ಬೆಂಗಳೂರು:ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ನೂತನ ಆಯುಕ್ತರಾಗಿ ಎನ್. ಮಂಜುನಾಥ್ ಪ್ರಸಾದ್ ನೇಮಕಗೊಂಡಿದ್ದಾರೆ. ತತ್‌ಕ್ಷಣವೇ ಜಾರಿ ಬರುವಂತೆ ಸರ್ಕಾರ ಈ ಆದೇಶ ಹೊರಡಿಸಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ನಿನ್ನೆಯಷ್ಟೇ(ಶುಕ್ರವಾರ) ಬೆಂಗಳೂರು ಲಾಕ್‍ಡೌನ್ ಕುರಿತು ಮಾತನಾಡಿದ್ದ ಅನಿಲ್ ಕುಮಾರ್, ನಗರದಲ್ಲಿ ಕೋವಿಡ್ ಸೋಂಕಿನ ಚೈನ್​ ಲಿಂಕ್ ಕತ್ತರಿಸಲು ಲಾಕ್‍ಡೌನ್ ಅವಧಿಯ ವಿಸ್ತರಣೆ ಅಗತ್ಯವಿದೆ. ಈ ಬಗ್ಗೆ ರಾಜ್ಯ ಸರ್ಕಾರದ ಮುಂದೆಯೂ ಪ್ರಸ್ತಾವನೆ ಇಟ್ಟಿದ್ದು, ಸಿಎಂ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದರು. ಆದರೆ, ಕರೊನಾ ನಿರ್ವಹಣೆ ಕುರಿತು ಸಿಎಂ ಯಡಿಯೂರಪ್ಪ ನಿನ್ನೆ ನಡೆಸಿದ ಬೆಂಗಳೂರಿನ 8 ವಲಯಗಳ ಉಸ್ತುವಾರಿಗಳ ಸಭೆಯಲ್ಲಿ ಅನಿಲ್​ಕುಮಾರ್​ ಪಾಲ್ಗೊಂಡಿರಲಿಲ್ಲ. ಸಿಎಂ ಅವರೇ ಅನಿಲ್ ಕುಮಾರ್​ರನ್ನು ಸಭೆಯಿಂದ ಹೊರಗಿಟ್ಟಿದ್ದರು ಎನ್ನಲಾಗಿತ್ತು. ಇದೀಗ ಅನಿಲ್​ಕುಮಾರ್​ರನ್ನು ಎತ್ತಂಗಡಿ ಮಾಡಲಾಗಿದೆ.
ಇದನ್ನೂ ಓದಿರಿಸಿಎಂ ಯಡಿಯೂರಪ್ಪಗೆ ಕರೊನಾ ನೆಗೆಟಿವ್​
ಬೆಂಗಳೂರಿನಲ್ಲಿ ಕರೊನಾ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಅನಿಲ್ ಕುಮಾರ್​ರನ್ನು ವರ್ಗಾವಣೆ ಮಾಡಲಾಗಿದೆ ಎನ್ನಲಾಗಿದೆ. ನೂತನ ಕಮಿಷನರ್​ ಮಂಜುನಾಥ್ ಪ್ರಸಾದ್ ಈ ಹಿಂದೆಯೂ ಬಿಬಿಎಂಪಿ ಆಯುಕ್ತರಾಗಿದ್ದವರು.
ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳದಿದ್ರೂ ಬಂತು ಪಾಸಿಟಿವ್ ರಿಪೋರ್ಟ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
