ಬೆಂಗಳೂರು:ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ್ದು ಮಾಜಿ ಸಚಿವ ಗೋವಿಂದ ಕಾರಜೋಳ, ಸಂಸದ ಪಿಸಿ ಮೋಹನ್, ಎಂಎಲ್ ಸಿ ರವಿಕುಮಾರ್ ಉಪಸ್ಥಿತರಿದ್ದರು.
ಈ ಸಂದರ್ಭ ಮಾತನಾಡಿ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದು “ರಾಜ್ಯದ ಬಡ ಜನತೆಗೆ 10 kg ಅಕ್ಕಿ ಕೊಡುತ್ತೇವೆ ಎಂದು ರಾಜ್ಯದ ಜನತೆಗೆ ಮೋಸ ಮಾಡುತಿದ್ದಾರೆ. ದೋಖಾ ಕಾರ್ಯಕ್ರಮ ಘೋಷಿಸಿ ಮಾತು ತಪ್ಪಿದ್ದು ರೈತರ, ಬಡವರು ಬಿಪಿಎಲ್ ಕಾರ್ಡ್​ದಾರದರ ಆಪಾದನೆಯಿಂದ ಪಾರಾಗಲು ರಾಜಕಾರಣ ಮಾಡುತ್ತಿದ್ದಾರೆ” ಎಂದಿದ್ದಾರೆ.
ಕೇಂದ್ರ ಸರಕಾರ ಪುಡ್ ಸೇಕ್ರೆಡ್ ಆಕ್ಟ್ ಪ್ರಕಾರ ಯಾವುದೇ ಖಚ್ಚು ಇಲ್ಲದೆ ರೆಷನ್ ಕೊಡುತ್ತಾ ಬಂದಿದೆ. 5 ಕೆಜಿ ಕೇಂದ್ರ ಸರಕಾರದಿಂದ ಸೇರಿಸಿ 10 kg ಕೊಡುತ್ತಿದ್ದೇವೆ ಎಂದು ಹೇಳಬೇಕಿತ್ತು. ಡಿಸೆಂಬರ್ ದಿಂದ ಗರೀಬ್​ ಕಲ್ಯಾಣದಿಂದ 10kg ಅಕ್ಕಿ ಕೊಟ್ಟಿದ್ದೇವೆ. ಜುಲೈ ತಿಂಗಳಿನಿಂದ 10 KG ಅಕ್ಕಿ ನೀಡದೇ ಹೋದಲ್ಲಿ ಪ್ರತಿಭಟನೆ ಮಾಡುತ್ತೇವೆ.
ಡಿಸೆಂಬರ್ ನಲ್ಲಿ ಫುಡ್ ಸೆಕ್ಯುರಿಟಿ ಆಕ್ಟ್ ಜತೆಗೆ ಟ್ರಾನ್ಸ್‌ಪೋರ್ಟ್‌ ಖರ್ಚನ್ನೂ ರಾಜ್ಯದ ಬದಲು, ಕೇಂದ್ರ ಸರ್ಕಾರ ಬರಿಸುತ್ತಿದ್ದರು. ನಿಮಗೆ ಹಣ ಹೊಂದಿಸಲು ಆಗುತ್ತಿಲ್ಲ. ಮಾತಿಗೆ ತಪ್ಪಿದಂತೆ ಆಗುತ್ತಿದೆ ಎಂದು ಸರ್ಕಾರದ ಮೇಲೆ ಆರೋಪ ಹೊರಿಸುತ್ತಿದ್ದೀರಿ. ಕೇಂದ್ರ ಸರ್ಕಾರವೇ ಮೂರು ರೂ ಟ್ರಾನ್ಸ್‌ಪೋರ್ಟ್ ವೆಚ್ಚ ಭರಿಸುತ್ತಿದೆ.
5 ಕೆ.ಜಿ ಅಕ್ಕಿ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕೊಡುತ್ತಿದೆ. ಕರೊನಾ ಸಂದರ್ಭದಲ್ಲಿ 10ಕೆ.ಜಿ ಕೇಂದ್ರವೇ ಕೊಟ್ಟಿದೆ. ಡಿಸೆಂಬರ್ ತಿಂಗಳವರೆಗೂ ಕೇಂದ್ರವೇ ನೀಡಿದೆ. ಬಳಿಕ ನಾವು ಖರೀದಿ ಕೂಡ ಮಾಡಿದ್ದೆವು. ಅದಾದ ನಂತರ ನಾನು ಪತ್ರ ಬರೆದಿದ್ದೆ. ಈ ಪತ್ರ ಮಾರ್ಚ್​ವರೆಗೂ ಅನ್ವಯ ಆಗಲಿದೆ. FCI ಅಥವಾ ಟೆಂಡರ್ ಮುಖಾಂತರ ಖರೀದಿ ಮಾಡಿ ಅಂತ ಅಧಿಕಾರಿಗಳಿಗೆ ಬರೆದಿದ್ದೆ. ಅದು ಏನಾಗಿದೆ ಅಂತ ನನಗೆ ಗೊತ್ತಿಲ್ಲ” ಎಂದಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಸವರಾಜ ಬೊಮ್ಮಾಯಿ “ಕ್ಯಾಬಿನೆಟ್​ನಲ್ಲಿ ಮಂಜೂರಾತಿ ಮಾಡಿದ್ದೇವೆ ಅಂತ ಸಿದ್ದರಾಮಯ್ಯ ಹೇಳಿದ್ರು ಸಂತೋಷ. ಅಧಿಕಾರಿಗಳ ಜತೆ ಸಭೆ ಮಾಡಿದ್ರು. ನಾನು ಹಿಂದೆಯೇ ಹೇಳಿದ್ದೆ FCI ಮಾತ್ರವೇ ನಂಬಬೇಡಿ. ಬೇರೆ ಟೆಂಡರ್ ಕರೆಯುವ ಬಗ್ಗೆಯೂ ಹೇಳಿದ್ದೆ.
ಮೊದಲ ಕ್ಯಾಬಿನೆಟ್ ಸಭೆಯಲ್ಲೇ ಶಾರ್ಟ್ ಟರ್ಮ್ ಟೆಂಡರ್ ಕರೆದಿದ್ರೆ ಈ ಸಮಸ್ಯೆ ಆಗುತ್ತಿರಲಿಲ್ಲ. ಈಗ FCI ಕೊಡಲಿಲ್ಲ, ಕೇಂದ್ರ ಕೊಡಲಿಲ್ಲ ಅಂತ ಆರೋಪ ಮಾಡುತ್ತಿದ್ದಾರೆ. ನಿಮಗೆ ಹಣಕಾಸು ಹೊಂದಿಸಲು ಆಗುತ್ತಿಲ್ಲ. ಮಾತಿಗೆ ತಪ್ಪಿದಂತೆ ಆಗುತ್ತಿದೆ ಎಂದು ಈಗ ಕೇಂದ್ರದ ಮೇಲೆ ಆರೋಪ ಮಾಡುತ್ತಿದ್ದಾರೆ.
ಕೇಂದ್ರದ ವಿವಿಧ ಯೋಜನೆಯಲ್ಲಿ ಅಕ್ಕಿ ಹೇಗೆ ಹಂಚಬೇಕು ಅನ್ನೋದು ಅವರಿಗೆ ಗೊತ್ತಿರುತ್ತೆ. ಸ್ಟಾಕ್ ಇದೆ ಅಂತ ಮಾತ್ರ ಹೇಳಿದ್ರೆ ಹೇಗೆ? ಓಪನ್ ಮಾರ್ಕೆಟ್ ನಲ್ಲಿ ಖರೀದಿ‌ ಮಾಡಬೇಕಿತ್ತು. ರಾಜಕಾರಣ ಮಾಡ್ತಿರೋದು ಕೇಂದ್ರ ಅಲ್ಲ, ಇವರು. ಈಗಲೂ ಓಪನ್ ಮಾರ್ಕೆಟ್ ಇದೆ ಈಗಲೂ ಶಾರ್ಟ್ ಟೆಂಡರ್ ಕೊಡಲಿ.
ಆಹಾರ ಖರೀದಿ ಮಾಡಿ 10 ಕೆ.ಜಿ ಅಕ್ಕಿ ಕೊಡಲಿ. ಆಗದಿದ್ರೆ ಜನರ ಅಕೌಂಟಿಗೆ ಹಣ ಜಮೆ ಮಾಡಿ. ಜುಲೈ ತಿಂಗಳಿನಲ್ಲಿ ರಾಜ್ಯದ ಜನರಿಗೆ ಅಕ್ಕಿ ಕೊಡಲಿಲ್ಲ ಅಂದ್ರೆ ನಾವು ಜನರನ್ನ ಸೇರಿಸಿ ಹೋರಾಟ ಮಾಡುತ್ತೇವೆ” ಎಂದು ಸಿದ್ದರಾಮಯ್ಯ ಸರ್ಕಾರಕ್ಕೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ಕೊಟ್ಟಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 11 =
Remember me
