ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮೂಲೆ ನಿವೇಶನಗಳನ್ನು ಮಾರಾಟ ಮಾಡಲು ರಾಜ್ಯ ಸರ್ಕಾರ ಸೋಮವಾರ ನಿರ್ಧಾರ ತೆಗೆದುಕೊಂಡಿದ್ದು, 64 ಬಡಾವಣೆಗಳ ಮೂಲೆ ನಿವೇಶನ ಖರೀದಿ ಮಾಡುವವರ ಆಸೆ ಗರಿಬಿಚ್ಚಿದೆ.
ರಾಜ್ಯ ಸರ್ಕಾರ ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದು, ಬಿಡಿಎ ಕಾರ್ನರ್ ಸೈಟ್​ಗಳ ಮಾರಾಟದಿಂದ 15 ಸಾವಿರ ಕೋಟಿ ರೂ. ಆದಾಯ ಗಳಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಕ್ರಮಕ್ಕೆ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
12,500 ಸೈಟ್​ಗಳು:ಬಿಡಿಎ ವತಿಯಿಂದ ಬೆಂಗಳೂರು ವ್ಯಾಪ್ತಿಯ 544 ಹಳ್ಳಿಗಳನ್ನು ಒಳಗೊಂಡಂತೆ 64 ಲೇಔಟ್​ಗಳಲ್ಲಿ 12,500 ಕಾರ್ನರ್ ಸೈಟ್​ಗಳನ್ನು ಗುರುತಿಸಲಾಗಿದೆ. ಅವುಗಳು ವಿಭಿನ್ನ ಅಳತೆಯ ನಿವೇಶಗಳಾಗಿದ್ದು, ಅಳತೆ ಹಾಗೂ ನಗರದ ಕೇಂದ್ರಭಾಗಕ್ಕೆ ಇರುವ ಅಂತರದ ಆಧಾರದ ಮೇಲೆ ಬೆಲೆ ನಿಗದಿ ಮಾಡಲಾಗುವುದು. ಲಾಕ್​ಡೌನ್ ಪ್ರಕ್ರಿಯೆ ಪೂರ್ಣಗೊಳ್ಳುವ ವೇಳೆಗೆ ನಿವೇಶನ ಮಾರಾಟ ಪ್ರಕ್ರಿಯೆ ಆರಂಭವಾಗುವ ನಿರೀಕ್ಷೆಯಿದೆ.
ಮೀಸಲಾತಿ, ದರದ ಬಗ್ಗೆ ಚರ್ಚೆ:ಎರಡೂ ಕಡೆ ರಸ್ತೆಗಳು, ವಿಶಾಲ ವಾತಾವರಣ, ಉತ್ತಮ ಗಾಳಿ- ಬೆಳಕು, ಸಣ್ಣ ವ್ಯಾಪಾರೋದ್ಯಮ ನಡೆಸಲೂ ಉತ್ತಮ ಅವಕಾಶದ ದೃಷ್ಟಿಕೋನದಿಂದ ಮೂಲೆ ನಿವೇಶನ ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಇ- ಹರಾಜಿನಲ್ಲಿ ಬಿಡ್ ಮೂಲಕ ನಿವೇಶನ ಹಂಚುವುದರಿಂದ ಯಾರು ಹೆಚ್ಚು ಹಣ ಪಾವತಿಸುತ್ತಾರೋ ಅವರಿಗೆ ನಿವೇಶನ ಸಿಗುತ್ತದೆ. ಸೈಟ್​ಗಳ ಹಂಚಿಕೆ ಮೀಸಲಾತಿ, ದರ ನಿಗದಿ ಬಗ್ಗೆ ಮತ್ತೊಮ್ಮೆ ಅಧಿಕಾರಿಗಳು ಹಾಗೂ ಸರ್ಕಾರದೊಂದಿಗೆ ರ್ಚಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ತಿಳಿಸಿದ್ದಾರೆ.
ಬಿಡಿಎಗೆ ವಾಪಸ್ ಪಡೆಯುವ ಹಕ್ಕಿದೆ!:ಕಾರ್ನರ್ ಸೈಟ್ ಖರೀದಿಸಲು ಬಯಸುವವರು ಭಾರತೀಯ ಪ್ರಜೆಯಾಗಿರಬೇಕು, ಆ ಬಗ್ಗೆ ದಾಖಲೆ ಸಲ್ಲಿಸಬೇಕು. ಆನ್​ಲೈನ್​ನಲ್ಲಿ ಮಾತ್ರ ಖರೀದಿಸಲು ಅವಕಾಶವಿದೆ. ಅಪ್ರಾಪ್ತರು ಪಾಲಕರ ನೆರವು ಪಡೆದುಕೊಳ್ಳಬೇಕು. ಬಿಡಿಎ ನಿರ್ಧರಿಸುವ ಕನಿಷ್ಠ ಇಎಂಡಿ (ಅರ್ನೆಸ್ಟ್ ಮನಿ ಡೆಪಾಸಿಟ್) ಮೊತ್ತ ಪಾವತಿ, ಹರಾಜು ನಿವೇಶನಗಳು ಬೆಂಗಳೂರು ನ್ಯಾಯಾಲಯದ ವ್ಯಾಪ್ತಿಗೆ ಒಳಪಟ್ಟಿರುತ್ತವೆ. ಜತೆಗೆ, ಹರಾಜಿನಲ್ಲಿಟ್ಟ ನಿವೇಶನಗಳನ್ನು ಯಾವುದೇ ಸಮಯದಲ್ಲಿ ವಾಪಸು ಪಡೆದುಕೊಳ್ಳುವ ಹಕ್ಕು ಬಿಡಿಎಗೆ ಇರುತ್ತದೆ ಎಂಬ ನಿಬಂಧನೆಗಳಿವೆ.
ಪ್ರತಿ ಬಾರಿಯೂ ಬಿಡಿಎ ನಿರ್ವಿುಸಿದ ನಿವೇಶನಗಳನ್ನು ಇ-ಹರಾಜು ಮೂಲಕ ಮಾರಾಟ ಮಾಡಲಾಗುತ್ತಿದೆ. ಅದರಂತೆ ನಿವೇಶನದ ಬೆಲೆ ಸೇರಿ ಕೆಲವು ನಿಬಂಧನೆಗಳಿದ್ದು, 1984ರ ಬಿಡಿಎ ನಿಯಮದ ಆಧಾರದಲ್ಲಿ ಮಾರಾಟ ಪ್ರಕ್ರಿಯೆ ಆರಂಭಿಸಲಾಗುವುದು.| ಜಿ.ಸಿ. ಪ್ರಕಾಶ್ಬಿಡಿಎ ಆಯುಕ್ತ
ರಸ್ತೆಗೆ ಇಳಿದ ಹೋಂ ಕ್ವಾರಂಟೈನ್ ವ್ಯಕ್ತಿ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲು ಸೀಲ್​ಡೌನ್​ಗೂ ಎಚ್ಚೆತ್ತುಕೊಳ್ಳದ ಜನ

VIDEO & PHOTOS: ಚಿಟ್ಟೆಯಲ್ಲ ಇದು, ಹೆಣ್ಣಿನ ಬೆತ್ತಲೆ ದೇಹದ ಮೇಲೆ ಸೃಷ್ಟಿಯಾದ ಭ್ರಮೆ; ದಿಟ್ಟಿಸಿ ನೋಡಿ ನಗ್ನ ಯುವತಿಯನ್ನು ಕಾಣುತ್ತೀರಿ…!

ಭರ್ಜರಿ ಹನಿಮೂನ್​!- ಐಷಾರಾಮಿ ರೆಸಾರ್ಟ್​ನಲ್ಲಿ ಇರೋದು ಇದೊಂದೇ ಜೋಡಿ- 6 ದಿನಕ್ಕೆ ಬಂದವರೀಗ 26 ದಿನ ಇರುವಂತಾಗಿದೆ ನೋಡಿ..

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:twenty − seventeen =
Remember me
