
ಬೆಂಗಳೂರು:ಬಿಬಿಎಂಪಿ ವಲಯದಲ್ಲಿನ ಆರೋಗ್ಯ ಸೇವೆಗಳ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ವಿಕಾಸಸೌಧದಲ್ಲಿ ಸಭೆ ನಡೆಯಿತು.ಆರೋಗ್ಯ ಸೇವೆಯನ್ನು ಇನ್ನಷ್ಟು ಉತ್ತಮಪಡಿಸಲು ಹಾಗೂ ಆಡಳಿತಾತ್ಮಕ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ವಿಸ್ಮತವಾಗಿ ಚರ್ಚೆ ನಡೆಯಿತು.ಸಭೆಯ ಬಳಿಕ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಬಿಬಿಎಂಯ ಮುಖ್ಯ ಆಯುಕ್ತರು ಸೇರಿ ಎಲ್ಲರೂ ಚರ್ಚೆ ಮಾಡಿದ್ದೇವೆ. ಕೆಲವೊಂದಿಷ್ಟು ಗೊಂದಲಗಳಿವೆ. ಸರಿಪಡಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದೇವೆ ಎಂದರು.ಬಿಬಿಎಂಪಿ, ಕೆಲವು ಆಸ್ಪತ್ರೆಯನ್ನ ನಿರ್ವಹಣೆ ಮಾಡ್ತಿದೆ. ಇನ್ನು ಕೆಲವನ್ನ ಆರೋಗ್ಯ ಇಲಾಖೆ ಮಾಡುತ್ತಿದೆ. ಬಿಬಿಎಂಪಿ ಹೊರವಲಯದ ಆಸ್ಪತ್ರೆಗೆ ಜಿಲ್ಲಾ ಪಂಚಾಯತ್ ಮೂಲಕ ಅನುದಾನ ಬರುತ್ತಿದೆ. ಇನ್ನು ಕೆಲವು ಆಸ್ಪತ್ರೆಗೆ ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ಅನುದಾನ ಕೊಡುತ್ತಿದೆ. ಹೀಗಾಗಿ ಎಲ್ಲಾ ವ್ಯವಸ್ಥೆಗಳ ಬಗ್ಗೆ ಗೊಂದಲವಿಲ್ಲದ ಪಾರದರ್ಶಕತೆ ತರಬೇಕಿದೆ ಎಂದರು.ಪ್ರಾಥಮಿಕ ಆಸ್ಪತ್ರೆಗಳು ಮತ್ತು ಮೆಟರ್‌ನಿಟಿ ಆಸ್ಪತ್ರೆಗಳನ್ನ ಬಿಬಿಎಂಪಿಯವರು ನಾವೇ ನೋಡಿಕೊಳ್ಳೊದಾಗಿ ಹಾಗೂ ಉಳಿದ ಹೆಚ್ಚಿನ ಸೌಲಭ್ಯ ಇರೋ ಆಸ್ಪತ್ರೆಗಳನ್ನ ಆರೋಗ್ಯ ಇಲಾಖೆಯೇ ನೋಡಿಕೊಳ್ಳಿ ಎಂದು ಹೇಳಿದ್ದಾರೆ. ನಿರ್ವಹಣೆ ಸಮಸ್ಯೆ ಉಂಟಾಗಿರುವುದರಿಂದ ಅವರು ಹೀಗೆ ಹೇಳಿದ್ದಾರೆ ಎಂದರು.ಓವರ್ ಲ್ಯಾಪ್ ಆಗಬಾರದು. ಕ್ಲಿಯರ್ ಆಗಿ ಯಾರ ಅಂಡರ್ ಯಾವ ಆಸ್ಪತ್ರೆ ಬರುತ್ತೆಅನ್ನೊದರ ಬಗ್ಗೆ ಕ್ಲಾರಿಟಿ ಇರಬೇಕು. ಆದ್ದರಿಂದ ಗೊಂದಲ ಮತ್ತು ಸಮಸ್ಯೆಗಳ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಳಿ ಚರ್ಚೆ ಮಾಡಿ ನಾವು ತೀರ್ಮಾನಕ್ಕೆ ಬರುತ್ತೇವೆ ಎಂದು ಹೇಳಿದರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 − 11 =
Remember me
