ಬೆಂಗಳೂರು: ಪಾಲಿಕೆ ವತಿಯಿಂದ ನಗರದ ವಿವಿಧ ಸಂಘ-ಸಂಸ್ಥೆಗಳು, ಟ್ರಸ್ಟ್ ಗಳು, ಸಮಾಜಸೇವಾ ಸಂಸ್ಥೆಗಳಿಗೆ ಗುತ್ತಿಗೆ ನೀಡಲಾಗಿರುವ 324 ಆಸ್ತಿಗಳಿಗೆ ಪ್ರಸ್ತುತ ಮಾರುಕಟ್ಟೆ ದರ ನಿಗದಿಮಾಡಲು ಬಿಬಿಎಂಪಿ ತೀರ್ಮಾನಿಸಿದೆ.
ಆಸ್ತಿಗಳ ವಿಭಾಗಕ್ಕೆ ವಿಶೇಷ ತಂಡಪಾಲಿಕೆಯ ಆಸ್ತಿಗಳ ವಿಭಾಗದಲ್ಲಿ ಸಿಬ್ಬಂದಿ ಕೊರತೆಯಿದೆ. ಹೀಗಾಗಿ ತಹಸೀಲ್ದಾರ್​ಗಳು, ಸಹಾಯಕ ಕಂದಾಯ ಅಧಿಕಾರಿಗಳು, ಇಂಜಿನಿಯರ್​ಗಳು ಹಾಗೂ ಸರ್ವೆಯರ್​ಗಳ ವಿಶೇಷ ತಂಡ ರಚಿಸಿ ಆಸ್ತಿಗಳ ವಿಭಾಗ ಬಲಪಡಿಸಲು ಕ್ರಮ ವಹಿಸುವಂತೆ ಆಯುಕ್ತರಿಗೆ ತಿಳಸಲಾಗಿದೆ. ಎಂಟು ವಲಯಗಳ ಉಪ ಆಯುಕ್ತರಿಗೆ (ಡಿಸಿ) ಆಸ್ತಿಗಳ ಜವಾಬ್ದಾರಿ ನೀಡುವುದು ಹಾಗೂ ಎಲ್ಲ ಆಸ್ತಿಗಳ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಗೌತಮ್ ಕುಮಾರ್ ತಿಳಿಸಿದರು.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಪಾಲಿಕೆ ಆಸ್ತಿಗಳು, ಅವುಗಳ ರಕ್ಷಣೆ ಹಾಗೂ ಆಸ್ತಿಗಳಿಂದ ಆದಾಯ ಸಂಗ್ರಹದ ಕುರಿತು ಬುಧವಾರ ನಡೆದ ವಿಶೇಷ ಸಭೆಯಲ್ಲಿ ಆಸ್ತಿಗಳ ದರ ಪರಿಷ್ಕರಿಸುವ ಕುರಿತು ತೀರ್ವನಿಸಲಾಯಿತು. ಸಮಾಜ, ಸಮುದಾಯ ಹಾಗೂ ಸಾಂಸ್ಕೃತಿಕ ಅಭಿವೃದ್ಧಿಗೆ ನೆರವಾಗುವ ನಿಟ್ಟಿನಲ್ಲಿ ಪಾಲಿಕೆ ಒಡೆತನದ 7,906 ಆಸ್ತಿಗಳಲ್ಲಿ ಸಂಘ-ಸಂಸ್ಥೆಗಳು ಮತ್ತು ಟ್ರಸ್ಟ್​ಗಳಿಗೆ 324 ಆಸ್ತಿಗಳನ್ನು ಗುತ್ತಿಗೆ ನೀಡಲಾಗಿದೆ. ಅವುಗಳಲ್ಲಿ 159 ಆಸ್ತಿಗಳ ಗುತ್ತಿಗೆ ಅವಧಿ ಮುಕ್ತಾಯಗೊಂಡಿದ್ದು, ವಶಕ್ಕೆ ಪಡೆಯಲಾಗುತ್ತಿದೆ. ಉಳಿದ 165 ಆಸ್ತಿಗಳ ಗುತ್ತಿಗೆ ಚಾಲ್ತಿಯಲ್ಲಿದ್ದು, ಅವುಗಳಿಗೆ ಪ್ರಸ್ತುತ ಮಾರುಕಟ್ಟೆ ದರ ನಿಗದಿಗೊಳಿಸಲಾಗುವುದು ಎಂದು ಸಭೆಯ ನಂತರ ಮಾತನಾಡಿದ ಮೇಯರ್ ಎಂ. ಗೌತಮ್ ಕುಮಾರ್ ತಿಳಿಸಿದರು.
ನೋಂದಣಿ ಕಡ್ಡಾಯ:ಬಿಡಿಎ ಹಾಗೂ ಸರ್ಕಾರದ ಇತರೆ ಇಲಾಖೆಗಳಿಂದ ಬಿಬಿಎಂಪಿಗೆ ಹಸ್ತಾಂತರಿಸಲಾಗಿರುವ ಆಸ್ತಿಗಳ ಬಗ್ಗೆ ಸೂಕ್ತ ದಾಖಲೆಗಳಿಲ್ಲ. ಹೀಗಾಗಿಆಸ್ತಿಗಳ ಮೇಲ್ವಿಚಾರಣೆಯನ್ನು ವಿಶೇಷ ಆಯುಕ್ತರಿಗೆ ವಹಿಸಲಾಗುತ್ತಿದೆ. ಸಾರ್ವಜನಿಕರು ಕಬಳಿಸಿರುವ ಆಸ್ತಿ, ಅಧಿಕಾರಿಗಳಿಂದ ಪ್ರಭಾವಿಗಳ ಪಾಲಾದ ಆಸ್ತಿಗಳನ್ನು ಗುರುತಿಸಿ ವಶಕ್ಕೆ ಪಡೆದು ಪಾಲಿಕೆ ಹೆಸರಿಗೆ ನೋಂದಣಿ ಮಾಡಿಸಬೇಕು. ಆಸ್ತಿಗೆ ಗುರುತಿನ ಸಂಖ್ಯೆ (ಪಿಐಡಿ) ನೀಡಬೇಕು. ನ್ಯಾಯಾಲಯಗಳಲ್ಲಿರುವ ಆಸ್ತಿ ಸಂಬಂಧಿತ ಪ್ರಕರಣಗಳನ್ನು 15 ದಿನಗಳಲ್ಲಿ ಇತ್ಯರ್ಥಪಡಿಸಲು ಕಾನೂನು ಕೋಶದೊಂದಿಗೆ ನಿರಂತರ ಸಭೆಗಳನ್ನು ನಡೆಸಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.
20 ಕೋಟಿ ರೂ. ಮೀಸಲು:ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸದುದ್ದೇಶಕ್ಕೆ ಸಂಘ- ಸಂಸ್ಥೆಗಳಿಗೆ ನೀಡಲಾಗಿರುವ ಬಿಬಿಎಂಪಿ ಆಸ್ತಿಗಳನ್ನು ದುರುಪಯೋಗ ಮಾಡಿಕೊಳ್ಳುವುದು ಗಮನಕ್ಕೆ ಬಂದಿದ್ದು, ವಶಕ್ಕೆ ಪಡೆಯಲಾಗುತ್ತಿದೆ. 2020-21ನೇ ಸಾಲಿನ ಪಾಲಿಕೆ ಆಯವ್ಯಯದಲ್ಲಿ ಆಸ್ತಿಗಳ ರಕ್ಷಣೆ ಹಾಗೂ ಫೆನ್ಸಿಂಗ್ ನಿರ್ವಣಕ್ಕೆ 20 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಜತೆಗೆ ಆಸ್ತಿಗಳ ಗುತ್ತಿಗೆ ನವೀಕರಣಕ್ಕೆ ಯಾವುದೇ ರಾಜಕೀಯ ನಾಯಕರು ಅಥವಾ ಇತರೆ ವರ್ಗದ ಪ್ರಭಾವಿಗಳ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಆಯುಕ್ತ ಅನಿಲ್​ಕುಮಾರ್ ತಿಳಿಸಿದರು.
ಇದನ್ನೂ ಓದಿ:ಸಿಇಟಿ, ನೀಟ್ ಆಕಾಂಕ್ಷಿಗಳ ಗಮನಕ್ಕೆ – ದಯಾನಂದ ಸಾಗರ್ ವಿವಿಯಲ್ಲಿ ಇಂದಿನಿಂದ ಉಚಿತ ಆನ್​ಲೈನ್ ಕೋಚಿಂಗ್
ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜೀದ್, ವಿಶೇಷ ಆಯುಕ್ತ (ಆಸ್ತಿ ವಿಭಾಗ) ಮಂಜುನಾಥ್, ಕಾನೂನು ಕೋಶದ ಮುಖ್ಯಸ್ಥ ದೇಶಪಾಂಡೆ, ವಲಯ ಜಂಟಿ ಆಯುಕ್ತರು ಉಪಸ್ಥಿತರಿದ್ದರು.
ಕೊಲೆ ಪ್ರಕರಣದ ಮಹಿಳೆಯರಿಬ್ಬರಿಗೆ ಜಾಮೀನು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 9 =
Remember me
