ಬೆಂಗಳೂರು: ಲಾಕ್​ಡೌನ್ ಹಿನ್ನೆಲೆಯಲ್ಲಿ ವಲಸೆ ಮತ್ತು ಕಟ್ಟಡ ಕೂಲಿ ಕಾರ್ವಿುಕರ ಕುಟುಂಬಗಳು ಹಾಗೂ ಅಗತ್ಯವಿರುವವರು ಆಹಾರ ಪದಾರ್ಥ ಗಳ (ದಿನಸಿ) ಕಿಟ್ ಪಡೆಯಲು ನೆರವಾಗುವಂತೆ ಸಹಾಯವಾಣಿಯನ್ನು ಬಿಬಿಎಂಪಿ ಆರಂಭಿಸಿದೆ.
ನಾಲ್ಕೈದು ದಿನಗಳಿಂದ ಕಟ್ಟಡ ಕೂಲಿ ಕಾರ್ವಿುಕರು, ವಲಸೆ ಕಾರ್ವಿುಕರು ಹಾಗೂ ಬಡವರ್ಗದ 58 ಸಾವಿರ ಕುಟುಂಬಗಳನ್ನು ಗುರುತಿಸಿ ದಿನಸಿ ಕಿಟ್ ನೀಡಲಾಗಿದೆ. ಪಾಲಿಕೆ ಅಧಿಕಾರಿಗಳ ಗಮನಕ್ಕೆ ಬಾರದ ಕುಟುಂಬಗಳಿಗೆ ನೆರವಾಗಲು ಸಹಾಯವಾಣಿ (ದೂ: 94806 85888) ಆರಂಭಿಸಲಾಗಿದೆ. ಕರೆ ಮಾಡಿದರೆ ಫಲಾನುಭವಿಗಳು ಇರುವ ಸ್ಥಳಕ್ಕೆ ಬಂದು ಕಿಟ್ ವಿತರಿಸಲಾಗುತ್ತದೆ. ಸಹಾಯವಾಣಿ ಜತೆಗೆ ವಲಯವಾರು ಬಿಬಿಎಂಪಿ ಕಂಟ್ರೋಲ್ ರೂಂ ನಂಬರ್​ಗಳಿಗೆ ಕರೆ ಮಾಡಿ, ದಿನಸಿ ಕಿಟ್ ಕೊಡುವಂತೆ ಮನವಿ ಮಾಡಿದರೆ, ಅವರ ಸ್ಥಿತಿಗತಿ ಪರಿಗಣಿಸಿ ವಿತರಿಸಲಾಗುತ್ತದೆ. ಮಾಹಿತಿಗೆ ವಲಯ ವಾರು ಜಂಟಿ ಆಯುಕ್ತರನ್ನು ಸಂರ್ಪಸಬಹುದು.
ವ್ಯಾಪಾರಿಗಳಿಂದ ದಿನಸಿ ಕಿಟ್​ಗೆ ಮನವಿ:ಲಾಕ್​ಡೌನ್ ಮುಂಚಿತವಾಗಿಯೇ ಸಾಂಕ್ರಾಮಿಕ ರೋಗದ ನೆಪವೊಡ್ಡಿ ಬೀದಿಬದಿ ಕಾರ್ವಿುಕರು ವ್ಯಾಪಾರ ಮಾಡದಂತೆ ನಿರ್ಬಂಧಿಸ ಲಾಗಿದೆ. ಇದರಿಂದ ವ್ಯಾಪಾರವಿಲ್ಲದೆ ನೂರಾರು ಕುಟುಂಬಗಳು ಸಂಕಷ್ಟ ಅನುಭವಿಸುತ್ತಿವೆ. ಇವರಿಗೂ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಬೇಕು ಎಂದು ಕರ್ನಾಟಕ ಬೀದಿಬದಿ ವ್ಯಾಪಾರಿಗಳ ಸಂಘಟನೆ ಮನವಿ ಮಾಡಿದೆ.
ಸಮರ್ಥನಂ ಸಂಸ್ಥೆಯಿಂದಲೂ ಆಹಾರ ಪದಾರ್ಥ ವಿತರಣೆ:ಬಡ ಜನರಿಗಾಗಿ ಸಹಾಯಹಸ್ತ ಚಾಚಿರುವ ಸಮರ್ಥನಂ ಅಂಗವಿಕಲರ ಸಂಸ್ಥೆ ಉಚಿತವಾಗಿ ಆಹಾರ ಸಾಮಗ್ರಿಗಳನ್ನು ವಿತರಿಸುವ ಮೂಲಕ ಸಾರ್ಥಕತೆ ಮೆರೆಯುತ್ತಿದೆ. ದಾನಿಗಳ ಸಹಕಾರದೊಂದಿಗೆ ಅಕ್ಕಿ, ಗೋಧಿಹಿಟ್ಟು, ಬೇಳೆ, ಅಡುಗೆ ಎಣ್ಣೆ, ಸೋಪು, ಟೀ ಪೌಡರ್, ಸಾಂಬಾರ್ ಪೌಡರ್, ತರಕಾರಿ, ಹ್ಯಾಂಡ್ ಸ್ಯಾನಿಟೈಸರ್, ಮಾಸ್ಕ್ ಹೀಗೆ 15ಕ್ಕೂ ಹೆಚ್ಚು ಪದಾರ್ಥಗಳ ಕಿಟ್ ತಯಾರಿಸಿ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಏ.6ರಂದು ಕಿಟ್ ವಿತರಣೆ ಆರಂಭಿಸಿದ್ದು, ಮೊದಲ ಹಂತದಲ್ಲಿ 25 ಲಕ್ಷ ರೂ. ಮೌಲ್ಯದ ಸಾಮಗ್ರಿ ವಿತರಿಸಿದೆ. ಲಾಕ್ ಡೌನ್ ಅಂತ್ಯವಾಗುವವರೆಗೂ ಕಿಟ್ ವಿತರಣೆ ನಡೆಯಲಿದೆ. ಬಡವರು, ಅಂಗವಿಕಲರು, ನಿರಾಶ್ರಿತರು ಫೋನ್ ಮಾಡಿದರೆ ಸಂಸ್ಥೆ ಸಿಬ್ಬಂದಿ ಕಿಟ್ ತಲುಪಿಸುತ್ತಾರೆ. ಬಡವರು ಮತ್ತು ನಿರಾಶ್ರಿತರ ಬಳಿ ದೂರವಾಣಿ ಸಂಪರ್ಕದ ವ್ಯವಸ್ಥೆ ಇಲ್ಲದಿರುವುದರಿಂದ ಸ್ಥಳೀಯರು ನವೀನ್ (ದೂ: 94498 64786), ಸುನಿಲ್ (94498 64691) ಅಥವಾ ರಾಘವೇಂದ್ರ (94832 37158) ಅವರನ್ನು ಸಂರ್ಪಸು ವಂತೆ ಸಂಸ್ಥೆ ಸಂಸ್ಥಾಪಕ ಜಿ.ಕೆ. ಮಹಂತೇಶ್ ಮನವಿ ಮಾಡಿದ್ದಾರೆ.
ಗ್ರಾಹಕರ ಮನೆ ಬಾಗಿಲಿಗೆ ಸೇವೆ ಶ್ರೀ ತ್ಯಾಗರಾಜ ಸಹಕಾರ ಬ್ಯಾಂಕ್​ನಿಂದ ವ್ಯವಸ್ಥೆ:ಲಾಕ್​ಡೌನ್ ಆಗಿರುವ ಸಂದರ್ಭದಲ್ಲಿ ಗ್ರಾಹಕರಿಗೆ ಸೂಕ್ತ ಸೇವೆ ನೀಡಲು ಶ್ರೀ ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕ್ ಮನೆ ಬಾಗಿಲಿಗೆ ನಗದು ಪಾವತಿ ಹಾಗೂ ಸ್ವೀಕೃತಿ ಸೇವೆ ಆರಂಭಿಸಿದೆ. ಲಾಕ್​ಡೌನ್​ನಿಂದ ಬ್ಯಾಂಕಿಂಗ್ ಸೇವೆಯಲ್ಲೂ ವ್ಯತ್ಯಯವಾಗಿದೆ. ಗ್ರಾಹಕರ ಅನುಕೂಲಕ್ಕಾಗಿ ಬ್ಯಾಂಕ್ ಗ್ರಾಹಕರ ಮನೆ ಬಾಗಿಲಿಗೆ ತೆರಳಿ 25 ಸಾವಿರ ರೂ.ವರೆಗೆ ನಗದು ಸ್ವೀಕೃತಿ ಹಾಗೂ ಪಾವತಿ ಸೇವೆಯನ್ನು ಒದಗಿಸುತ್ತಿದೆ ಎಂದು ಬ್ಯಾಂಕ್ ಅಧ್ಯಕ್ಷ ಡಾ. ಎಂ.ಆರ್. ವೆಂಕಟೇಶ್ ತಿಳಿಸಿದ್ದಾರೆ. ಸಣ್ಣ ವ್ಯಾಪಾರಿಗಳು, ಗುಡಿ ಕೈಗಾರಿಕೆಗಳು ಹಾಗೂ ಸ್ವ-ಉದ್ಯೋಗ ಕೈಗೊಳ್ಳುವವರಿಗೆ ‘ಗುಂಪು ಸಾಲ’ ಯೋಜನೆಯಡಿ ಕನಿಷ್ಠ 25 ಸಾವಿರದಿಂದ 5 ಲಕ್ಷ ರೂ. ವರೆಗೂ ಸಾಲ ನೀಡಲಾಗುತ್ತಿದೆ. ಇದರಲ್ಲಿ ಗುಡಿ ಕೈಗಾರಿಕೆ ನಡೆಸುವ ಸ್ತ್ರೀಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಡಿಮೆ ವೆಚ್ಚದ ಗೃಹ ನಿರ್ಮಾಣ ಯೋಜನೆಗಳಿಗೆ ಪರಿಷ್ಕೃತ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲಾಗುವುದು ಎಂದು ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ದೂ: 080- 2295 8156/57 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಭರ್ಜರಿ ಹನಿಮೂನ್​!- ಐಷಾರಾಮಿ ರೆಸಾರ್ಟ್​ನಲ್ಲಿ ಇರೋದು ಇದೊಂದೇ ಜೋಡಿ- 6 ದಿನಕ್ಕೆ ಬಂದವರೀಗ 26 ದಿನ ಇರುವಂತಾಗಿದೆ ನೋಡಿ..

ಲಾಕ್​ಡೌನ್ ಪಾಸ್ ವಿತರಣೆಯ ವಿಚಾರದಲ್ಲಿ ಸಂಘರ್ಷದ ಎಚ್ಚರಿಕೆ ನೀಡಿದ ಕಾಂಗ್ರೆಸ್!

ಸೂಪರ್ ಲವ್ ಸ್ಟೋರಿ!: ಸಿನಿಮಾವನ್ನೂ ಮೀರಿದ ಕಥೆ ಈಕೆಯದ್ದು..

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:fourteen + five =
Remember me
