ಬೆಂಗಳೂರು:ಬಿಬಿಎಂಪಿ ಮಹಿಳಾ ಅಕೌಂಟ್ಸ್ ಸೂಪರಿಂಡೆಂಟ್ ಕಿರುಕುಳಕ್ಕೆ ಬೇಸತ್ತು ಗುತ್ತಿಗೆದಾರನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಿನ್ನೆ (ಮಂಗಳವಾರ) ನಡೆದಿದೆ.
ಗಿರೀಶ್ (36) ಆತ್ಮಹತ್ಯೆಗೆ ಯತ್ನಿಸಿದ ಕಾಂಟ್ರ್ಯಾಕ್ಟರ್. ಜಯನಗರದ ಬಿಬಿಎಂಪಿ ಅಕೌಂಟ್ ಸೂಪರಿಂಡೆಂಟ್ ಉಷಾರ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಜಯನಗರ ಪಾರ್ಕ್ ನಿರ್ವಹಣೆಯ ಗುತ್ತಿಗೆ ನೀಡುವಂತೆ ಗಿರೀಶ್​ ಕೇಳಿದ್ದ. ಆದರೆ, ಉಷಾ ಹಣದ ಬೇಡಿಕೆ ಇಟ್ಟಿದ್ದರಿಂದ ಗ್ಯಾರೆಂಟಿಯಾಗಿ ಇನ್ನೋವಾ ಕಾರಿನ ದಾಖಲೆಗಳನ್ನು ಗಿರೀಶ್​ ನೀಡಿದ್ದರು. ಆದರೂ, ಕಳೆದ ಒಂದು ವಾರದಿಂದ ಉಷಾ ಹಣಕ್ಕಾಗಿ ಕಿರುಕುಳ ನೀಡಿದ್ರಂತೆ. ಹಣ ನೀಡಲು ನಿರಾಕರಿಸಿದಾಗ ಉಷಾ ಸಂಬಂಧಿಕರಿಂದ ಗಿರೀಶ್ ವಿರುದ್ಧ ದೂರು ಕೂಡ ದಾಖಲಾಗಿದೆ.ಇದನ್ನೂ ಓದಿ:ನಾಗರಬಾವಿಯಲ್ಲಿ ತಮ್ಮನಿಂದ ಅಣ್ಣಂದಿರ ಹತ್ಯೆ
ಇತ್ತ ಉಷಾರ ದೈಹಿಕ ಹಾಗು ಮಾನಸಿಕ ಹಿಂಸೆ ತಾಳಲಾರದೆ ಗುತ್ತಿಗೆದಾರ ಕಾರಿನಲ್ಲೇ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಗಿರೀಶ್​ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಲ್ಲದೆ ಉಷಾ ಸಂಬಂಧಿ ದೀಪಕ್​ರಿಂದ ಗಿರೀಶ್​ಗೆ ಜೀವ ಬೆದರಿಕೆ ಇದೆ ಎಂಬ ಆರೋಪವೂ ಕೇಳಿಬಂದಿದೆ. ಸದ್ಯ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಉಷಾ ಹಾಗು ಸಂಬಂಧಿಕ ದೀಪಕ್ ವಿರುದ್ಧ ಎಫ್ಐಆರ್ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)
ಯುವತಿಗೆ 15 ಲಕ್ಷ ರೂ. ವಂಚಿಸಿದ ಜೋತಿಷಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
