ಬೆಂಗಳೂರು:ಕರ್ನಾಟಕದ ರಾಜಧಾನಿ ಬೆಂಗಳೂರಿನ ಸ್ಥಳೀಯ ಆಡಳಿತ ಸಂಸ್ಥೆಯಾದ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ(BBMP) ವಾರ್ಡ್​ಗಳನ್ನು 225ಕ್ಕೆ ನಿಗದಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಹಿಂದೆ ಕರ್ನಾಟಕ ಹೈಕೋರ್ಟ್​ ನಿರ್ದೇಶನದ ಮೇರೆಗೆ ರಾಜ್ಯ ಸರ್ಕಾರ ಬಿಬಿಎಂಪಿ ಆಯುಕ್ತ ತುಷಾರ್​ ಗಿರಿನಾಥ್ ನೇತೃತ್ವದಲ್ಲಿ ಡಿಲಿಮಿಟೇಷನ್ ಸಮಿತಿ ಒಂದನ್ನು ರಚಿಸಿತ್ತು.
225ರಿಂದ 250 ವಾರ್ಡ್​ಗಳನ್ನು ರಚಿಸುವ ಪರಮಾಧಿಕಾರ ಹೊಂದಿದೆ. 2011ರ ಜನಸಂಖ್ಯೆ ಆಧಾರದ ಮೇರೆಗೆ 243 ವಾರ್ಡ್ ನಿಗದಿಪಡಿಸುವುದು ಸೂಕ್ತ ಎಂದು ಡಿಲಿಮಿಟೇಷನ್ ಸಮಿತಿ ವರದಿ ನೀಡಿತ್ತು. ಸಮಿತಿ ನೀಡಿದ ವರದಿ ಬಳಿಕ ಸರ್ಕಾರ 243 ವಾರ್ಡ್​ಗಳನ್ನು 225ಕ್ಕೆ ಇಳಿಸಿ ಆದೇಶ ಹೊರಡಿಸಿದೆ.
2020 ಸೆಪ್ಟೆಂಬರ್​ ತಿಂಗಳಲ್ಲಿ ಬಿಬಿಎಂಪಿ ಸದಸ್ಯರ ಅಧಿಕಾರ ಅವಧಿ ಮುಗಿದಿದ್ದು, ಚುನಾವಣೆ ನಡೆಸುವ ದೃಷ್ಟಿಯಿಂದ 198 ವಾರ್ಡ್​​ಗಳನ್ನು ಪುನರ್​ ವಿಂಗಡಣೆ ಮಾಡಲಾಗಿತ್ತು. ಹಿಂದೆ ಇದ್ದ ಬಿಜೆಪಿ ಸರ್ಕಾರ ಬಿಬಿಎಂಪಿ ವ್ಯಾಪ್ತಿಯನ್ನು 243 ವಾರ್ಡ್​ಗಳಿಗೆ ಹೆಚ್ಚಿಸಿತ್ತು. ಬಿಜೆಪಿ ಸರ್ಕಾರ ಮಾಡಿಸಿರುವ ವಾರ್ಡ್​ ಮರುವಿಂಗಡಣೆ ಸೂಕ್ತವಾಗಿಲ್ಲ ಎಂದು ಆರೋಪಿಸಿ ಮಾಜಿ ಸದಸ್ಯರು ಕೋರ್ಟ್​ ಮೊರೆ ಹೋಗಿದ್ದರು.
ಇದನ್ನೂ ಓದಿ:ಕಲುಷಿತ ನೀರು ಕುಡಿದು ಅಸ್ವಸ್ಥಗೊಂಡಿದ್ದ ಕವಾಡಿಗರಹಟ್ಟಿಯ ಮಹಿಳೆಗೆ ಗರ್ಭಪಾತ; ಮೃತರ ಸಂಖ್ಯೆ ಆರಕ್ಕೆ ಏರಿಕೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × one =
Remember me
