ಬೆಂಗಳೂರು:ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯಿಲ್ಲ. ನರೇಂದ್ರ ಮೋದಿಯವರು ದೇಶದ ಆಡಳಿತದ ಚುಕ್ಕಾಣಿ ಹಿಡಿದ ಬಳಿಕ ಈ ಧೋರಣೆ ಬದಲಾಗಿದೆ. ಆದರೆ, ಆಡಳಿತ ವಿರೋಧಿ ಅಲೆಯಿದೆ ಮನಸ್ಥಿತಿಯಿಂದ ಮತಪೂರ್ವ ಸಮೀಕ್ಷೆ ನಡೆಸುವ ಸಂಸ್ಥೆಗಳು ಹೊರಬಂದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಪ್ರತಿಪಾದಿಸಿದರು.
ಬಿಜೆಪಿ ಮಾಧ್ಯಮ ಕೇಂದ್ರಕ್ಕೆ ಸೋಮವಾರ ಚಾಲನೆ ನೀಡಿದ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಕಾರಾತ್ಮಕ ನೆಲೆಯಲ್ಲಿ ಈ ಚುನಾವಣೆಯನ್ನು ಪಕ್ಷ ಎದುರಿಸಲಿದೆ. ಪ್ರಗತಿ ವರದಿ ಮುಂದಿಟ್ಟು ಜನರ ಮತ ಕೇಳಲಿದ್ದೇವೆ ಎಂದರು.
ಇದನ್ನೂ ಓದಿ:VIDEO | ಪಿಸ್ತೂಲ್ ಬಳಸಿ ಕೇಕ್ ಕಟ್ ಮಾಡಿದ ಯುವಕ ಪೊಲೀಸರಿಂದ ಬಂಧನದ ಗಿಫ್ಟ್!

ಪತ್ರಿಕಾಗೋಷ್ಠಿ, ರಾಜ್ಯ ಬಿಜೆಪಿ ಕಛೇರಿ ಬೆಂಗಳೂರು.https://t.co/kxKKofNS5A
ಅಭ್ಯರ್ಥಿಗಳ ಆಯ್ಕೆಗೆ ಬಿಜೆಪಿ ತನ್ನದೇ ಆದ ವಿಧಾನ ಅಳವಡಿಸಿಕೊಂಡಿದೆ. ಈಗಾಗಲೇ ಜಿಲ್ಲಾಮಟ್ಟದಲ್ಲಿ ಅಭಿಪ್ರಾಯ ಸಂಗ್ರಹ, ಜಿಲ್ಲಾ ಕೋರ್ ಕಮಿಟಿಗಳ ಜತೆಗೆ ಚರ್ಚೆಯಾಗಿದೆ. ಮಂಗಳವಾರ ಅಥವಾ ಬುಧವಾರ ರಾಜ್ಯ ಕೋರ್ ಕಮಿಟಿ ಸಭೆ ನಡೆಯಲಿದ್ದು, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು. ಸಂಸದೀಯ ಮಂಡಳಿ ಸಭೆ ಏ.8ರಂದು ನಡೆಯಲಿದೆ. ನಂತರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.
ಪರಿಶಿಷ್ಟ ಜಾತಿ ಮೀಸಲು ವರ್ಗೀಕರಣವು 2011ರ ಜನಸಂಖ್ಯೆ ಹಾಗೂ ಸಚಿವ ಸಂಪುಟದ ಉಪ ಸಮಿತಿ ವರದಿ ಆಧಾರದಲ್ಲಿ ನಿರ್ಧಾರವಾಗಿದೆ. ಬಂಜಾರ ಸೇರಿ ಕೆಲವು ಸಮುದಾಯಗಳ ತಪ್ಪು ಗ್ರಹಿಕೆ ನಿವಾರಣೆ ಪ್ರಯತ್ನ ಚಾಲ್ತಿಯಲ್ಲಿದೆ. ಚುನಾವಣೆಗೆ ಸ್ಪರ್ಧಿಸ ಬಯಸಿರುವ ಕಾಂಗ್ರೆಸ್ ನ ಕೆಲ ನಾಯಕರು ದಾರಿ ತಪ್ಪಿಸಲು ಪ್ರಯತ್ನಿಸಿದ್ದು, ಈ ಸವಾಲು ರಾಜಕೀಯವಾಗಿ ಎದುರಿಸುತ್ತೇವೆ ಎಂದು ಸಿಎಂ ಬೊಮ್ಮಾಯಿ‌ ಸೆಡ್ಡು ಹೊಡೆದರು.ಇದನ್ನೂ ಓದಿ:ಹುಬ್ಬಳ್ಳಿ | 5 ರೂ. ಕೇಳಿದ್ದೇ ತಪ್ಪಾಯ್ತು; ಸಿಟ್ಟಿನಲ್ಲಿ ಬಾಲಕನ ಜೀವ ತೆಗೆದ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + nineteen =
Remember me
