ಬೆಂಗಳೂರು: ಲೋಕಸಭೆ ಚುನಾವಣೆಗೆ ಮುನ್ನ ಬಿಬಿಎಂಪಿ ಚುನಾವಣೆ ನಡೆಸಿ, ಅಧಿಕಾರ ಹಿಡಿಯುವ ಧಾವಂತದಲ್ಲಿರುವ ರಾಜ್ಯ ಸರ್ಕಾರ, ಮುಂದಿನ 2-3 ದಿನಗಳಲ್ಲೇ ವಾರ್ಡ್​ ಪುನರ್​ ವಿಂಗಡಣೆ ಕರಡು ಪ್ರಕಟಿಸಲು ನಿರ್ಧರಿಸಿದೆ.
ಬುಧವಾರ ನಡೆದ ಬೆಂಗಳೂರು ಶಾಸಕರ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದೆ. ಮುಂದಿನ 2-3 ದಿನಗಳಲ್ಲೇ ಬಿಬಿಎಂಪಿ ವಾರ್ಡ್ ಪುನರ್ ವಿಂಗಡಣೆ ಕರಡು ಪ್ರಕಟವಾಗಲಿದೆ. 243 ವಾರ್ಡ್ ಬದಲಾಗಿ 225 ವಾರ್ಡ್‌ಗಳನ್ನಾಗಿ ಮಾಡಿದ್ದು, ಎರಡು ವಾರ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಇರಲಿದೆ. ಚುನಾವಣೆ ಸಂಬಂಧ ಕೋರ್ಡ್‌ನಲ್ಲೂ ನಿರ್ಧಾರವಾಗಲಿದೆ ಎಂದು ಸಿಎಂ ಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಲೋಕಸಭೆ ಚುನಾವಣೆಗೆ ಮುನ್ನ ಬಿಬಿಎಂಪಿ ಚುನಾವಣೆ ನಡೆಯುವುದು, ಈ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಮಣಿಯುವ ಪ್ರಶ್ನೆಯೇ ಇಲ್ಲ. ಎಲ್ಲರೂ ಒಟ್ಟಾಗಿ ಬಿಬಿಎಂಪಿ ಕೈವಶ ಮಾಡಿಕೊಳ್ಳಲೇ ಬೇಕು. ನಿಮ್ಮ ಪೂರ್ಣ ಶ್ರಮ ಹಾಕಿ, ಸರ್ಕಾರದಿಂದ ಎಲ್ಲ ಸಹಕಾರ ಸಿಗಲಿದೆ ಎಂದು ಭರವಸೆಯೂ ಶಾಸಕರಿಗೆ ದೊರೆತಿದೆ.
ಸಭೆಯಲ್ಲಿ ಲೋಕಸಭೆ ಚುನಾವಣೆ ತಯಾರಿ, ಬಿಬಿಎಂಪಿ ಕ್ಷೇತ್ರ ಪುನರ್ ವಿಂಗಡಣೆ- ಚುನಾವಣೆ ತಯಾರಿ, ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟನೆ, ಅನುದಾನ ಬೇಡಿಕೆ, ಹಿಂದಿನ ಅವಧಿಯಲ್ಲಾದ ಕಾಮಗಾರಿಗಳ ವಿಷಯ, ಗುತ್ತಿಗೆದಾರರ ಬಾಕಿ ವಿಚಾರ ಹೀಗೆ ವಿವಿಧ ವಿಚಾರಗಳ ಬಗ್ಗೆ ಮುಖ್ಯಮಂತ್ರಿ, ಡಿಸಿಎಂ ಹಾಗೂ ಶಾಸಕ ಸಚಿವರ ನಡುವೆ ವಿಚಾರ ವಿನಿಮಯ ನಡೆಯಿತು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:15 − three =
Remember me
