ಬೆಂಗಳೂರು:ಇನ್ಮುಂದೆ ಬೆಂಗಳೂರಿನ ನಿವಾಸಿಗಳಿಗೆ ಕಸ ಬಿಸಾಕಲು ಬೆಳಗ್ಗೆ ಎದ್ದೇಳಲೇ ಬೇಕು ಎಂಬ ಟೆನ್ಷನ್ ಇರುವುದಿಲ್ಲ. ನಿಮ್ಮ ಬಿಡುವಿನ ಸಮಯದಲ್ಲಿಯೇ ಮನೆಯಲ್ಲಿರುವ ತ್ಯಾಜ್ಯವನ್ನು ಹೊರಹಾಕಲು ಬಿಬಿಎಂಪಿ ಇದೀಗ ಕಿಯೋಸ್ಕ್ ಭಾಗ್ಯವನ್ನು ಜಾರಿ ಮಾಡಲು ಮುಂದಾಗಿದೆ.
ಇದನ್ನೂ ಓದಿ:ವಿಶ್ವಕಪ್​ಗೆ ಮುನ್ನ ವಿಶ್ವ ನಂ. 1 ಪಟ್ಟಕ್ಕೆ ತ್ರಿಕೋನ ಸ್ಪರ್ಧೆ; ರೇಸ್​ನಲ್ಲಿವೆ ಭಾರತ, ಪಾಕ್​, ಆಸೀಸ್​
ರಾಜ್ಯ ರಾಜಧಾನಿಯನ್ನು ಮತ್ತಷ್ಟು ಶುಭ್ರವಾಗಿರಿಸಲು ಬಿಬಿಎಂಪಿ ಹೊಸ ಪ್ಲ್ಯಾನ್​​ ಮಾಡಿದ್ದು, ರಸ್ತೆಬದಿ, ಕಾಲುವೆ, ಖಾಲಿ ನಿವೇಶನ ಸೇರಿದಂತೆ ಹಲವು ಸ್ಥಳಗಳಲ್ಲಿ ಜನಸಾಮಾನ್ಯರು ಅನಗತ್ಯವಾಗಿ ಕಸ ಎಸೆಯುವುದಕ್ಕೆ ಕಡಿವಾಣ ಹಾಕಲು ಈಗ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ನಗರದ 76 ಕಡೆಗಳಲ್ಲಿ ‘ಶುಭ್ರ ಬೆಂಗಳೂರು’ ಯೋಜನೆಯ 4 ಕೋಟಿ ರೂಪಾಯಿ ವೆಚ್ಚದ ಕಸದ ಕಿಯೋಸ್ಕ್‌ಗಳನ್ನು ಬಿಬಿಎಂಪಿ ನಿರ್ಮಾಣ ಮಾಡುತ್ತಿದೆ.
ಅಷ್ಟಕ್ಕೂ ಕಿಯೋಸ್ಕ್ ಎಂದರೇನು?:
ಆಯತಾಕಾರದಲ್ಲಿ ಪೋಲ್‌ಗಳಿಂದ ಸೂಪರ್‌ ಸ್ಟ್ರಕ್ಚರ್‌ನಲ್ಲಿ ಸಣ್ಣ ಗೂಡಂಗಡಿ ರೀತಿಯಲ್ಲಿ ಕಿಯೋಸ್ಕ್​ಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ವಿಭಾಗದಿಂದ ಇದರ ಟೆಂಡರ್‌ ಅಂತಿಮಗೊಂಡಿದ್ದು, ಸರ್ಕಾರ ಕೂಡ ಅಸ್ತು ಎಂದಿದೆ. ಪಾರ್ಕ್​ಗಳು ಮತ್ತು ಜನದಟ್ಟಣೆ ಪ್ರದೇಶಗಳಲ್ಲಿ ಈ ಕಿಯೋಸ್ಕ್‌ಗಳ ನಿರ್ಮಾಣಕ್ಕೆ ಪ್ಲ್ಯಾನ್​ ಮಾಡಲಾಗಿದೆ.
ಇದನ್ನೂ ಓದಿ:Jawaan Movie Review: ಮಾಸ್ ಮನರಂಜನೆ ಜತೆಗೊಂದು ಸಂದೇಶ
ರಾತ್ರಿ‌ ವೇಳೆ ಎಲ್ಲರ ಕಣ್ತಪ್ಪಿಸಿ ಖಾಲಿ ಜಾಗಗಳಲ್ಲಿ ಕಸ ಎಸೆಯುತ್ತಿದ್ದ ಪ್ರದೇಶಗಳಲ್ಲಿ ಈ ಕಿಯೋಸ್ಕ್ಗಳು ನಿರ್ಮಾಣವಾಗಲಿದೆ. ದಿನದ 16 ಗಂಟೆಗಳ ಅವಧಿಯವರೆಗೂ ಈ ಕಿಯೋಸ್ಕ್ ಓಪನ್‌‌‌ ಇರಲಿದ್ದು, ಬಿಡುವಿನ ಸಮಯದಲ್ಲಿ ಜನರು ಕಸ ತಂದು ಹಾಕಬಹುದಾಗಿದೆ.
ಕಿಯೋಸ್ಕ್​ಗೆ ಬಳಿ ಕಸ ತೆಗೆದುಕೊಂಡು ಹೋದರೆ, ಅಲ್ಲಿರುವ ಸಿಬ್ಬಂದಿ ತ್ಯಾಜ್ಯವನ್ನು ಸಂಗ್ರಹಿಸಲಿದ್ದಾರೆ. ಒಣ, ಹಸಿ, ನೈರ್ಮಲ್ಯ ಸೇರಿದಂತೆ ಕಸವನ್ನು ಪ್ರತ್ಯೇಕವಾಗಿ ಬೇರ್ಪಡಿಸಲಾಗುತ್ತದೆ. ಪ್ರತಿಯೊಂದು ಕಿಯೋಸ್ಕ್‌ನ ನಿರ್ವಹಣೆಗೆ ಸಿಬ್ಬಂದಿ ನೇಮಿಸಲಿದ್ದು, ವಿವಿಧ ಪಾಳಿಗಳಲ್ಲಿ ಕೆಲಸ ನಿರ್ವಹಿಸಲಿದ್ದಾರೆ. ಕಿಯೋಸ್ಕ್‌ಗಳಲ್ಲಿ ಸಂಗ್ರಹವಾಗುವ ಕಸವನ್ನು ಆಟೊ ಟಿಪ್ಪರ್‌ಗಳು ಕೊಂಡೊಯ್ಯಲಿವೆ.
ಇದರ ಉದ್ದೇಶವೇನು?:ನಿಮ್ಮ ಥೈರಾಯ್ಡ್​ ಗ್ರಂಥಿಯನ್ನು ಆರೋಗ್ಯವಾಗಿ ಇಟ್ಟುಕೊಳ್ಳಲು ನೀವು ಗಮನದಲ್ಲಿಡಬೇಕಾದ ಅಂಶಗಳಿವು…
ಸಿಲಿಕಾನ್‌ ಸಿಟಿಯಲ್ಲಿ ದಿನನಿತ್ಯ 5,500 ಟನ್‌ ಕಸ ಉತ್ಪತ್ತಿಯಾಗುತ್ತಿದೆ. ಇದರಲ್ಲಿ 3 ಸಾವಿರ ಟನ್‌ನಷ್ಟು ತ್ಯಾಜ್ಯವು ಭೂಭರ್ತಿ ಘಟಕಗಳನ್ನು ಸೇರುತ್ತಿವೆ. 1200 ಟನ್‌ ಹಸಿ ಕಸವು ಸಂಸ್ಕರಣಾ ಘಟಕಗಳಲ್ಲಿ ವಿಲೇವಾರಿಯಾಗುತ್ತದೆ. ಪಾಲಿಕೆಯ ಆಟೊ ಟಿಪ್ಪರ್‌ಗಳು ಪ್ರತಿನಿತ್ಯ ಬೆಳಗ್ಗೆ 6.30 ರಿಂದ 11 ರವರೆಗೆ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುತ್ತಿವೆ. ಅನಿವಾರ್ಯ ಕಾರಣಗಳಿಂದ, ಕೆಲವರ ನಿರ್ಲಕ್ಷ್ಯದಿಂದ ಆಟೊ ಟಿಪ್ಪರ್‌ಗಳಿಗೆ ಕಸ ಹಾಕಲು ಸಾಧ್ಯವಾಗುತ್ತಿಲ್ಲ.
ಇದನ್ನೂ ಓದಿ:
ಜನಸಾಮಾನ್ಯರು ತಮ್ಮ ದಿನನಿತ್ಯ ಕೆಲಸಗಳಲ್ಲಿ ನಿರತರಾಗಿದ್ದು, ವಿವಿಧ ಶಿಫ್ಟ್​ಗಳಲ್ಲಿ ಕೆಲಸ ಮಾಡುತ್ತಾರೆ. ಕೆಲವರು ಬೆಳ್ಳಂ ಬೆಳಗ್ಗೆ ಕೆಲಸಕ್ಕೆ ಹೋಗುವುದರಿಂದ ಮುಂಜಾನೆ ಹೊತ್ತು ಕಸ ಬಿಸಾಡಲು ಸಾಧ್ಯವಾಗುವುದಿಲ್ಲ. ತಾಜ್ಯವನ್ನು ಮನೆಯಿಂದ ಹೊರಗಿಟ್ಟರೆ ಶ್ವಾನಗಳು ಎಳೆದಾಡಿ, ಹಾಳು ಮಾಡುತ್ತದೆ ಎಂಬ ಭೀತಿ ಹಲವರಿಗೆ ಕಾಡುತ್ತದೆ.
ಈ ಕಾರಣಗಳಿಂದ ಅನೇಕರು ರಸ್ತೆಬದಿ, ಕಾಲುವೆ, ಖಾಲಿ ಜಾಗಗಳಲ್ಲಿ ಕಸ ಬಿಸಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಸೂಕ್ತ ಕ್ರಮಕ್ಕೆ ಮುಂದಾಗಿರುವ ಬಿಬಿಎಂಪಿ, ಈಗ ಕಿಯೋಸ್ಕ್​ಗಳನ್ನು ಸ್ಥಾಪಿಸಲು ಸಜ್ಜಾಗಿದೆ.
ಸ್ಟೈಲಿಶ್​ ಸ್ಟಾರ್​ ಜತೆ ಕೈಜೋಡಿಸಲಿದ್ದಾರೆ ‘ಜವಾನ್​’ ನಿರ್ದೇಶಕ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + six =
Remember me
