ಬೆಂಗಳೂರು:ಬಿಬಿಎಂಪಿ ಕಸದ ಲಾರಿಯು ಬೆಂಗಳೂರಿಗರ ಪಾಲಿಗೆ ಯಮದೂತನಾಗಿದ್ದು, ಅದರ ಅಪಘಾತದಿಂದ ಆಗುತ್ತಿರುವ ಸಾವಿನ ಸರಣಿ ಮುಂದುವರಿದಿದೆ. ಎಷ್ಟೇ ಕ್ರಮ ವಹಿಸಿದರೂ ಬಿಬಿಎಂಪಿ ಲಾರಿಗೆ ಬಲಿಯಾಗುತ್ತಿರುವ ಸಂಖ್ಯೆ ಏರುತ್ತಲೇ ಇದೆ. ಇದೀಗ ದ್ವಿಚಕ್ರ ವಾಹನ ಸವಾರ ಬಿಬಿಎಂಪಿ ಲಾರಿಗೆ ಬಲಿಯಾಗಿದ್ದಾನೆ.
ಯಶವಂತ್ (26) ಮೃತ ದುರ್ದೈವಿ. ಲಾರಿ ಚಾಲಕರು ಮೆಟ್ರೋ ನಿಲ್ದಾಣದ ಕೆಳಭಾಗದಲ್ಲಿ ಅವೈಜ್ಞಾನಿಕವಾಗಿ ಪಾರ್ಕಿಂಗ್ ಮಾಡಿದ್ದರು. ಬನಶಂಕರಿ ಮಾರ್ಗದಿಂದ ಸೌತ್ ಎಂಡ್ ಸರ್ಕಲ್ ಕಡೆ ಯಶವಂತ್​ ಬೈಕ್​ನಲ್ಲಿ ಹೊರಟಿದ್ದ ವೇಳೆ ಜಯನಗರ ಮೆಟ್ರೋ ನಿಲ್ದಾಣದ ಬಳಿ ಬೈಕ್​ ನಿಯಂತ್ರಣಕ್ಕೆ ಸಿಗದೆ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಯಶವಂತ್​ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಇದನ್ನೂ ಓದಿ:ಟೀಮ್ ಇಂಡಿಯಾ ದಿಗ್ಗಜರ ಸಾಲಿಗೆ ಸೇರಿದ ಶುಭಮಾನ್ ಗಿಲ್: ಭಾರತ ಪರ ವೇಗದ ಅರ್ಧಶತಕ ಸಿಡಿಸಿದ ಸೂರ್ಯಕುಮಾರ್
ಈ ಅಪಘಾತ ನಿನ್ನೆ (ಸೆ.24) ರಾತ್ರಿ 12 ಗಂಟೆ ಸುಮಾರಿಗೆ ಜಯನಗರ ಮೆಟ್ರೋ ಸ್ಟೇಷನ್ ರಸ್ತೆಯಲ್ಲಿ ನಡೆದಿದೆ. ಘಟನಾ ಸ್ಥಳಕ್ಕೆ ಜಯನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಯಶವಂತ್​, ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ. ಆರು ತಿಂಗಳ ಹಿಂದಷ್ಟೇ ಹೊಸ ಕಂಪನಿ ಸೇರಿದ್ದ. ಯಶವಂತ್​ಗೆ ಹೆಂಡತಿ ಮತ್ತು ಎಂಟು ತಿಂಗಳ ಮಗು ಇದೆ. ಇದೀಗ ಕುಟುಂಬದ ಆಧಾರಸ್ತಂಭ ಕಳೆದುಕೊಂಡು ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಕುಟುಂಬಕ್ಕೆ ಯಾರು ಗತಿ ಅನ್ನೋ ಪ್ರಶ್ನೆ ಮೂಡಿದೆ.
ಸದ್ಯ ಯಶವಂತ್​ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತದೆ.
ಬಿಬಿಎಂಪಿ ಕಸದ ಲಾರಿಗೆ ಮತ್ತೊಂದು ಬಲಿ: ಬೈಕ್​ ಸವಾರ ದುರಂತ ಸಾವು, ಸ್ಥಳೀಯರ ಆಕ್ರೋಶ

ಬಿಬಿಎಂಪಿ ಕಸದ ಲಾರಿಗೆ ಮತ್ತೊಂದು ಬಲಿ: ವೃದ್ಧೆಯ ಕಾಲುಗಳ ಮೇಲೇ ಸಾಗಿಹೋದ ಚಕ್ರಗಳು!

ಬಿಬಿಎಂಪಿ ಲಾರಿಗೆ ದಂಪತಿ ಬಲಿ: ಇಬ್ಬರು ಹೆಣ್ಣು ಮಕ್ಕಳ ನೆರವಿಗೆ ನಿಂತ ಟ್ರಾಫಿಕ್ ಪೊಲೀಸರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + eight =
Remember me
