ಗಿರೀಶ್ ಗರಗ
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬೆಂಪಿ) ವ್ಯಾಪ್ತಿಗೆ ಮತ್ತೆ 60 ಹಳ್ಳಿಗಳನ್ನು ಸೇರಿಸಲು ಸರ್ಕಾರ ಮುಂದಾಗಿದ್ದು, ಅದಕ್ಕಾಗಿ ಮಸೂದೆ ಸಿದ್ಧಪಡಿಸಲಾಗುತ್ತಿದೆ. ಮುಂದಿನ ಅಧಿವೇಶನದಲ್ಲಿ ಇದಕ್ಕೆ ಅನುಮೋದನೆ ಪಡೆದು ವಿಸ್ತರಣೆ ಪ್ರಕ್ರಿಯೆಗೆ ಚಾಲನೆ ನೀಡಲು ನಿರ್ಧರಿಸಲಾಗಿದೆ.  2010ರಲ್ಲಿ 110 ಹಳ್ಳಿಗಳು, 7 ನಗರಸಭೆ, 1 ಪುರಸಭೆಯನ್ನು ಬಿಎಂಪಿಗೆ ಸೇರಿಸಿ ಬಿಬಿಎಂಪಿಯನ್ನಾಗಿ ಪರಿವರ್ತಿಸಲಾಯಿತು. 225 ಚದರ ಕಿ.ಮೀ. ವ್ಯಾಪ್ತಿಯ ಪಾಲಿಕೆ ಆಡಳಿತವನ್ನು 820 ಚದರ ಕಿ.ಮೀ.ಗೆ ವಿಸ್ತರಿಸಲಾಗಿತ್ತು. 100 ವಾರ್ಡ್​ಗಳನ್ನು 198 ವಾರ್ಡ್​ಗೆ ಹೆಚ್ಚಿಸಲಾಯಿತು. ಈ ವಾರ್ಡ್​ಗಳನ್ನು 8 ವಲಯಗಳಿಗೆ ಹಂಚಿಕೆ ಮಾಡಿ ಆಡಳಿತ ವಿಕೇಂದ್ರೀಕರಿಸಲಾಗಿದೆ.
ಅದರೆ, ವಲಯ ರಚನೆಯಲ್ಲಿ ಅಸಮಾನತೆಯಿದ್ದು, ಕೆಲ ವಲಯಗಳಿಗೆ ಕೇವಲ 8 ವಾರ್ಡ್​ಗಳನ್ನು ನೀಡಿದರೆ ಇನ್ನು ಕೆಲ ವಲಯಕ್ಕೆ 30ಕ್ಕೂ ಹೆಚ್ಚಿನ ವಾರ್ಡ್​ಗಳನ್ನು ಹಂಚಿಕೆ ಮಾಡಲಾಗಿದೆ. ಇದರಿಂದ ಆಡಳಿತ ಸಮರ್ಪಕವಾಗಿ ನಡೆಸಲು ಸಾಧ್ಯವಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಹೊಸದಾಗಿ 60 ಹಳ್ಳಿಗಳನ್ನು ಸೇರ್ಪಡೆ ಮಾಡಿ ವಾರ್ಡ್​ಗಳ ಸಂಖ್ಯೆಯನ್ನು 224ಕ್ಕೆ ಹೆಚ್ಚಿಸುವುದು ಹಾಗೂ ಅವುಗಳನ್ನು ಸಮಾನವಾಗಿ 6 ವಲಯಗಳಿಗೆ ಹಂಚುವ ಕುರಿತು ರ್ಚಚಿಸಲಾಗಿದೆ.
ಇದನ್ನೂ ಓದಿ:ಬಸ್​​ನಲ್ಲಿದ್ದ ವ್ಯಕ್ತಿಯಿಂದ 23 ಪ್ರಯಾಣಿಕರಿಗೆ ಕರೊನಾ ಸೋಂಕು; ಗಾಳಿಯಿಂದ ಹರಡುತ್ತಿದೆ ಎನ್ನಲು ಇದುವೇ ನಿದರ್ಶನ?
6 ಆಯುಕ್ತರು, ಒಬ್ಬರು ಸುಪ್ರೀಂ ಆಯುಕ್ತ: ಪ್ರಸ್ತುತ ವ್ಯವಸ್ಥೆಯಲ್ಲಿ ವಲಯಗಳಲ್ಲಿನ ಆಡಳಿತವನ್ನು ನೋಡಿಕೊಳ್ಳಲು ಜಂಟಿ ಆಯುಕ್ತರನ್ನು ನೇಮಿಸಲಾಗಿದೆ. ಅವರು ಐಎಎಸ್ ಅಧಿಕಾರಿಯಾಗಿರಬೇಕು ಎಂಬ ನಿಯಮವಿದೆ. ಆದರೆ, ಬಹುತೇಕ ವಾರ್ಡ್​ಗಳಲ್ಲಿ ಕೆಎಎಸ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಆದರೆ, ಬಿಬಿಎಂಪಿ ವಿಸ್ತರಣೆ ನಂತರ ಪ್ರತಿ ವಲಯಕ್ಕೆ ಒಬ್ಬ ಐಎಎಸ್ ಅಧಿಕಾರಿಯನ್ನು ಆಯುಕ್ತರನ್ನಾಗಿ ನೇಮಿಸಲಾಗುತ್ತದೆ. ಅವರ ಆಡಳಿತವನ್ನು ನಿಯಂತ್ರಿಸಲು ಪ್ರಧಾನ ಕಾರ್ಯದರ್ಶಿ ಗ್ರೇಡ್​ನ ಒಬ್ಬರನ್ನು ಸುಪ್ರೀಂ ಆಯುಕ್ತರಮನ್ನಾಗಿ ನೇಮಿಸಲಾಗುತ್ತದೆ.
ಇದನ್ನೂ ಓದಿ:ಬೆಂಬಲ ಬೆಲೆ ನಿಧಿಯೇ ಇವರಿಗೆ ಆದಾಯ; ಕೃಷಿ ಮಾರಾಟ ಮಂಡಳಿಯಲ್ಲಿ 50 ಕೋಟಿ ರೂ.ವಂಚನೆ; ಮೂವರ ಸೆರೆ
ಯಾವೆಲ್ಲ ಕ್ಷೇತ್ರಗಳ ಹಳ್ಳಿಗಳು?: ಯಲಹಂಕ, ರಾಜರಾಜೇಶ್ವರಿನಗರ, ಬೆಂಗಳೂರು ದಕ್ಷಿಣ, ಮಹದೇವಪುರ ಮತ್ತು ಯಶವಂತಪುರ ಕ್ಷೇತ್ರಗಳ ಕೆಲ ಹಳ್ಳಿಗಳು ಈಗಲೂ ಗ್ರಾಪಂ ವ್ಯಾಪ್ತಿಯಲ್ಲಿವೆ. ಅವುಗಳಿಗೆ ಹತ್ತಿರದ ಹಳ್ಳಿಗಳನ್ನು ಗ್ರಾಪಂನಿಂದ ಬೇರ್ಪಡಿಸಿ, ಬಿಬಿಎಂಪಿಗೆ ಸೇರ್ಪಡೆಗೊಳಿಸಲಾಗುತ್ತದೆ.
ಇದನ್ನೂ ಓದಿ:ಕ್ರಿಪ್ಟೋ ಕರೆನ್ಸಿಯಲ್ಲಿ ನಡೆಯುತ್ತಿತ್ತು ಡ್ರಗ್ಸ್ ಪೆಡ್ಲರ್​ ಅಹಮದ್​ನ ವಹಿವಾಟು
ಮೇಯರ್ ಅವಧಿಯೂ ವಿಸ್ತರಣೆ: ಕೆಎಂಸಿ ಕಾಯ್ದೆ ಪ್ರಕಾರ ಮೇಯರ್ ಅವಧಿ 1 ವರ್ಷ ಮಾತ್ರವಿದೆ. ಆದರೆ, ಬಿಬಿಎಂಪಿಗೆ ಪ್ರತ್ಯೇಕ ಕಾಯ್ದೆ ಜಾರಿಗೆ ತರುತ್ತಿರುವ ಹಿನ್ನೆಲೆಯಲ್ಲಿ 5 ವರ್ಷಕ್ಕೆ ಇಬ್ಬರು ಮೇಯರ್ ನೇಮಿಸುವ ಕುರಿತು ರ್ಚಚಿಸಲಾಗುತ್ತದೆ. ಒಬ್ಬ ಮೇಯರ್​ಗೆ ಎರಡೂವರೆ ವರ್ಷಕ್ಕೆ ನಿಗದಿ ಮಾಡುವ ಸಾಧ್ಯತೆಗಳಿವೆ.
ಇದನ್ನೂ ಓದಿ:ಅಬ್ಬಬ್ಬಾ….! 350 ಕೆ.ಜಿ, 4.4 ಮೀಟರ್‌ ಮೊಸಳೆಯ ನೋಡಿದ್ದೀರಾ?
ಕಾನೂನು ತೊಡಕು ಸಾಧ್ಯತೆ: ರಾಜ್ಯದಲ್ಲಿ ಗ್ರಾಪಂಗಳಿಗೆ ಸದ್ಯದಲ್ಲಿಯೇ ಚುನಾವಣೆ ನಡೆಯಲಿದೆ. ಬಿಬಿಎಂಪಿಗೆ ಸೇರ್ಪಡೆಗೊಳ್ಳುವ ಹಳ್ಳಿಗಳ ಪಂಚಾಯಿತಿಗಳಿಗೂ ಚುನಾವಣೆ ನಡೆಯಲಿದೆ. ಹೀಗೆ ಚುನಾವಣೆ ನಡೆದ ನಂತರ ಅವುಗಳನ್ನು ಇನ್ನೊಂದು ವರ್ಷದಲ್ಲಿ ಬಿಬಿಎಂಪಿಗೆ ಸೇರ್ಪಡೆಗೊಳಿಸುವ ಯೋಜನೆ ಸರ್ಕಾರದ್ದು. ಹೀಗೆ ಮಾಡಬೇಕಾದರೆ ಚುನಾವಣೆ ನಡೆದಿರುವ ಗ್ರಾಪಂಗಳನ್ನು ಸೂಪರ್ ಸೀಡ್ ಮಾಡಬೇಕು. ಒಂದು ವೇಳೆ ಆ ರೀತಿಯ ಪ್ರಕ್ರಿಯೆಗೆ ಸರ್ಕಾರ ಕೈಹಾಕಿದರೆ, ಗ್ರಾಪಂ ಸದಸ್ಯರು ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆಗಳಿವೆ. ಹೀಗಾಗಿ ಬಿಬಿಎಂಪಿ ವಿಸ್ತರಣೆ ಸಾಕಷ್ಟು ಕಾನೂನು ತೊಡಕುಗಳು ಎದುರಾಗುವ ಸಂಭವವಿದೆ.
ಇದನ್ನೂ ಓದಿ:ಮೃತದೇಹವನ್ನು ಹೊತ್ತು ದುರ್ಗಮ ಹಾದಿಯಲ್ಲಿ 8 ತಾಸು ನಡೆದ ಐಟಿಬಿಪಿ ಸೈನಿಕರು…
ಹಳೆಯ ತಪ್ಪುಗಳೇ ಸರಿಯಾಗಿಲ್ಲ: ಪಾಲಿಕೆ ಆಡಳಿತದ ವ್ಯಾಪ್ತಿ ಹೆಚ್ಚಾದ ಕಾರಣ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಅಲ್ಲದೆ, ಒಬ್ಬ ಆಯುಕ್ತ, 1 ವರ್ಷದ ಅಧಿಕಾರಾವಧಿಯ ಮೇಯರ್ ಸಂಪೂರ್ಣವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪಗಳಿವೆ. ಈ ಎಲ್ಲ ಕಾರಣಗಳಿಂದ ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಲಾಗುತ್ತಿಲ್ಲ. ಹೀಗಿರುವಾಗ ಬಿಬಿಎಂಪಿ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿದರೆ, ಸಮಸ್ಯೆ ಉಲ್ಬಣವಾಗಲಿದೆ. ಒಂದು ವೇಳೆ ವಿಸ್ತರಿಸಿದರೂ, ಆದಾಯ, ಆಡಳಿತ ವಿಕೇಂದ್ರೀಕರಣ, ಆಡಳಿತದ ಮೇಲೆ ನಿಗಾವಹಿಸುವ ಕ್ರಮಗಳು ಕಠಿಣವಾಗಿರಬೇಕು ಎಂದು ಬಿಬಿಎಂಪಿ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಆಫ್ಘನ್​ನಲ್ಲಿರುವ ಭಾರತದ ರಾಯಭಾರ ಕಚೇರಿ ಸದ್ಯ ಪಾಕ್ ಟಾರ್ಗೆಟ್ !

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:seventeen + five =
Remember me
