| ಎಸ್.ಎನ್. ಶಾಸ್ತ್ರಿ ಯಶವಂತಪುರ
ಬಿಬಿಎಂಪಿಯು ಕಟ್ಟಡ ನಿರ್ವಣಕ್ಕಾಗಿ ನಕ್ಷೆ ಪರವಾನಗಿ ಪಡೆಯುವ ಸಾರ್ವಜನಿಕರಿಗೆ ಗಾಯದ ಮೇಲೆ ಬರೆ ಎಳೆದಂತೆ ಶೇ.25 ಶುಲ್ಕ ಹೆಚ್ಚಿಸಿತು. ಆದರೆ, ಶುಲ್ಕ ಪಡೆದ ಬಳಿಕ, ಕಟ್ಟಡ ನಿರ್ವಿುಸಲು ಸಕಾಲದಲ್ಲಿ ಪರವಾನಗಿ ನೀಡದೆಸತಾಯಿಸುತ್ತಿದೆ. ಆರ್.ಆರ್. ನಗರ ವಲಯ ವ್ಯಾಪ್ತಿಯಲ್ಲಿರುವ ಯಶವಂತ ಪುರದ ಐದು ವಾರ್ಡ್​ಗಳಲ್ಲಿ ನೂರಾರು ಕಡತಗಳು ಬಾಕಿ ಉಳಿದಿದ್ದು, ಇವುಗಳ ವಿಲೇವಾರಿಗೆ ಪಾಲಿಕೆ ತ್ವರಿತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಹೊಸ ನಿಯ ಮದ ಪ್ರಕಾರ, ಹಣ ಪಾವತಿಸಿದ ತಕ್ಷಣ ನಕ್ಷೆ ಮಂಜೂರು ಮಾಡಿ ಕೊಡಬೇಕಿದ್ದ ಪಾಲಿಕೆ ಅಧಿಕಾರಿಗಳು ತಿಂಗಳುಗಟ್ಟಲೆ ಕಾಯಿಸá-ತ್ತಿ ದ್ದಾರೆ. ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ತಂತ್ರಾಂಶದಲ್ಲಿನ ನ್ಯೂನತೆ ಮತ್ತಿತರ ಸಬೂಬುಗಳನ್ನು ಹೇಳುತ್ತಿದ್ದಾರೆ. ‘ಕೇಂದ್ರ ಕಛೇರಿಯಲ್ಲಿ ವಿಚಾರಿಸಿ’ ಎಂದು ಸಾಗಹಾಕುತ್ತಿದ್ದಾರೆ. ಜನರು ಕಚೇರಿಗೆ ಅಲೆ ಯುವುದನ್ನು ತಪ್ಪಿಸಲಿಕ್ಕಾಗಿಯೇ ಆನ್​ಲೈನ್ ಸೇವೆಗೆ ಮೊರೆಹೋದವರು, ಮತ್ತೆ ಹಳೇ ದಾರಿಯತ್ತಲೇ ಬೊಟ್ಟು ಮಾಡುತ್ತಿದ್ದಾರೆ!
ಕಟ್ಟಡ ನಿರ್ಮಾಣ ಪರವಾನಗಿ ಮಂಜೂರಾತಿಗೆ ಲಕ್ಷಾಂತರ ಶುಲ್ಕ ವಸೂಲಿ ಮಾಡುವ ಪಾಲಿಕೆ ಅನುಸರಿಸುತ್ತಿರುವ ವಿಳಂಬ ನೀತಿ ಯಿಂದ ಜನರು ಹಲವು ಸಮಸ್ಯೆಗಳಿಗೆ ಸಿಲá-ಕá-ತ್ತಿದ್ದಾರೆ. ಕಟ್ಟಡ ನಿರ್ವಿುಸಲು ಬ್ಯಾಂಕ್ ಸಾಲದ ಹೊರೆ ಒಂದೆಡೆಯಾದರೆ, ಪಾಲಿಕೆಯ ಉದಾಸೀನತೆ ಮತ್ತೊಂದೆಡೆ. ‘ಬಿಬಿಎಂಪಿಯಲ್ಲಿ ಹಣದ ಕೊರತೆ ಇದೆ ಎನ್ನುವ ಅಧಿಕಾರಿಗಳಿಗೆ ನಕ್ಷೆ ಮಂಜೂರಾತಿಯಿಂದ ಕೋಟ್ಯಂತರ ರೂ. ಆದಾಯ ಬರುವುದರ ಬಗ್ಗೆ ಗಮನವಿಲ್ಲವೇಕೆ? ಕಚೇರಿಗಳಿಗೆ ಭೇಟಿ ನೀಡಬೇಕು ಎನ ್ನುವುದಾದರೆ ಆನ್​ಲೈನ್ ವ್ಯವಸ್ಥೆ ಮಾಡಿದ್ದಾದರೂ ಯಾಕೆ ಎಂದು ಸಾರ್ವಜನಿಕರು ದೂರಿದ್ದಾರೆ.
ಅಧಿಕಾರಿಗಳ ಅಸಹಾಯಕತೆ
ತಂತ್ರಾಂಶದಲ್ಲಿನ ನ್ಯೂನತೆಗಳ ಬಗ್ಗೆ ಪಾಲಿಕೆ ಕೇಂದ್ರ ಕಚೇರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಆದರೆ, ‘ವ್ಯವಸ್ಥಿತ ತಂತ್ರಾಂಶ ಸಿದ್ಧ ಗೊಳ್ಳುತ್ತಿರುವುದರಿಂದ ವಿಳಂಬವಾಗುತ್ತಿದೆ’ ಎಂಬ ಉತ್ತರ ಬರುತ್ತಿದೆ. ಹೀಗಾಗಿ, ಕಟ್ಟಡ ನಿರ್ಮಾಣ ಮಾಲೀಕರಿಗೆ ಸಬೂಬು ಹೇಳಬೇಕಾದಂತ ಪರಿಸ್ಥಿತಿ ನಿರ್ವಣವಾಗಿದೆ ಎಂದು ಪಾಲಿಕೆ ವಲಯ ಕಚೇರಿಯ ಅಧಿಕಾರಿಯೊಬ್ಬರು ಅಸಹಾಯಕತೆ ತೋಡಿಕೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 2 =
Remember me
