ಬೆಂಗಳೂರು :ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಮಿಷನರ್​ ಗೌರವ್ ಗುಪ್ತ ಅವರ ಅಧಿಕೃತ ಟ್ವಿಟರ್ ಖಾತೆಯು ಇಂದು ಬೆಳಿಗ್ಗೆ ಕೆಲವು ಗಂಟೆಗಳು ಹ್ಯಾಕ್​ ಆಗಿತ್ತು ಎಂದು ತಿಳಿದುಬಂದಿದೆ. ಹ್ಯಾಕರ್​ಗಳು ‘ಗೌರವ್ ಗುಪ್ತ’ ಎಂಬ ಹೆಸರಿನ ಬದಲಿಗೆ ‘ಟೆಸ್ಲಾ’ ಎಂದು ನಮೂದಿಸಿ ಕ್ರಿಪ್ಟೊಕರೆನ್ಸಿಯ ಬಗ್ಗೆ ಕೆಲವು ಟ್ವೀಟ್​ಗಳನ್ನು ಮಾಡಿದರು ಎನ್ನಲಾಗಿದೆ.
ಕಮಿಷನರ್​ ಅವರ ಖಾತೆ ಹ್ಯಾಕ್​ ಆದ ಬಗ್ಗೆ ಬಿಬಿಎಂಪಿ ಮೂಲಗಳು ಇಂಡಿಯನ್​​​ಎಕ್ಸ್​ಪ್ರೆಸ್​.ಕಾಮ್​ಗೆ ತಿಳಿಸಿದ್ದು, ಖಾತೆಯ ನಿಯಂತ್ರಣವನ್ನು ಹಿಂಪಡೆಯುವ ಪ್ರಯತ್ನ ನಡೆದಿದೆ ಎನ್ನಲಾಗಿದೆ. ಈ ಅಧಿಕೃತ ಖಾತೆಯನ್ನು ನಿರ್ವಹಿಸುವ ಬಾಹ್ಯ ಏಜೆನ್ಸಿಯು ಸಮಸ್ಯೆಯನ್ನು ಸರಿಪಡಿಸುತ್ತಿದ್ದು, ಕಮಿಷನರ್​ ಗೌರವ್​ ಗುಪ್ತ ಅವರಿಗೂ ಮಾಹಿತಿ ನೀಡಲಾಗಿದೆ ಎನ್ನಲಾಗಿದೆ.
ಬಿಟ್​ಕಾಯಿನ್​ಗಳನ್ನು ಪಡೆಯುವ ಅವಕಾಶವಿರುವ ಈವೆಂಟ್​ ಬಗ್ಗೆ ಸುದೀರ್ಘ ಪೋಸ್ಟ್​ ಮಾಡಿದ್ದರು ಎನ್ನಲಾಗಿದ್ದು, ಇದೀಗ ಹ್ಯಾಕರ್​ನ ಆ ಟ್ವೀಟ್​ಗಳನ್ನು ತೆಗೆದುಹಾಕಲಾಗಿದೆ. ಆದರೆ ಬಿಬಿಎಂಪಿಯಿಂದ ಈ ಬಗ್ಗೆ ಯಾವುದೇ ಅಧಿಕೃತ ಸಂದೇಶ ಬಂದಿಲ್ಲ ಎನ್ನಲಾಗಿದೆ.(ಏಜೆನ್ಸೀಸ್)
ಜಿರಳೆಯನ್ನು ಪಶು ಆಸ್ಪತ್ರೆಗೆ ಕರೆದುತಂದ ಮಹಾನುಭಾವ!

ವಿದ್ಯಾರ್ಥಿಗಳಿಗೆ ಸಿಹಿಸುದ್ದಿ : ಎಲ್ಲರೂ ಪಾಸ್, ಯಾರೂ ಫೇಲ್​ ಇಲ್ಲ !

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 − 1 =
Remember me
