ಬೆಂಗಳೂರು:ರಾಜ್ಯ ಕಾಂಗ್ರೆಸ್ ಸರಕಾರ ಮಾಡಿದ ಬೆಲೆ ಏರಿಕೆ, ಮೈಸೂರು ಮುಡಾದಲ್ಲಿ ನಾಲ್ಕೈದು ಸಾವಿರ ಕೋಟಿಯ ಹಗರಣ, ವಾಲ್ಮೀಕಿ ನಿಗಮದ ಹಗರಣ ಸೇರಿ ಆದ ಬ್ರಹ್ಮಾಂಡ ಭ್ರಷ್ಟಾಚಾರ ಕುರಿತು ವಿಧಾನ ಮಂಡಲ ಅಧಿವೇಶನದಲ್ಲಿ ಪ್ರಸ್ತಾಪ ಮಾಡಲಿದ್ದೇವೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ  ತಿಳಿಸಿದರು.
ಬಿಜೆಪಿ ರಾಜ್ಯ ವಿಶೇಷ ಕಾರ್ಯಕಾರಿಣಿಯ ಬಳಿಕ ಗುರುವಾರ ನಡೆದ ಕೋರ್ ಕಮಿಟಿ ಸಭೆಯ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಗೆಲುವು, ಕೆಲವು ಗೆಲ್ಲಲೇಬೇಕಾದ ಕ್ಷೇತ್ರಗಳಲ್ಲಿ ಸೋತ ಸಂಬಂಧ ಅವಲೋಕನ ಸಭೆಯು ಆಯಾ ಜಿಲ್ಲೆಗಳ ಪಕ್ಷಗಳ ಪ್ರಮುಖರ ಜೊತೆ ನಾಳೆ ಮತ್ತು ನಾಡಿದ್ದು (ಜುಲೈ 5-6ರಂದು) ನಡೆಯಲಿದೆ ಎಂದರು.
224 ಕ್ಷೇತ್ರಗಳಲ್ಲಿ ಸಂಘಟನೆ ಬಲಪಡಿಸುವುದು, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಕೆಳಹಂತದ ಸಿದ್ಧತೆ ನಡೆಸಲು ನಿರ್ಧರಿಸಲಾಗಿದೆ. ಸಹಕಾರಿ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿ ತಂಡ ರಚಿಸಿ ಅದರ ಮೇಲ್ವಿಚಾರಣೆ, ಮಾರ್ಗದರ್ಶನ ಸೇರಿ ಹಲವು ವಿಷಯಗಳ ಚರ್ಚೆ ನಡೆಸಿದ್ದೇವೆ ಎಂದು ವಿವರಿಸಿದರು.
ಮುಡಾ ಹಗರಣ ಸಂಬಂಧ ರಾಜೀನಾಮೆ ಅಥವಾ ಭಂಡತನದಿಂದ ಸಮರ್ಥನೆ ಮಾಡುವುದಷ್ಟೇ ಮುಖ್ಯಮಂತ್ರಿಗಳ ಮುಂದಿದೆ. ಸಾರ್ವಜನಿಕವಾಗಿ ಬೆತ್ತಲಾದರೂ ಕೂಡ ಅದಕ್ಕೂ ಸಮರ್ಥನೆ ಕೊಡುವುದಾದರೆ ಇನ್ನೇನು ಹೇಳಲು ಸಾಧ್ಯ ಎಂದು ಅವರು ಪ್ರಶ್ನೆಗೆ ಉತ್ತರಿಸಿದರು.
ಮೈಸೂರಿನ ಜನರು ಇದೊಂದು ಮಹಾಮೋಸ ಎಂದು ಹೇಳುತ್ತಿದ್ದಾರೆ. ಭೂಮಿ ಖರೀದಿ ಬಳಿಕ ಇವರ ಭಾಮೈದ ಜಿಪಿಎ ಮಾಡಿಕೊಂಡಿದ್ದರು. ಅಲ್ಲಿಂದಲೇ ಅಪರಾಧ, ಅಲ್ಲಿಂದಲೇ ಮೋಸ ನಡೆದಿದೆ ಎಂದರು.
ವಾಲ್ಮೀಕಿ ನಿಗಮದ ಹಗರಣದಲ್ಲೂ ಎಂ.ಜಿ ರಸ್ತೆ ಶಾಖೆಗೆ ಹಣ ವರ್ಗಾಯಿಸುವ ಮೂಲಕ ಹಗರಣ ಶುರುವಾಗಿತ್ತು. ಅದೇ ಮಾದರಿಯಲ್ಲಿ ಯಾರದೋ ಆಸ್ತಿಯನ್ನು ಇನ್ಯಾರೋ ಜಿಪಿಎ ಮಾಡಿಸಿಕೊಳ್ಳುವ ಮೂಲಕ ಹಗರಣ ನಡೆದಿದೆ ಎಂದು ಸಿ.ಟಿ.ರವಿ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − two =
Remember me
