ಬೆಂಗಳೂರು: ಸಾರ್ವಜನಿಕರು, ಆಸ್ಪತ್ರೆ ಸಿಬ್ಬಂದಿ ಕರೊನಾ ಸೋಂಕಿತರ ಬಗ್ಗೆ ಕ್ಷಣಕ್ಷಣದ ಮಾಹಿತಿ ತಿಳಿದುಕೊಳ್ಳಲು ಕೋವಿಡ್-19 ಡ್ಯಾಶ್​ಬೋರ್ಡ್ ವೆಬ್​ಸೈಟ್ ಆರಂಭಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ಬಿಬಿಎಂಪಿ ಕೇಂದ್ರ ಕಚೇರಿಯ ಕರೊನಾ ವಾರ್ ರೂಂನಲ್ಲಿ ಮಂಗಳವಾರ ಡ್ಯಾಶ್​ಬೋರ್ಡ್ ವೆಬ್​ಸೈಟ್ ಲೋಕಾರ್ಪಣೆಗೊಳಿಸಿ ಮಾತನಾಡಿದರು. ರಾಜ್ಯದ ಯಾವುದೇ ಮೂಲೆಯಲ್ಲಿ ಕರೊನಾ ಸೋಂಕಿತರ ಪ್ರಮಾಣ ಎಷ್ಟಿದೆ ಎಂಬುದರ ಮಾಹಿತಿಯನ್ನು ಸಾರ್ವಜನಿಕರು ಕೋವಿಡ್-19 ಡ್ಯಾಶ್​ಬೋರ್ಡ್ ವೆಬ್​ಸೈಟ್ ಮೂಲಕ ಮಾಹಿತಿ ಪಡೆಯಬಹುದಾಗಿದೆ. ರಾಜ್ಯದ ಸೋಂಕಿತರು, ಶಂಕಿತರು ಹಾಗೂ ಕ್ವಾರಂಟೈನ್ ಮಾಡಲಾದ ಸಾರ್ವಜನಿಕರ ಬಗ್ಗೆ ಆ ಕ್ಷಣದ ಮಾಹಿತಿಯನ್ನು ಇದರಲ್ಲಿ ಅಪ್ಲೋಡ್ ಮಾಡಲಾಗುತ್ತದೆ ಎಂದರು.
ರಾಜ್ಯದ ಎಲ್ಲ ಹಳ್ಳಿಗಳು, ನಗರದ ಎಲ್ಲ ವಾರ್ಡ್ ಗಳ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ. ಜತೆಗೆ ಕರೊನಾ ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ಸಾರ್ವಜನಿಕರು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಕರೊನಾ ಚಿಕಿತ್ಸೆಗೆ ಆರಂಭಿಸಲಾದ ಆಸ್ಪತ್ರೆಗಳು, ಹಾಸಿಗೆಗಳು ಹಾಗೂ ವೈದ್ಯರ ಲಭ್ಯತೆಯ ಬಗ್ಗೆ ತಿಳಿಯಲು ಡ್ಯಾಶ್​ಬೋರ್ಡ್ ಸಹಾಯಕಾರಿಯಾಗಿದೆ. ರಾಜ್ಯದಲ್ಲಿ ಕರೊನಾ ಕುರಿತು ಸ್ಪಷ್ಟ ಅಂಕಿ-ಅಂಶಗಳನ್ನು ಒದಗಿಸಲು ಹಾಗೂ ಸೋಂಕಿತರ ಮೇಲೆ ನಿಗಾವಹಿಸಲು ಡ್ಯಾಶ್​ಬೋರ್ಡ್ ನೆರವಾಗುತ್ತದೆ ಎಂದು ಮಾಹಿತಿ ನೀಡಿದರು. ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್​ಕುಮಾರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಚಿಕಿತ್ಸಾ ಆ್ಯಪ್ ಸಂಪರ್ಕ:ಕರೊನಾ ಚಿಕಿತ್ಸೆಗಾಗಿ ಆರಂಭಿಸಿರುವ ಫೀವರ್ ಕ್ಲಿನಿಕ್​ಗಳ ಮಾಹಿತಿಗಳು, ಸಂಪರ್ಕ ಸೇತು ಆ್ಯಪ್, ವಲಸೆ ಕಾರ್ವಿುಕರ ಸಹಾಯವಾಣಿ ಆ್ಯಪ್, ಸಹಾಯವಾಣಿ ಕರೆಗಳು ಹಾಗೂ ದೂರುಗಳು, ಆಸ್ಪತ್ರೆಗಳಿಂದ ಲಭ್ಯವಾಗುವ ಎಲ್ಲ ಮಾಹಿತಿಗಳನ್ನು ಇಲ್ಲಿ 24 ಗಂಟೆಗಳ ಕಾಲವೂ ಪ್ರತಿ ಕ್ಷಣ ಅಪ್ಲೋಡ್ ಮಾಡಲಾಗುತ್ತದೆ ಎಂದು ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ದೇಶ ಸಂಕಟದಲ್ಲಿದೆ.. 102 ಟ್ರೋಫಿಗಳಿದ್ವು. ಅವನ್ನೆಲ್ಲ ಕೊಟ್ಟು ಸಿಕ್ಕ 4.3 ಲಕ್ಷ ರೂಪಾಯಿ ಪರಿಹಾರ ನಿಧಿಗೆ ನೀಡಿದ್ದೇನೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 15 =
Remember me
