ಬೆಂಗಳೂರು:ಕರ್ನಾಟಕ ಬಯಲಾಟ ಅಕಾಡೆಮಿ ವತಿಯಿಂದ 2020-21ನೇ ಸಾಲಿನ ಗೌರವ ಮತ್ತು ವಾರ್ಷಿಕ ಪ್ರಶಸ್ತಿಗೆ ರಾಜ್ಯದ ವಿವಿಧ ಬಯಲಾಟ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 15 ಸಾಧಕರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮ 2022ರ ಏಪ್ರಿಲ್ ಮೊದಲ ವಾರದಲ್ಲಿ ಬಾಗಲಕೋಟೆಯಲ್ಲಿ ಜರುಗಲಿದೆ. ಗೌರವ ಪ್ರಶಸ್ತಿಯು 50 ಸಾವಿರ ನಗದು ಮತ್ತು ವಾರ್ಷಿಕ ಪ್ರಶಸ್ತಿಯು 25 ಸಾವಿರ ನಗದು ಪುರಸ್ಕಾರ ಒಳಗೊಂಡಿದ್ದು, ಎರಡೂ ವರ್ಗದವರಿಗೆ ಸನ್ಮಾನಿಸಲಾಗುತ್ತದೆ ಎಂದು ಬಯಲಾಟ ಅಕಾಡೆಮಿ ರಿಜಿಸ್ಟ್ರಾರ್ ಎನ್. ಹೇಮಾವತಿ ತಿಳಿಸಿದ್ದಾರೆ.
ದೊಡ್ಡಾಟ:ಶಾಂತಪ್ಪ ಬಾಡದ-ಬಾಗಲಕೋಟೆ, ಎಂ.ಎಸ್. ಮಾಳವಾಡ-ಧಾರವಾಡ, ಡಿ.ಬಿ. ಶಿವಣ್ಣ-ದಾವಣಗೆರೆ
ಗೊಂಬೆಯಾಟ:ನಾಗಮ್ಮ ಕೃಷ್ಣಯ್ಯ-ಮಂಡ್ಯ
ಸಣ್ಣಾಟ:ಹನುಮಂತಪ್ಪ ಎಲಿಗಾರ-ಕೊಪ್ಪಳ
ದೊಡ್ಡಾಟ:ರಾಮಶೆಟ್ಟಿ ಬಂಬುಳಗೆ-ಬೀದರ್ , ರಾಮಪ್ಪ ಕುರಬರ-ಹಾವೇರಿ, ಜಿ. ವೀರನಗೌಡ-ಬಳ್ಳಾರಿ.
ಸಣ್ಣಾಟ:ನಾಗಪ್ಪ ಸೂರ್ಯವಂಶಿ-ಬೆಳಗಾವಿ, ನಿಂಗೌಡ ಪಾಟೀಲ-ಬೆಳಗಾವಿ, ಪಾರಿಜಾತ- ದುರುಗವ್ವ- ಬಾಗಲಕೋಟೆ, ಶಿವಪ್ಪ ಕುಂಬಾರ-ಬೆಳಗಾವಿ
ಬಯಲಾಟ:ರೇವಗೊಂಡ ಸಿದರಾಮ ಬಿರಾದರ-ವಿಜಯಪುರ, ಕೆ. ಹೇಮಾರೆಡ್ಡಿ-ಬಳ್ಳಾರಿ
ತೊಗಲು ಗೊಂಬೆಯಾಟ:ಡಾ.ಟಿ. ಗೋವಿಂದರಾಜು-ಬೆಂಗಳೂರು ನಗರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 14 =
Remember me
