ಬೆಂಗಳೂರು: ಬಿಬಿಎಂಪಿಯ ಜಾಹೀರಾತು ನೀತಿಗೆ ಸಂಬಂಧಿಸಿದ ಮಹತ್ವದ ಕಡತವೊಂದು ಕಾಣೆಯಾಗಿರುವ ಮಾಹಿತಿ ಬಹಿರಂಗವಾಗಿದೆ. ಮುಖ್ಯಮಂತ್ರಿ ಕಚೇರಿಯಲ್ಲಿಯೇ ಈ ಮಹತ್ವದ ಫೈಲ್ ಕಳೆದು ಹೋಯಿತೇ ಎಂಬ ಅನುಮಾನ ಮೂಡಿದೆ. ಸರ್ಕಾರದ ಅತ್ಯುನ್ನತ ಹುದ್ದೆಯಲ್ಲಿರೋ ಅಧಿಕಾರಿಗಳ ಪತ್ರ ವ್ಯವಹಾರದಿಂದಾಗಿ ಈ ವಿಷಯ ಬಯಲಿಗೆ ಬಂದಿದೆ.
ಬೆಂಗಳೂರಿಗೆ ಸಂಬಂಧಪಟ್ಟಂತಹ ಅತಿ ಮಹತ್ವದ ಫೈಲ್ ಇದು. ಬಿಬಿಎಂಪಿ ಜಾಹೀರಾತು ಪಾಲಿಸಿಗೆ ಸಂಬಂಧಿಸಿದ್ದು. ಬೆಂಗಳೂರಿನಲ್ಲಿ ಜಾಹೀರಾತು ನಿಯಮ ಜಾರಿಗೆ ತರುವ ಬಗ್ಗೆ ವಿವರಗಳಿದ್ದ ಇದ್ದ ಕಡತ. ಎಲ್ಲೆಲ್ಲಿ ಜಾಹೀರಾತು ಹಾಕಬೇಕು? ಎಲ್ಲಿ ಹಾಕಬಾರದು? ಯಾವ ಯಾವ ಜಾಗದ ಜಾಹೀರಾತಿಗೆ ಎಷ್ಟು ದರ ನಿಗದಿಪಡಿಸಬೇಕು ಎಂಬುದರ ಬಗ್ಗೆ ನಿರ್ಧಾರ ಮಾಡುವುದಕ್ಕೆ ಸಂಬಂಧಿಸಿದ ಸಲಹೆಗಳು ಅದರಲ್ಲಿ ಇದ್ದವು. ಫೈಲ್ ಸಿಕ್ಕಿದ್ದರೆ ಜಾಹೀರಾತು ನಿಯಮ ಜಾರಿಗೆ ಬರುತ್ತಿತ್ತು. ಬೆಂಗಳೂರಿನ ಜಾಹೀರಾತು ಹೋರ್ಡಿಂಗ್‌ಗೆ ಸಂಬಂಧಿಸಿದಂತೆ ಸಾವಿರಾರು ಕೋಟಿ ರೂ. ವ್ಯವಹಾರ ನಡೆಯುತ್ತದೆ.
ಕೊಟ್ಟ ಫೈಲ್ ಅನ್ನು ಒಂದು ವರ್ಷದಿಂದ ಹಿಂದಿರುಗಿಸಿಲ್ಲ ಎಂದು ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರು ಸಿಎಂ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಅವರಿಗೆ ಪತ್ರ ಬರೆದಿದ್ದಾರೆ. ‘‘ನಗರಾಭಿವೃದ್ಧಿ ಇಲಾಖೆಯ ಕಡತ ಸಂಖ್ಯೆ: ನಅಇ 439 ಎಂಎನ್ ಯು 2018 (ಭಾಗ-2)ರ ಕಡತವನ್ನು ತಮ್ಮ ದಿನಾಂಕ: 07-12-2021ರ ಟಿಪ್ಪಣಿಯ ಹಿನ್ನೆಲೆಯಲ್ಲಿ. ಮಾನ್ಯ ಮುಖ್ಯಮಂತ್ರಿಯವರ ಕಛೇರಿಗೆ ಸಲ್ಲಿಸಲಾಗಿರುತ್ತದೆ. ಆದರೆ ಸದರಿ ಕಡತವು ಇಲಾಖೆಗೆ ಹಿಂದಿರುಗಿರುವುದಿಲ್ಲ. ಪ್ರಸ್ತುತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ದಿ ಬಿಬಿಎಂಪಿ ಅಡ್ವರ್ಟೈಸ್‌ಮೆಂಟ್ ರೂಲ್ಸ್‌ಗೆ ಸಂಬಂಧಿಸಿದಂತೆ, ಸಾರ್ವಜನಿಕ ಲೆಕ್ಕ ಪತ್ರ ಸಮಿತಿಗೆ ಮಾಹಿತಿ ಒದಗಿಸಬೇಕಾಗಿರುವದರಿಂದ, ಸದರಿ ಕಡತವನ್ನು ನಗರಾಭಿವೃದ್ಧಿ ಇಲಾಖೆಗೆ ಅದೇಶ/ಅವಗಾಹನೆಯೊಂದಿಗೆ ಅಥವಾ ಯಥಾ ಹಿಂದಿರುಗಿಸುವಂತೆ ಈ ಮೂಲಕ ತಮ್ಮನ್ನು ಕೋರಿದೆ’’ ಎಂದು ಪತ್ರದಲ್ಲಿ ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
