ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕರಡು ವಾರ್ಡ್​ಗಳ ಸಂಖ್ಯೆಯನ್ನು 225ಕ್ಕೆ ಇಳಿಸಿ ಆದೇಶಿಸಿದ್ದ ಸರ್ಕಾರ, ಈ ಸಂಬಂಧ ಶುಕ್ರವಾರ ವಾರ್ಡ್​ಗಳ ಹೆಸರು, ವಾರ್ಡ್ ಸಂಖ್ಯೆ ಹಾಗೂ ವಾರ್ಡ್​ಗಳ ಗಡಿಯನ್ನು ಮರುರಚಿಸಿ ಅಧಿಸೂಚನೆ ಹೊರಡಿಸಿದೆ.
ನಗರಾಭಿವೃದ್ಧಿ ಇಲಾಖೆ ಪ್ರಕಟಿಸಿರುವ ಅಧಿಸೂಚನೆ ಅನ್ವಯ ಹೊಸದಾಗಿ ಪ್ರಕಟಿಸಿರುವ ವಾರ್ಡ್​ಗಳ ಹೆಸರು ಹಾಗೂ ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ 15 ದಿನಗಳ ಒಳಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ. ಆಕ್ಷೇಪಣೆಗಳಿಗೆ ನಿರ್ದಿಷ್ಟ ಕಾರಣ ನೀಡುವಂತೆಯೂ ತಿಳಿಸಲಾಗಿದೆ. ಆಕ್ಷೇಪಣೆಗಳನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಕೊಠಡಿ ಸಂಖ್ಯೆ 436, 4ನೇ ಮಹಡಿ, ವಿಕಾಸಸೌಧ, ಡಾ. ಬಿ.ಆರ್.ಅಂಬೇಡ್ಕರ್ ವೀಧಿ, ಬೆಂಗಳೂರು-1 ಈ ವಿಳಾಸಕ್ಕೆ ಸಲ್ಲಿಸಬೇಕಿದೆ.
ಇದನ್ನೂ ಓದಿ:ಇತ್ತೀಚೆಗೆ ಟ್ರೆಂಡ್​ ಆಗಿರುವ ಬಿಯರ್​ ಟ್ಯಾನಿಂಗ್​ ಅಂದ್ರೇನು? ಇದು ಎಷ್ಟು ಡೇಂಜರ್? ಇಲ್ಲಿದೆ ಮಾಹಿತಿ…
ಹಿಂದಿನ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದ ವೇಳೆ 243 ವಾರ್ಡ್​ಗಳನ್ನು ರಚಿಸುವ ಕೆಲಸ ಆಗಿತ್ತು. ಈಗ 225 ವಾರ್ಡ್​ಗಳಿಗೆ ಮಿತಿಗೊಳಿಸಲಾಗಿದೆ. ಬಿಬಿಎಂಪಿಯ ಅಧ್ಯಕ್ಷರು, ವಾರ್ಡ್​ಗಳ ಮರುವಿಂಗಡಣಾ ಸಮಿತಿ ಹಾಗೂ ಮುಖ್ಯ ಆಯುಕ್ತರ ಮಾರ್ಗ ಸೂಚಿಗಳ ಅನ್ವಯ ಸಲ್ಲಿಸಿದ್ದ ಬಿಬಿಎಂಪಿ ವಾರ್ಡ್​ವಾರು ಕರಡು ವರದಿಯನ್ನು ಸರ್ಕಾರವು ಒಪ್ಪಿಕೊಂಡಿದೆ. 2011ರ ಜನಗಣತಿಯ ಆಧಾರದ ಮೇರೆಗೆ ಕರಡು ವಾರ್ಡ್​ವಾರು ಮರು ವಿಂಗಡಣೆಯನ್ನು ನಿಗದಿಪಡಿಸಿದೆ.
ಬಿಬಿಎಂಪಿಗೆ ಸಂಬಂಧಿಸಿದಂತೆ ವಾರ್ಡ್​ಗಳ ಮರುವಿಂಗಡಣೆಗಾಗಿ ರಚಿಸಲಾಗಿದ್ದ ಸಮಿತಿಯ ಶಿಫಾರಸಿನ ಅನ್ವಯ 2022ರ ಜು.14ರಂದು 243 ವಾರ್ಡ್​ಗಳಾಗಿ ವಿಂಗಡಣೆಗೊಳಿಸಿ ಅಧಿಸೂಚಿಸಲಾಗಿತ್ತು. ಈ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಕರ್ನಾಟಕ ಉಚ್ಚ ನ್ಯಾಯಾಲಯವು 2022ರ ಸೆ.16ರ ಆದೇಶದಲ್ಲಿ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಮಾಜಿ ಮೇಯರ್ ಬಿ.ಎನ್. ಮಂಜುನಾಥ ರೆಡ್ಡಿ ಮತ್ತು ಇತರರು ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠದ ಮುಂದೆ ರಿಟ್ ಅಪೀಲು ದಾಖಲಿಸಿದ್ದರು. ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠವು ನೀಡಿರುವ ಆದೇಶದ ಮೇರೆಗೆ ಬಿಬಿಎಂಪಿ ಪ್ರದೇಶಕೆ್ಕೆ ಸಂಬಂಧಿಸಿದಂತೆ ವಾರ್ಡಗಳ ಮರುವಿಂಗಡಣೆ ಮಾಡಲು ಬಿಬಿಎಂಪಿ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಲಾಗಿತ್ತು. ಪಾಲಿಕೆಯ ಕೌನ್ಸಿ್ಸರ್​ಗಳ ಸಂಖೆ್ಯೆಯನ್ನು 243 ಎಂದು ನಿಗದಿಪಡಿಸಿ ಹೊರಡಿಸಲಾಗಿದ್ದ ಅಧಿಸೂಚನೆಯನ್ನು ಹಿಂಪಡೆದು, ಬಿಬಿಎಂಪಿ ಕೌನ್ಸಿಲರ್​ಗಳ ಸಂಖ್ಯೆಯನ್ನು 225 ಎಂದು ನಿಗದಿಪಡಿಸಲಾಗಿದೆ.
ಕೆಂಪೇಗೌಡ, ಚೌಡೇಶ್ವರಿ, ಅಟ್ಟೂರು, ಯಲಹಂಕ ಉಪನಗರ, ಕೋಗಿಲು, ಜಕ್ಕೂರು, ಥಣಿಸಂದ್ರ, ಅಮೃತಹಳ್ಳಿ, ಹೆಬ್ಬಾಳ ಕೆಂಪಾಪುರ, ಬ್ಯಾಟರಾಯನಪುರ, ಕೊಡಿಗೇಹಳ್ಳಿ, ದೊಡ್ಡಬೊಮ್ಮಸಂದ್ರ, ವಿದ್ಯಾರಣ್ಯಪುರ, ಕುವೆಂಪುನಗರ, ಕಮ್ಮಗೊಂಡನಹಳ್ಳಿ, ಮಲ್ಲಸಂದ್ರ, ಚಿಕ್ಕಸಂದ್ರ, ಬಾಗಲಗುಂಟೆ, ದಾಸರಹಳ್ಳಿ, ನೆಲಗೆದರನಹಳ್ಳಿ, ಚೊಕ್ಕಸಂದ್ರ, ಪೀಣ್ಯ ಕೈಗಾರಿಕಾ ಪ್ರದೇಶ, ರಾಜಗೋಪಾಲನಗರ, ಹೆಗ್ಗನಹಳ್ಳಿ, ಸುಂಕದಕಟ್ಟೆ, ದೊಡ್ಡಬಿದರಕಲ್ಲು, ಬ್ಯಾಡರಹಳ್ಳಿ, ಹೆರೋಹಳ್ಳಿ, ಉಲ್ಲಾಳು, ನಾಗದೇವನಹಳ್ಳಿ, ಬಂಡೇಮಠ, ಕೆಂಗೇರಿ, ಹೆಮ್ಮಿಗೇಪುರ, ಜೆ.ಪಿ. ಪಾರ್ಕ್, ಯಶವಂತಪುರ, ಜಾಲಹಳ್ಳಿ, ಪೀಣ್ಯ, ಲಕ್ಷಿ್ಮೕದೇವಿನಗರ, ಲಗ್ಗೆರೆ, ಚೌಡೇಶ್ವರಿನಗರ, ಕೊಟ್ಟಿಗೇಪಾಳ್ಯ, ಶ್ರೀಗಂಧದ ಕಾವಲ್, ಮಲ್ಲತ್​ಹಳ್ಳಿ, ಜ್ಞಾನಭಾರತಿ, ರಾಜರಾಜೇಶ್ವರಿನಗರ, ಮಾರಪ್ಪನಪಾಳ್ಯ, ನಂದಿನಿ ಲೇಔಟ್, ಮಹಾಲಕ್ಷಿ್ಮೕಪುರ, ನಾಗಪುರ, ಡಾ. ಪುನೀತ್ ರಾಜ್​ಕುಮಾರ್, ಶಂಕರಮಠ, ಶಕ್ತಿಗಣಪತಿ ನಗರ, ವೃಷಭಾವತಿ ನಗರ, ಮತ್ತೀಕೆರೆ, ಮಲ್ಲೇಶ್ವರ, ಅರಮನೆ ನಗರ, ರಾಜಮಹಲ್ ಗುಟ್ಟಹಳ್ಳಿ, ಕಾಡುಮಲ್ಲೇಶ್ವರ, ಸುಬ್ರಹ್ಮಣ್ಯನಗರ, ಗಾಯತ್ರಿನಗರ, ರಾಧಾಕೃಷ್ಣ ದೇವಸ್ಥಾನ, ಸಂಜಯನಗರ, ಹೆಬ್ಬಾಳ, ವಿಶ್ವನಾಥನಾಗೇನಹಳ್ಳಿ, ಮನೋರಾಯನಪಾಳ್ಯ, ಚಾಮುಂಡಿನಗರ, ಗಂಗಾನಗರ, ಜಯಚಾಮರಾಜೇಂದ್ರನಗರ, ಕಾವಲ್ ಬೈರಸಂದ್ರ, ಕುಶಾಲ್ ನಗರ, ಮುನೇಶ್ವರನಗರ, ದೇವರಜೀವನಹಳ್ಳಿ, ಎಸ್.ಕೆ. ಗಾರ್ಡನ್, ಸಗಾಯ್ಪುರ, ಪುಲಿಕೇಶಿನಗರ, ಹೆಣ್ಣೂರು, ನಾಗವಾರ, ಎಚ್​ಬಿಆರ್ ಲೇಔಟ್, ಕಾಡುಗೊಂಡನಹಳ್ಳಿ, ಕಾಚರಕನಹಳ್ಳಿ, ಕಮ್ಮನಹಳ್ಳಿ, ಬಾಣಸವಾಡಿ, ಕೆಎಸ್​ಎಫ್​ಸಿ ಲೇಔಟ್, ಲಿಂಗರಾಜಪುರ, ಮಾರುತಿ ಸೇವಾನಗರ, ಚಳ್ಳಕೆರೆ, ಹೊರಮಾವು, ಕಲ್ಕೆರೆ, ವಿಜಿನಾಪುರ, ರಾಮಮೂರ್ತಿನಗರ, ಕೆ.ಆರ್.ಪುರ, ಬಸವಪುರ, ದೇವಸಂದ್ರ, ಎ.ನಾರಾಯಣಪುರ, ವಿಜ್ಞಾನನಗರ, ಎಚ್​ಎಎಲ್ ವಿಮಾನ ನಿಲ್ದಾಣ, ಕಾಡುಗೋಡಿ, ಬೆಳ್ಳತ್ತೂರು, ಹೂಡಿ, ಗರುಡಾಚಾರ್ ಪಾಳ್ಯ, ದೊಡ್ಡನೆಕ್ಕುಂದಿ, ಎಇಸಿಎಸ್ ಲೇಔಟ್, ವೈಟ್​ಫೀಲ್ಡ್, ವರ್ತರು, ಮುನ್ನೇನಕೊಳಲು, ಮಾರತ್​ಹಳ್ಳಿ, ಬೆಳ್ಳಂದೂರು, ಕಾಕ್ಸ್​ಟೌನ್, ಬೆನ್ನಿಗಾನಹಳ್ಳಿ, ಸಿ.ವಿ. ರಾಮನ್ ನಗರ, ಕಗ್ಗದಾಸಪುರ, ಹೊಸತಿಪ್ಪಸಂದ್ರ, ಹೊಯ್ಸಳ ನಗರ, ಜೀವನ್​ಬಿಮಾನಗರ, ಕೊನೇನ ಅಗ್ರಹಾರ, ರಾಮಸ್ವಾಮಿಪಾಳ್ಯ, ವಸಂತನಗರ, ಎಸ್.ಆರ್.ನಗರ, ಶಿವಾಜಿನಗರ, ಭಾರತಿನಗರ, ಹಲಸೂರು, ದತ್ತಾತ್ರೇಯ ದೇವಸ್ಥಾನ, ಗಾಂಧಿನಗರ, ಸುಭಾಷ್ ನಗರ, ಓಕಳಿಪುರ, ಬಿನ್ನಿಪೇಟೆ, ಕಾಟನ್​ಪೇಟೆ, ಚಿಕ್ಕಪೇಟೆ, ದಯಾನಂದನಗರ, ಪ್ರಕಾಶ್ ನಗರ, ಶ್ರೀರಾಮಮಂದಿರ, ಶಿವನಗರ, ಬಸವೇಶ್ವರನಗರ, ಕಾಮಾಕ್ಷಿಪಾಳ್ಯ, ಡಾ.ರಾಜ್​ಕುಮಾರ್ ಅಗ್ರಹಾರ ದಾಸರಹಳ್ಳಿ, ಗೋವಿಂದರಾಜನಗರ, ಮಾರೇನಹಳ್ಳಿ, ಕಾವೇರಿಪುರ, ಮೂಡಲಪಾಳ್ಯ, ಮಾರುತಿಮಂದಿರ, ನಾಗರಬಾವಿ, ಚಂದ್ರಾ ಲೇಔಟ್, ನಾಯಂಡಹಳ್ಳಿ, ಕೆಂಪಾಪುರ ಅಗ್ರಹಾರ, ವಿಜಯನಗರ, ಹೊಸಹಳ್ಳಿ, ಹಂಪಿನಗರ, ಹೊಸಗುಡ್ಡದಹಳ್ಳಿ, ಗಾಳಿ ಆಂಜನೇಯ ದೇವಸ್ಥಾನ, ಅತ್ತಿಗುಪ್ಪೆ, ದೀಪಾಂಜಲಿನಗರ, ಆವಲಹಳ್ಳಿ, ಪಾದರಾಯನಪುರ, ರಾಯಪುರ, ದೇವರಾಜ್ ಅರಸ್ ನಗರ, ಛಲವಾದಿ ಪಾಳ್ಯ, ಕೆ.ಆರ್. ಮಾರುಕಟ್ಟೆ, ಚಾಮರಾಜಪೇಟೆ, ಆಜಾದ್ ನಗರ, ಧರ್ಮರಾಯಸ್ವಾಮಿ ದೇವಸ್ಥಾನ, ಸಿಲ್ವರ್ ಜ್ಯೂಬಿಲಿ ಪಾರ್ಕ್, ಸುಂಕೇನಹಳ್ಳಿ, ವಿಶ್ವೇಶ್ವರಪುರ, ಹೊಂಬೇಗೌಡನಗರ, ಸೋಮೇಶ್ವರನಗರ, ಶಾಂತಿನಗರ, ಶಾಂತಲಾನಗರ, ನೀಲಸಂದ್ರ, ವನ್ನಾರ್ ಪೇಟ್, ಜೋಗುಪಾಳ್ಯ, ದೊಮ್ಮಲೂರು, ಅಗರ, ಈಜೀಪುರ, ಕೋರಮಂಗಲ, ಜಕ್ಕಸಂದ್ರ, ಆಡುಗೋಡಿ, ಲಕ್ಕಸಂದ್ರ, ಸುದ್ದುಗುಂಟೆಪಾಳ್ಯ, ಮಡಿವಾಳ, ಸೋಮೇಶ್ವರ ದೇವಸ್ಥಾನ, ಬಿಟಿಎಂ ಲೇಔಟ್, ಭೈರಸಂದ್ರ, ಗುರಪ್ಪನಪಾಳ್ಯ, ಜಯನಗರ ಪೂರ್ವ, ಜೆ.ಪಿ. ನಗರ, ಶಾಖಾಂಬರಿನಗರ, ಸಾರಕ್ಕಿ, ಯಡಿಯೂರು, ಗಣೇಶ್ ಮಂದಿರ, ದೇವಗಿರಿ ದೇವಸ್ಥಾನ, ಬನಶಂಕರಿ ದೇವಸ್ಥಾನ, ಕುಮಾರಸ್ವಾಮಿ ಲೇಔಟ್, ಪದ್ಮನಾಭನಗರ, ಚಿಕ್ಕಲ್ಲಸಂದ್ರ, ಹೊಸಕೆರೆಹಳ್ಳಿ, ಹನುಮಂತನಗರ, ಶ್ರೀನಗರ, ಬಸವನಗುಡಿ, ವಿದ್ಯಾಪೀಠ, ಗಿರಿನಗರ, ಕತ್ರಿಗುಪ್ಪೆ, ಉತ್ತರಹಳ್ಳಿ, ಸುಬ್ರಹ್ಮಣ್ಯಪುರ, ವಸಂತಪುರ, ಯಲಚೇನಹಳ್ಳಿ, ಕೋಣನಕುಂಟೆ, ಆರ್​ಬಿಐ ಲೇಔಟ್, ಅಂಜನಾಪುರ, ಗೊಟ್ಟಿಗೆರೆ, ಕಾಳೇನಅಗ್ರಹಾರ, ಬೇಗೂರು, ನಾಗನಾಥಪುರ, ಜರಗನಹಳ್ಳಿ, ಪುಟ್ಟೇನಹಳ್ಳಿ, ಬಿಳೇಕಹಳ್ಳಿ, ಹುಳಿಮಾವು, ಕೋಡಿಚಿಕ್ಕನಹಳ್ಳಿ, ಬೊಮ್ಮನಹಳ್ಳಿ, ಹೊಂಗಸಂದ್ರ, ಗಾರೆಬಾವಿಪಾಳ್ಯ, ಎಚ್​ಎಸ್​ಆರ್ ಲೇಔಟ್, ಇಬ್ಬಲೂರು, ಮಂಗಮ್ಮನಪಾಳ್ಯ, ಹೊಸರಸ್ತೆ ಮತ್ತು ಕೂಡ್ಲು.
ದಂಡಬಡ್ಡಿ ವಿಧಿಸುವಂತಿಲ್ಲ: ಬ್ಯಾಂಕ್​ಗಳಿಗೆ ಆರ್​ಬಿಐ ನಿರ್ದೇಶನ; ಜನವರಿಯಿಂದ ಜಾರಿ

24*7 ಬಿಂದಾಸ್ ಬೆಂಗ್ಳೂರು!: ಆರ್ಥಿಕ ಬೆಳವಣಿಗೆ, ಉದ್ಯೋಗಾವಕಾಶ ಸೃಷ್ಟಿ ಉದ್ದೇಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
