಾಗಿತ್ತು. ಅಂದು ಆಡಳಿತದಲ್ಲಿದ್ದ ಯುಪಿಎ ಸರ್ಕಾರದ ಕಾರಣದಿಂದಾಗಿ ಈ ಯೋಜನೆ ತಡವಾಯಿತು. ಆದರೆ ಮೋದಿ ಸರ್ಕಾರ ಅಧಕಾರಕ್ಕೆ ಬರುತ್ತಿದ್ದಂತೆ ಜಲಜೀವನ್ ಯೋಜನೆಯ ವೇಗ ಹೆಚ್ಚಿತು ಎಂದು ಬೊಮ್ಮಾಯಿ ಹೇಳಿದರು.
ಮಾನ್ಯ ಪ್ರಧಾನಿ ಶ್ರೀ@narendramodiಅವರ ಅಮೃತ ಹಸ್ತದಿಂದ ಉದ್ಘಾಟನೆಯಾಗಲಿದೆ ಕಲ್ಯಾಣ ಕರ್ನಾಟಕದ ಜೀವನಾಡಿಯ ಮತ್ತೊಂದು ಹಂತ.pic.twitter.com/zQx73Q0su7— Basavaraj S Bommai (@BSBommai)January 19, 2023
ಮಾನ್ಯ ಪ್ರಧಾನಿ ಶ್ರೀ@narendramodiಅವರ ಅಮೃತ ಹಸ್ತದಿಂದ ಉದ್ಘಾಟನೆಯಾಗಲಿದೆ ಕಲ್ಯಾಣ ಕರ್ನಾಟಕದ ಜೀವನಾಡಿಯ ಮತ್ತೊಂದು ಹಂತ.pic.twitter.com/zQx73Q0su7
ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಜಲಜೀವನ್ ಯೋಜನೆ ಲೋಕಾರ್ಪಣೆಯಾಗಿದೆ. ಇದರಿಂದ ಎಲ್ಲ ಶಾಖಾ ನಾಲೆಗಳಿಗೆ ನೀರು ಹರಿಸಲು ಸಾಧ್ಯವಾಗುತ್ತಿದೆ. ಅಲ್ಲದೆ ಅತೀ ಹೆಚ್ಚು ನೀರಿನ ಹರಿವಿನಿಂದ ಭೂಮಿ ಜವುಳು ಬೀಳುವುದನ್ನು ತಪ್ಪಿಸಬಹುದು ಎಂದರು.
ಈ ಯೋಜನೆಯ ಮೂಲಕ ಪ್ರಧಾನಿ ಮೋದಿಯವರ ಕನಸು ನನಸಾಗುತ್ತಿದೆ. ಮುಂದಿನ ದಿನಗಳಲ್ಲಿ ಇಂಥಹ ಇನ್ನಷ್ಟು ಯೋಜನೆಗಳು ಜಾರಿಯಾಗಲಿವೆ. ಹೀಗಾಗಿ ಮುಂದಿನ ದಶಕ ನೀರಾವರಿ ದಶಕ ಎಂದು ಘೋಷಿಸುತ್ತೇನೆ. ನೀರಾವರಿ ಅಭಿವೃದ್ಧಿಗಾಗಿ ಹೆಚ್ಚಿನ ಹಣ ಒದಗಿಸಿ ಯೋಜನೆಗಳು ಪೂರ್ಣಗೊಳ್ಳುವ ವೇಗ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:one + 19 =
Remember me
