ಬೆಂಗಳೂರು:ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಸಂಚಾರ ಸಮಸ್ಯೆಯ ಜೊತೆಗೆ ವಾಹನ ನಿಲುಗಡೆ ಸಮಸ್ಯೆ ಕೂಡಾ ಹೆಚ್ಚಾಗುತ್ತಿದೆ.ಇದಕ್ಕೆ ಪರಿಹಾರವೆಂಬಂತೆ ಬಿಬಿಎಂಪಿ ಪ್ರೀಡಂ ಪಾರ್ಕ್‌ನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ದೇಶದಲ್ಲೇ ಮೊಟ್ಟ ಮೊದಲ ಅಡ್ವಾನ್ಸ್ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯನ್ನು ಪರಿಚಯಿಸಿದೆ.ಇದು ‘ಬ್ರಾಂಡ್ ಬೆಂಗಳೂರು’ ಯೋಜನೆಯ ಮೊದಲನೇ ಕಾರ್ಯಕ್ರಮ.
ಹೌದು ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಸರ್ವೇ ಸಾಮಾನ್ಯ.ಟ್ರಾಫಿಕ್ ಸಮಸ್ಯೆಯ ಜೊತೆಗೆ ಬ್ಯುಸಿ ಏರಿಯಾಗಳಾದ ಮೆಜೆಸ್ಟಿಕ್,ಮಾರ್ಕೆಟ್,ಚಿಕ್ಕಪೇಟೆ,ಕಾರ್ಪೊರೇಷನ್,ವಿಧಾನಸೌಧ ಸುತ್ತಮುತ್ತಲ ಪ್ರದೇಶದಲ್ಲಿ ಪಾರ್ಕಿಂಗ್ ಸಮಸ್ಯೆ ಕೂಡಾ ವಾಹನ ಮಾಲೀಕರನ್ನು ಹೈರಾಣಾಗಿಸಿದೆ.ಎಲ್ಲೆಂದೆರಲ್ಲಿ ವಾಹನ ನಿಲ್ಲಿಸಿದರೆ ಪೊಲೀಸರು ದಂಡ ವಿಧಿಸುವ ಆತಂಕ ಒಂದು ಕಡೆಯಾದರೆ;ಕೆಲ ಖಾಸಗಿ ಪಾರ್ಕಿಂಗ್ ಕೇಂದ್ರಗಳು ಕ್ರಮಬದ್ಧವಾಗಿ ನಡೆಯುತ್ತಿಲ್ಲ ಎಂಬುದು ಮತ್ತೊಂದು ಕೊರಗು.ಈ ಎಲ್ಲ ಸಮಸ್ಯೆಗಳಿಗೆ ಕೊಂಚಮಟ್ಟಿನ ಪರಿಹಾರವೆಂಬಂತೆ ವಾಹನ ಮಾಲೀಕರಿಗೆ ಬಿಬಿಎಂಪಿ ಸಿಹಿ ಸುದ್ದಿಯೊಂದನ್ನು ನೀಡಿದೆ.
ಬೆಂಗಳೂರಿನ ಹೃದಯ ಭಾಗದಲ್ಲಿರುವ ಫ್ರೀಡಂಪಾರ್ಕ್‌ನಲ್ಲಿ ಬಿಬಿಎಂಪಿ ಖಾಸಗಿ ಸಹಭಾಗಿತ್ವದಲ್ಲಿ ಸುಸಜ್ಜಿತ ದೇಶದ ಮೊಟ್ಟ ಮೊದಲ ಅಡ್ವಾನ್ಸ್ ತಂತ್ರಜ್ಞಾನದ ಹೈಫೈ ಸ್ಮಾರ್ಟ್ ಪಾರ್ಕಿಂಗ್ ಕೇಂದ್ರವನ್ನು ನಿರ್ಮಾಣ ಮಾಡಿದ್ದು,ಇದೇ ಜೂ.20ರಂದು ಸಾರ್ವಜನಿಕ ಸೇವೆಗೆ ತೆರೆದುಕೊಳ್ಳಲಿದೆ. 600ಕಾರು ಮತ್ತು750ದ್ವಿಚಕ್ರ ವಾಹನಗಳ ನಿಲುಗಡೆಗೆ ಅವಕಾಶವಿದ್ದು,ಬೆಂಗಳೂರಿನ ಮತ್ತಿನ್ನೆಲ್ಲೂ ಇಲ್ಲದ ವಿಶಾಲ ಸ್ಥಳಾವಕಾಶವನ್ನು ಪ್ರತಿ ವಾಹನಕ್ಕೆ ಮೀಸಲಾಗಿಡಲಾಗಿದೆ.ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಿರುವುದು ಹಾಗೂ ಕನ್ನಡ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಪೇಂಟಿಂಗ್‌ಗಳು ನೋಡುಗರ ಗಮನ ಸೆಳೆಯುತ್ತಿವೆ.
ಡಿಜಿಟಲ್ ಇಂಡಿಯಾ ಪರಿಕಲ್ಪನೆಯಲ್ಲಿ,ಬಿಬಿಎಂಪಿ ಮಹತ್ವಾಕಾಂಕ್ಷೆಯ ‘ಬ್ರಾಂಡ್ ಬೆಂಗಳೂರು’ ಯೋಜನೆಯ ಮೊದಲ ಕಾರ್ಯಕ್ರಮವಾಗಿ ನಿಮಾಣಗೊಂಡಿರುವ ಈ ಪಾರ್ಕಿಂಗ್ ಕೇಂದ್ರವು ಸಂಪೂರ್ಣ ಡಿಜಿಟಲೈಜ್ಡ್ ಆಗಿದ್ದು,ಅತ್ಯಾಧುನಿಕ ಸೆನ್ಸಾರ್ ತಂತ್ರಜ್ಞಾನದಿಂದ ಕೂಡಿದೆ.ದುಬೈ ಮೂಲದ ಸಿಎಎಸ್‌ಎಸ್ ಎಂಬ ಸಾಫ್ಟ್​ವೇರ್ ಕಂಪನಿಯು ಇಲ್ಲಿನ ಎಲ್ಲ ತಂತ್ರಾಂಶವನ್ನು ರೂಪಿಸಿದೆ.
ವಾಹನಗಳ ಆಗಮನ,ನಿರ್ಗಮನ,ಅವಧಿ,ಹಣ ಪಾವತಿ,ಸರಿಯಾದ ನಿಲುಗಡೆ,ಅಪಾಯದ ಮುನ್ಸೂಚನೆ,ಮಹಿಳೆಯರಿಗೆ ಭದ್ರತಾ ವ್ಯವಸ್ಥೆ,ಅಂಗವಿಕಲರಿಗೆ ಆದ್ಯತೆ ಹೀಗೆ ಪ್ರತಿಯೊಂದನ್ನು ತಂತ್ರಜ್ಞಾನದ ಮೂಲಕ ವಿನ್ಯಾಸಗೊಳಿಸಲಾಗಿದೆ.
ದೇಶದಲ್ಲಿ ಇದೇ ಮೊದಲ ಬಾರಿಗೆ ಪಾರ್ಕಿಂಗ್ ಕೇಂದ್ರವೊಂದು ಾಸ್ಟ್‌ಟ್ಯಾಗ್ ಮೂಲಕ ಹಣಪಾವತಿಗೆ ವ್ಯವಸ್ಥೆ ಕಲ್ಪಿಸಿದೆ.ಇದಕ್ಕಾಗಿ ಹೈಸೆನ್ಸಾರ್ಡ್ ಕ್ಯಾಮೆರಾ,ಎಲ್ಲ600ಕಾರು ನಿಲುಗಡೆಗೂ ಪ್ರತ್ಯೇಕ ಸೆನ್ಸಾರ್ ಲೈಟ್ ಅಳವಡಿಸಲಾಗಿದೆ.ಪ್ರತಿಯೊಂದು ಪ್ರಕ್ರಿಯೆಯೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ,ಕ್ಯಾಮೆರಾ ಸೆನ್ಸಾರ್ ಮೂಲಕ ನಿಯಂತ್ರಣಗೊಳ್ಳಲಿದೆ.
ಪ್ರಿನ್ಸ್ ರಾಯಲ್ ಪಾರ್ಕಿಂಗ್ ಸಲ್ಯೂಷನ್ಸ್ ಎಂಬ ಸಂಸ್ಥೆಯು ಬಿಬಿಎಂಪಿಯೊಂದಿಗೆ10+5ವರ್ಷಗಳ ಒಪ್ಪಂದ ಮಾಡಿಕೊಂಡು ಈ ಪಾರ್ಕಿಂಗ್ ಕೇಂದ್ರವನ್ನು ನಿರ್ಮಾಣ ಮಾಡಿದೆ.ವರ್ಷಕ್ಕೆ1.5ಕೋಟಿ ರೂಪಾಯಿ ಬಿಬಿಎಂಪಿಗೆ ನೀಡಬೇಕಿದ್ದು,ಈ ಮೊತ್ತವು ಪ್ರತಿವರ್ಷ ಶೇ.10ಹೆಚ್ಚಾಗಲಿದೆ.ಅತ್ಯಾಧುನಿಕ ಪಾರ್ಕಿಂಗ್ ಕೇಂದ್ರ ನಿರ್ಮಾಣಕ್ಕೆ7ಕೋಟಿ ರೂಪಾಯಿ ವ್ಯಯಿಸಿರುವುದಾಗಿ ಸಂಸ್ಥೆಯ ಎಂ.ಡಿ.ಕುಮಾರ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.
ಫ್ರೀಡಂಪಾರ್ಕ್‌ನಲ್ಲಿ ಬಿಬಿಎಂಪಿ ನಿರ್ಮಾಣ ಮಾಡಿರುವ ಪ್ರತಿಭಟನಾ ಸಭಾಂಗಣ ಕಟ್ಟಡದ ಬೇಸ್‌ಮೇಟ್,ನೆಲಮಹಡಿ ಮತ್ತು ಮೊದಲನೇ ಮಹಡಿಯನ್ನು ಪಾರ್ಕಿಂಗ್‌ಗೆ ಬಳಸಿಕೊಳ್ಳಲಾಗಿದೆ.ಸುಮಾರು60ಸಿಬ್ಬಂಧಿಗಳು ಇಲ್ಲಿ ಕೆಲಸ ನಿರ್ವಹಿಸಲಿದ್ದಾರೆ.
ಫ್ರೀಡಂಪಾರ್ಕ್‌ನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ‘ರೈಟ್ ಪಾರ್ಕಿಂಗ್’ ಹೆಸರಿನ ಪಾರ್ಕಿಂಗ್ ಕೇಂದ್ರದಲ್ಲಿ ಗ್ರಾಹಕರಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಫ್ರೀ ವೈಫೈ,ಕಾರ್ ಸ್ಪಾ,ಹೈಫೈ ಶೌಚಾಲಯ,ಆರ್.ಓ.ನೀರಿನ ಘಟಕ,ಇವಿ ಚಾರ್ಜಿಂಗ್ ಪಾಯಿಂಟ್,ಕಾಫಿ ಶಾಪ್,ಅಂಗವಿಕಲರಿಗಾಗಿ ವ್ಹೀಲ್ ಚೇರ್,ಆ್ಯಂಬುಲೆನ್ಸ್ ಸರ್ವೀಸ್ ಲಭ್ಯ ಇದೆ.ಮಹಿಳೆಯ ಭದ್ರತೆಗಾಗಿ ಸೈರಲ್ ಬಟನ್ ಅಳವಡಿಸಲಾಗಿದ್ದು,ಯಾವುದೇ ರೀತಿಯ ಅಪಾಯಕ್ಕೆ ಸಿಲುಕಿದರೂ ಈ ಬಟನ್ ಒತ್ತಿದ ಕೂಡಲೇ ದೊಡ್ಡದಾಗಿ ಸೈರನ್ ಕೂಗಲಿದೆ.ಇದರಿಂದ ಕೂಡಲೇ ಸಿಬ್ಬಂಧಿ ಆಗಮಿಸಿ ಸಮಸ್ಯೆಯನ್ನು ಪರಿಹರಿಸಲಿದ್ದಾರೆ.ಸುತ್ತಮುತ್ತಲಿನ ಪ್ರಮುಖ ಸರ್ಕಲ್‌ಗಳಲ್ಲಿ ಡಿಜಿಟಲ್ ಪೋಲ್ ಅಳವಡಿಸಿ ಸ್ಮಾರ್ಟ್ ಬೋರ್ಡ್ ಮೂಲಕ ಪಾರ್ಕಿಂಗ್ ಲಭ್ಯತೆ ಮತ್ತು ಭರ್ತಿಯಾದ ವಿವರಗಳನ್ನು ನೀಡಲಾಗುವುದು.
ಕಾರು ಪಾರ್ಕಿಂಗ್ ನಂತರ ಮೂರು ಪ್ರಮುಖ ಮಾರ್ಗಗಳಲ್ಲಿ ಫ್ರೀ ಪಿಕಪ್ ಮತ್ತು ಡ್ರಾಪ್ ಸೌಲಭ್ಯ ಕಲ್ಪಿಸಿರುವುದು ವಿಶೇಷ.ಸಿಟಿ ಸಿವಿಲ್ ಕೋರ್ಟ್,ಕೆ.ಆರ್.ವೃತ್ತ,ವಿಧಾನಸೌಧ,ಎಂ.ಎಸ್.ಬಿಲ್ಡಿಂಗ್,ಹೈಕೋರ್ಟ್ ಮತ್ತು ಪೋತಿಸ್ ಸರ್ಕಲ್,ಚಿಕ್ಕಪೇಟೆ ಮೆಟ್ರೋ ಸ್ಟೇಷನ್,ರಾಯನ್ ಸರ್ಕಲ್ ಹಾಗೂ ಉಪ್ಪಾರಪೇಟೆ ಪೋಲಿಸ್ ಠಾಣೆ,ಮೆಜೆಸ್ಟಿಕ್,ರೈಲ್ವೇ ನಿಲ್ದಾಣಕ್ಕೆ ಪ್ರತಿ15ನಿಮಿಷಕ್ಕೆ ಡ್ರಾಪ್ ಮತ್ತು ಪಿಕಪ್ ವ್ಯವಸ್ಥೆ ಕಲ್ಪಿಸಲಾಗಿದೆ.ಜೊತೆಗೆ ಕಾರನ್ನು ಪಾರ್ಕ್ ಮಾಡಿ ಎಲೆಕ್ಟ್ರಿಕಲ್ ದ್ವಿಚಕ್ರ ವಾಹನವನ್ನು ಬಾಡಿಗೆ ತೆಗೆದುಕೊಂಡು ಹೋಗಬಹುದು.
ನಮ್ಮ ಸಂಸ್ಥೆ ಬೆಂಗಳೂರಿನ ಜನತೆಗೆ ಉತ್ತಮ ಪಾರ್ಕಿಂಗ್ ಸೇವೆ ಸಲ್ಲಿಸಲು ಬಿಬಿಎಂಪಿ ಜಾಗವನ್ನು ಬಾಡಿಗೆಗೆ ಪಡೆದು ‘ರೈಟ್ ಪಾರ್ಕಿಂಗ್’ ಕೇಂದ್ರ ಸ್ಥಾಪಿಸಿದೆ.ಸಿಂಗಾಪುರದಲ್ಲಿ ಇಂತಹದ್ದೊಂದು ಮಾದರಿಯನ್ನು ನೋಡಿ ಪ್ರಭಾವಿತನಾಗಿ,ವಿದೇಶಿ ಗುಣಮಟ್ಟದಲ್ಲಿ ಈ ಪಾರ್ಕಿಂಗ್ ಕೇಂದ್ರ ನಿರ್ಮಿಸಲಾಗಿದೆ.ಬೆಂಗಳೂರಿನ ಜನನಿಬಿಡ ಪ್ರದೇಶದಲ್ಲಿ ಸರ್ಕಾರಿ ಸಂಸ್ಥೆಗಳು ನಿಯಮಾನುಸಾರ ಜಾಗ ನೀಡಿದರೆ ಇಂತಹ ಇನ್ನಷ್ಟು ಕೇಂದ್ರಗಳನ್ನು ನಿರ್ಮಿಸುವ ಗುರಿ ಇದೆ.
–ಕುಮಾರ,ಪ್ರಿನ್ಸ್ ರಾಯಲ್ ಸಂಸ್ಥೆ ಎಂ.ಡಿ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 10 =
Remember me
