ಬೆಂಗಳೂರಿನ ಮನೆಯೊಂದರಲ್ಲಿ ಇಬ್ಬರಿಗೆ ಕರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರ ಮನೆಯನ್ನು ತಗಡಿನ ಶೀಟ್​ಗಳನ್ನು ಹಾಕಿ ಸೀಲ್​ ಮಾಡಲಾಗಿತ್ತು. ಈ ಮನೆಯ ಪಕ್ಕದಲ್ಲೇ ಇನ್ನೂ ಒಂದು ಮನೆಯಿದ್ದು, ಎರಡೂ ಮನೆಯ ಬಾಗಿಲನ ಎದುರು ತಗಡಿನ ಶೀಟ್ ಹಾಗಿ, ಕಂಟೇನ್​ಮೆಂಟ್ ಝೋನ್​ ಎಂದು ಪರಿಗಣಿಸಲಾಗಿತ್ತು.
ಆದರೆ ಹೀಗೆ ಅವೈಜ್ಞಾನಿಕವಾಗಿ ಮನೆಯನ್ನು ಸೀಲ್​ಡೌನ್​ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಖಂಡನೆ ವ್ಯಕ್ತವಾಗಿತ್ತು.ಅದೇ ಕಟ್ಟಡದಲ್ಲಿದ್ದವರೊಬ್ಬರು ಮನೆಯನ್ನು ಸೀಲ್​ಡೌನ್​ ಮಾಡಿದ ಫೋಟೋಗಳನ್ನು ಶೇರ್​ ಮಾಡಿಕೊಂಡು, ಹೀಗೆಲ್ಲ ಸೀಲ್ ಡೌನ್​ ಮಾಡಿದರೆ ಹೇಗೆ? ಇದು ಅಪಾಯವಲ್ಲವೇ ಎಂದು ಪ್ರಶ್ನಿಸಿದ್ದರು. ಇಲ್ಲಿ ನೆರೆಮನೆಯಲ್ಲಿ ಇದ್ದವರು ವಯಸ್ಸಾದವರು. ಇಬ್ಬರು ಪುಟ್ಟ ಮಕ್ಕಳೊಂದಿಗೆ ಮಹಿಳೆಯೋರ್ವರೂ ಇದ್ದಾರೆ. ತಗಡಿನ ಶೀಟ್​ ಹಾಕಿಟ್ಟು ಹೋದರೆ ಮನೆಯೊಳಗೆ ಏನಾದರೂ ಸಮಸ್ಯೆಯಾದರೆ ಅಲ್ಲಿದ್ದವರು ಏನು ಮಾಡಬೇಕು. ಅದೆಲ್ಲ ಬಿಡಿ..ಮನೆಯೊಳಗೆ ಬೆಂಕಿ ಕಾಣಿಸಿಕೊಂಡರೆ ಅದರೊಳಗೆ ಇದ್ದ ವಯಸ್ಸಾದವರು, ಮಕ್ಕಳು ತಕ್ಷಣ ಪಾರಾಗುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದರು. ಅಷ್ಟೇ ಅಲ್ಲ, ಬಿಬಿಎಂಪಿ ಆಯುಕ್ತರು, ಮೇಯರ್​, ಮುಖ್ಯಮಂತ್ರಿಗಳ ಖಾತೆಯನ್ನು ಟ್ಯಾಗ್​ ಕೂಡ ಮಾಡಿದ್ದರು. ಅದನ್ನು ನೋಡಿದ ಸಾಮಾಜಿಕ ಜಾಲತಾಣಗಳ ಬಳಕೆದಾರರು ಕೂಡ ವಿರೋಧ ವ್ಯಕ್ತಪಡಿಸಿದ್ದರು.ಇದನ್ನೂ ಓದಿ:ಕೊವಿಡ್​-19ಗೆ 2021ರೊಳಗೆ ಲಸಿಕೆ ಸಿಗುತ್ತದೆ ಎಂಬ ನಿರೀಕ್ಷೆಯೇ ಬೇಡ: ಡಬ್ಲ್ಯೂಎಚ್​ಒ
ಸೋಷಿಯಲ್​ ಮೀಡಿಯಾದಲ್ಲಿ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ತಗಡಿನ ಶೀಟ್​ಗಳನ್ನು ತೆಗೆದುಹಾಕಲಾಗಿದೆ. ಸ್ವತಃ ಬಿಬಿಎಂಪಿ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲಿನ ನಿವಾಸಿಗಳ ಆರೋಗ್ಯ ಮತ್ತು ಅಗತ್ಯ ಸಾಮಗ್ರಿಗಳ ಪೂರೈಕೆ ಬಗ್ಗೆ ಗಮನಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನಿರ್ಲಕ್ಷ್ಯ ವಹಿಸಿದ್ದವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.ಪೂರ್ವ ವಲಯ ಅಧಿಕಾರಿ, ಕಂಟೇನ್​ಮೆಂಟ್​ ಮಾಡುವ ಮೇಲ್ವಿಚಾರಣೆ ಇಂಜಿನಿಯರ್​​ಗೆ ನೋಟಿಸ್ ಕಳಿಸಲಾಗಿದೆ.

VIDEO: ವಾಕ್ಯೂಮ್​ ಕ್ಲೀನರ್​​ನಿಂದ ಮೊಟ್ಟೆಗೆ ಹಾಕಿದ್ದ ಮೆಣಸಿನ ಪುಡಿ ತೆಗೆಯಲು ಹೋದವನಿಗಾಯ್ತು ಮುಜುಗರ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 2 =
Remember me
