ಬೆಂಗಳೂರು/ಹಾವೇರಿ:ಕಾಂಗ್ರೆಸ್ ಸರ್ಕಾರ ಸ್ಪಿಂಕ್ಲರ್ ಸಬ್ಸಿಡಿಗೆ ಕತ್ತರಿ‌ ಹಾಕಿ ರೈತರಿಗೆ ಅನ್ಯಾಯವೆಸಗಿದೆ ಎಂದು ಮಾಜಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಕಿಡಿಕಾರಿದ್ದಾರೆ.
ಹಿಂದಿನ ನಮ್ಮ ಬಿಜೆಪಿ ಸರ್ಕಾರದಲ್ಲಿ 90%ರಷ್ಟು ಸ್ಪಿಂಕ್ಲರ್ ಸೆಟ್ಗೆ ಸಬ್ಸಿಡಿ ನೀಡಲಾಗಿತ್ತು. ಸ್ಟ್ರಿಂಕ್ಲರ್‌ ಪೈಪ್‌ ಬಳಕೆಯಿಂದ ಇಳುವರಿ ಹೆಚ್ಚಳ, ನೀರು ಉಳಿತಾಯ ಹಾಗೂ ಶ್ರಮ ಕಡಿಮೆಯಾಗಿ ಸ್ಟ್ರಿಂಕ್ಲರ್‌ ಪೈಪ್‌ಗೆ ಬಾರಿ ಬೇಡಿಕೆ ಬಂದಿತ್ತು.
ಶೇ.90ರ ಸಬ್ಸಿಡಿಯಲ್ಲಿ ಪೈಪ್‌ ಸೆಟ್‌ ಲಭಿಸಿ, 2 ಇಂಚಿನ ಸ್ಟ್ರಿಂಕ್ಲರ್‌ಗೆ 1,746 ರೂ., 2.5 ಇಂಚಿನ ಪೈಪ್‌ಗೆ 1876 ರೂ. ರೈತರು ಪಾವತಿಸಬೇಕಾಗಿತ್ತು. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ರೈತರ ಜೇಬಿಗೆ ಕತ್ತರಿಹಾಕಲೆಂದೇ ಸ್ಪಿಂಕ್ಲರ್ ಸೆಟ್ ಮೊತ್ತವನ್ನು ಹೆಚ್ಚಿಸಿ ರೈತರಿಗೆ ಅನ್ಯಾಯ ಮಾಡಿದೆ. ಕಾಂಗ್ರೆಸ್ ಸರ್ಕಾರ ಸಬ್ಸಿಡಿ ತಗೆದು 2 ಇಂಚಿನ ಸ್ಪಿಂಕ್ಲರ್ ಸೆಟ್‌ಗೆ 4139 ರೂ ಹಾಗೂ 2.5ಇಂಚಿನ ಸ್ಪಿಂಕ್ಲರ್ ಸೆಟ್‌ಗೆ 4567 ರೂಪಾಯಿ ಮಾಡಿ ಈ ಸರ್ಕಾರ ರೈತರ ದುಡ್ಡಿನಲ್ಲಿಯೇ ಗ್ಯಾರಂಟಿ ಭಾಗ್ಯಗಳನ್ನು ನೀಡಿ ರೈತರ ದುಡ್ಡಿನಲ್ಲಿಯೇ ಸರ್ಕಾರ ನಡೆಸುತ್ತಿರುವುದು ರೈತರಿಗೆ ಒಂದು ದೊಡ್ಡ ಅನ್ಯಾಯ. ಇದು ಗ್ಯಾರೆಂಟಿಗಳ ಸರ್ಕಾರ ಅಲ್ಲ, ರೈತರಿಗೆ ಅನ್ಯಾಯವೆಸಗುತ್ತಿರುವ ಸರ್ಕಾರ ಎಂದು ಪತ್ರಿಕಾ ಪ್ರಕಟಣೆ ಮೂಲಕ ಬಿಸಿಪಾ ತಿಳಿಸಿದ್ದಾರೆ.
ಪಠಾಣ್, ಜವಾನ್ ನಂತರ ಶಾರುಖ್ ಅಭಿನಯದ ‘ಡಂಕಿ’ ಸೂಪರ್ ಹಿಟ್ ಆಗಲಿದೆಯೇ?; ಬಿಡುಗಡೆಗೂ ಮುನ್ನವೇ ದಾಖಲೆ ಬರೆದ ಸಿನಿಮಾ ಟ್ರೇಲರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 17 =
Remember me
