ಕೊರಟಗೆರೆ:ನಲವತ್ತೈದು ವರ್ಷದ ವಿವಾಹಿತ ಪುರುಷನ ಮೋಹದ ಬಲೆಗೆ ಸಿಲುಕಿದ್ದ ಬಿಕಾಂ ವಿದ್ಯಾರ್ಥಿನಿಯ ಪ್ರೇಮ ಪ್ರಕರಣ ದಾರುಣ ಅಂತ್ಯ ಕಂಡಿದೆ. ಐದು ದಿನಗಳ ಹಿಂದೆ ಕಾಣೆಯಾಗಿದ್ದ ಇವರಿಬ್ಬರ ಶವ ತಾಲೂಕಿನ ಕೋಳಾಲ ಹೋಬಳಿಯ ಮಾವತ್ತೂರು ಕೆರೆಯಲ್ಲಿ ಶನಿವಾರ ಪತ್ತೆಯಾಗಿದೆ.
ತಾಲೂಕಿನ ಬೈರಗೊಂಡ್ಲು ಗ್ರಾಮದ ರಂಗಶಾಮಯ್ಯ (45) ಮತ್ತು ಲಕ್ಕಯ್ಯನ ಪಾಳ್ಯದ ಅನನ್ಯಾ (19) ಮೃತರು. ಅಗ್ನಿಶಾಮಕ ದಳ ಕಾರ್ಯಾಚರಣೆ ವೇಳೆ ಶನಿವಾರ ರಾತ್ರಿ ಅನನ್ಯಾ ಶವ ಪತ್ತೆಯಾಗಿತ್ತು. ಭಾನುವಾರ ಮತ್ತೆ ಕಾರ್ಯಾಚರಣೆ ನಡೆಸಿದಾಗ ರಂಗಶಾಮಯ್ಯ ಶವ ಪತ್ತೆಯಾಗಿದೆ.
ಪ್ರೇಮಪಾಶಕ್ಕೆ ಬಿದ್ದ ಯುವತಿ: ಬೈರಗೊಂಡ್ಲು ಗ್ರಾಮದ ಅಳಿಯನಾಗಿದ್ದ ರಂಗಶಾಮಯ್ಯನಿಗೆ ಪತ್ನಿ ಗಂಗರತ್ನಮ್ಮ ಮತ್ತು ಇಬ್ಬರು ಗಂಡುಮಕ್ಕಳಿದ್ದು, ಪ್ರಥಮ ಪಿಯುಸಿ ಮತ್ತು 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ. ಎಸ್ಟಿ ಸಮುದಾಯದ ರಂಗಶಾಮಯ್ಯ ಕೋಳಾಲದಲ್ಲಿ ಗ್ರಾಮ-1 ಕೇಂದ್ರ ನಡೆಸುತ್ತಿದ್ದ. ಅನನ್ಯಾ ಜೆರಾಕ್ಸ್​ಗೆಂದು ಅಂಗಡಿಗೆ ಬಂದಾಗ ಆಕೆಯನ್ನು ಪರಿಚಯ ಮಾಡಿಕೊಂಡಿದ್ದು, ವಯಸ್ಸಿನ ಅಂತರ ಲೆಕ್ಕಿಸದೆ ಆತನ ಪ್ರೀತಿಯ ಜಾಲಕ್ಕೆ ಬಿದ್ದಿದ್ದಳು ಎನ್ನಲಾಗಿದೆ.
ಕೆರೆ ಏರಿಯ ಪಕ್ಕ ಕಾರು ಪತ್ತೆ:5 ದಿನಗಳ ಹಿಂದೆ ಅನನ್ಯಾ ಮನೆಯಿಂದ ನಾಪತ್ತೆಯಾಗಿದ್ದಳು. ಪಾಲಕರು ಯುವತಿಗಾಗಿ ತೀವ್ರ ಹುಡುಕಾಟ ನಡೆಸಿದ್ದರು. ಈ ವೇಳೆ ವ್ಯಕ್ತಿಯೊಬ್ಬನ ಜತೆ ಕಾರಿನಲ್ಲಿ ಓಡಾಡುತ್ತಿರುವ ವಿಚಾರ ಪಾಲಕರಿಗೆ ಗೊತ್ತಾಗಿತ್ತು. ಮಾವತ್ತೂರು ಕೆರೆ ಏರಿ ಸಮೀಪವೇ ಕೆಎ 03 ಎಂಡಬ್ಲು್ಯ-9008 ನಂಬರಿನ ಕಾರು ಪತ್ತೆಯಾಗಿತ್ತು. ಈ ಕಾರಿನಲ್ಲಿ ರಂಗಶಾಮಣ್ಣ ಮತ್ತು ಅನನ್ಯಾಳ ಮೊಬೈಲ್ ಸಿಕ್ಕಿದ್ದವು. ಕೆರೆ ದಡದಲ್ಲಿ ಇಬ್ಬರ ಚಪ್ಪಲಿಗಳು ಸಿಕ್ಕಿವೆ. ನಂತರ ಕೋಳಾಲ ಠಾಣೆಯಲ್ಲಿ ಯುವತಿ ಕುಟುಂಬ ಕಾಣೆಯಾದ ಬಗ್ಗೆ ದೂರು ನೀಡಿದ್ದಾರೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ತನಿಖೆಯಿಂದ ಬಯಲಿಗೆ ಬರಬೇಕಿದೆ.
ಸುಳ್ಳು ಹೇಳಿ ಸುತ್ತಾಟರಂಗಶಾಮಯ್ಯ, ಮಡದಿ ಗಂಗರತ್ನಮ್ಮನಿಗೆ ಸ್ನೇಹಿತರ ಜತೆ ಪ್ರವಾಸಕ್ಕೆ ಹೋಗುವುದಾಗಿ ಸುಳ್ಳು ಹೇಳಿ ಯುವತಿ ಜತೆ ತೆರಳಿದ್ದ. ಅನನ್ಯಾ ಸ್ನೇಹಿತೆಯರ ಜತೆ ಪ್ರವಾಸ ಹೋಗುತ್ತಿರುವುದಾಗಿ ಸುಳ್ಳು ಹೇಳಿ ಜೂ.18ರಂದು ಕಾಲೇಜಿನಿಂದಲೇ ಕಾಣೆಯಾಗಿದ್ದಾಳೆ ಎಂಬ ವಿಷಯ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
12 ಗಂಟೆ ಕಾರ್ಯಾಚರಣೆಮಧುಗಿರಿ ಡಿವೈಎಸ್ಪಿ ರಾಮಚಂದ್ರ ನೇತೃತ್ವದಲ್ಲಿ ಕೊರಟಗೆರೆ ಪೊಲೀಸರು ಮತ್ತು ಅಗ್ನಿಶಾಮಕ ಠಾಣೆಯ 20ಕ್ಕೂ ಅಧಿಕ ಸಿಬ್ಬಂದಿ ತಂಡ ಸೇರಿ ಈಜು ಪಟುಗಳಿಂದ ಮಾವತ್ತೂರು ಕೆರೆಯಲ್ಲಿ 2 ದಿನಗಳ ಕಾಲ 12 ಗಂಟೆಯಿಂದ ಬೋಟ್ ಕಾರ್ಯಾಚರಣೆ ನಡೆಸಿ ಶವ ಪತ್ತೆ ಮಾಡಿದ್ದಾರೆ.
300ಕ್ಕೂ ಹೆಚ್ಚು ಗ್ರೂಪ್​… ನಟ ದರ್ಶನ್​ ಮೊಬೈಲ್​ ಪರಿಶೀಲನೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ!

ರುಚಿಯಿಲ್ಲದ ಊಟ ಸೊಳ್ಳೆಗಳ ಕಾಟ! ಜೈಲಿನಲ್ಲಿ ನರಕಯಾತನೆ ಅನುಭವಿಸಲಾಗದೇ ಪವಿತ್ರಾ ಗೌಡ ಕಣ್ಣೀರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 10 =
Remember me
