ದಾವಣಗೆರೆ:ಹಿಜಾಬ್​-ಕೇಸರಿ ಸಂಘರ್ಷ ದಿನೇದಿನೆ ತಾರಕಕ್ಕೆ ಏರುತ್ತಿರುವುದಷ್ಟೇ ಅಲ್ಲ, ನಾನಾ ಬೆಳವಣಿಗೆಗೂ ಕಾರಣವಾಗುತ್ತಿದೆ. ಇದೇ ಸಂದರ್ಭದಲ್ಲಿ ಕೋಮುಭಾವನೆ ಕೆರಳಿಸುವಂಥ ಕೆಲಸ ಕೂಡ ನಡೆಯುತ್ತಿರುವುದು ಆತಂಕ ಮೂಡಿಸಿದೆ.
ಹಿಜಾಬ್​-ಕೇಸರಿ ಸಂಘರ್ಷದ ನಡುವೆ ಮತೀಯ ಭಾವನೆ ಕೆರಳಿಸುವ, ಇನ್ನೊಬ್ಬರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂಥ ಪ್ರಕರಣಗಳೂ ಸಂಭವಿಸಿರುವುದರಿಂದ ರಾಜ್ಯದ ಕೆಲವೆಡೆ ಪೊಲೀಸರು 144 ಸೆಕ್ಷನ್​ ವಿಧಿಸಿರುತ್ತಾರೆ.
ಇನ್ನು ಇಲ್ಲೊಂದು ಜಿಲ್ಲೆಯಲ್ಲಿ ಪೊಲೀಸರು ಪ್ರಕಟಣೆಯೊಂದನ್ನು ಹೊರಡಿಸಿದ್ದು, ಸಾರ್ವಜನಿಕರು ವಾಟ್ಸ್​ಆ್ಯಪ್​, ಫೇಸ್​ಬುಕ್​, ಟ್ವಿಟರ್​ ಮುಂತಾದೆಡೆ ಸ್ಟೇಟಸ್​ ಹಾಕುವ ಮುಂಚೆ ಯೋಚಿಸಿ ಪೋಸ್ಟ್ ಮಾಡುವಂತಾಗಿದೆ.
ಇದನ್ನೂ ಓದಿ:ಮತ್ತೊಂದು ವೃದ್ಧ ದಂಪತಿಯ ಬರ್ಬರ ಕೊಲೆ: ಇಲ್ಲೂ ಬೇರೆ ಬೇರೆ ಕೋಣೆಗಳಲ್ಲಿ ಹತ್ಯೆ!
ದಾವಣಗೆರೆ ಜಿಲ್ಲೆಯ ಯಾವುದೇ ತಾಲೂಕು-ನಗರಗಳಲ್ಲಿ ಯಾರಾದರೂ ಹಿಜಾಬ್​-ಕೇಸರಿ ಶಾಲು ವಿಚಾರಕ್ಕೆ ಸಂಬಂಧಿಸಿ ವಾಟ್ಸ್​ಆ್ಯಪ್​, ಫೇಸ್​ಬುಕ್, ಇನ್​ಸ್ಟಾಗ್ರಾಂ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ರೀತಿಯ ಪೋಸ್ಟರ್ ಮತ್ತು ಪ್ರಚೋದನಾಕಾರಿ ಹೇಳಿಕೆಗಳನ್ನು ಹಾಕಿದಲ್ಲಿ ಅಂಥವರ ವಿರುದ್ಧ ರೌಡಿಶೀಟರ್​ ಅಥವಾ ಕಮ್ಯುನಲ್ ಗೂಂಡಾಶೀಟ್​​ಗಳನ್ನು ತೆರೆಯಲಾಗುವುದು ಎಂದು ದಾವಣಗೆರೆ ಎಸ್​ಪಿ ಸೂಚನೆ ಹೊರಡಿಸಿದ್ದಾರೆ. ಮಾತ್ರವಲ್ಲ ಅಂಥ ಸ್ಟೇಟಸ್​ಗಳು ಗಮನಕ್ಕೆ ಬಂದಲ್ಲಿ ಕಾನೂನು ಕೈಗೆತ್ತಿಕೊಳ್ಳದೆ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಬೇಕು ಎಂದು ತಿಳಿಸಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 10 =
Remember me
