ವಿಜಯನಗರ:ಯುವಕರು ಪ್ರೀತಿ-ಪ್ರೇಮದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವುದು ಸರ್ವೇಸಾಮಾನ್ಯ. ಆದರೆ ಇಲ್ಲೊಬ್ಬ ಯುವಕ ವ್ಯವಹಾರ ಮಾಡಲು ತಾಯಿ ಹಣ ಕೊಡಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಿಜಯನಗರ ಜಿಲ್ಲೆಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ. ಕೊಟ್ಟೂರಿನ ಕೆಳಗೇರಿ ನಿವಾಸಿ ಮನ್ಸೂರ್ (22) ಎಂಬಾತ ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಬಿಕಾಂ ಪದವೀಧರ ಆಗಿದ್ದು, ಖಾಸಗಿಯಾಗಿ ಕೆಲಸ ಮಾಡುತ್ತಿದ್ದ. ಆದರೆ ಏನಾದರೂ ವ್ಯವಹಾರ ಮಾಡಬೇಕು ಎಂಬ ಆಸೆ ಹೊಂದಿದ್ದ.
ಇದನ್ನೂ ಓದಿ:2000 ರೂ. ನೋಟು ಹಿಂಪಡೆತ: ಒಮ್ಮೆಗೆ 20 ಸಾವಿರ ರೂ. ಮಾತ್ರ ಬದಲಿಸಿಕೊಳ್ಳಲು ಅವಕಾಶ
ಹೀಗಾಗಿ ವ್ಯವಹಾರ ಮಾಡಲು ಹಣ ನೀಡುವಂತೆ ತಾಯಿಗೆ ದುಂಬಾಲು ಬಿದ್ದಿದ್ದ. ಆದರೆ ತಾಯಿ, ಸದ್ಯ ಯಾವುದೇ ವ್ಯವಹಾರ ಬೇಡ, ಮುಂದೆ ಓದು ಎಂದು ತಿಳಿ ಹೇಳುತ್ತಿದ್ದರು. ಮೇ 17ರಂದು ಕೂಡ ಮತ್ತೆ ತಾಯಿಯಲ್ಲಿ 20 ಸಾವಿರ ರೂ. ನೀಡುವಂತೆ ಕೇಳಿದ್ದ. ಗುರುವಾರ ತನ್ನ ಕೆಲಸದ ಬಟವಾಡೆ ಆಗುತ್ತದೆ, ಆಗ ಮರಳಿಸುವೆ ಎಂದೂ ಹೇಳಿದ್ದ. ಆದರೆ ತಾಯಿ ಹಣ ನೀಡದ್ದರಿಂದ ಮನನೊಂದು ಕೊಟ್ಟೂರಿನ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೊಟ್ಟೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಐದೂ ‘ಗ್ಯಾರಂಟಿ’, ಆರನೇ ಭರವಸೆ ಗ್ಯಾರಂಟಿಯಾ?: ರಾಹುಲ್ ಗಾಂಧಿ ಹೇಳಿದ್ದೇನು?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
