ಬೆಂಗಳೂರು:ಕೋವಿಡ್​ 19ನಿಂದಾಗಿ ದೇಶದಾದ್ಯಂತ ಲಾಕ್​ಡೌನ್​ ಘೋಷಿಸಿರುವ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್​ ಬ್ಯಾಂಕ್​ (ಆರ್​ಬಿಐ) ಗೃಹ ಮತ್ತು ವಾಹನ ಸಾಲ ಸೇರಿ ವಿವಿಧ ಸಾಲಗಳಿಗೆ ಮೂರು ತಿಂಗಳ ಸಮಾನ ಮಾಸಿಕ ಕಂತುಗಳ (ಇಎಂಐ) ಪಾವತಿಗೆ ವಿನಾಯ್ತಿ ನೀಡುವಂತೆ ದೇಶದ ಎಲ್ಲ ಬ್ಯಾಂಕ್​ಗಳಿಗೆ ಸೂಚಿಸಿದೆ.
ಕೆಲವು ಬ್ಯಾಂಕ್​ಗಳು ಇದನ್ನು ಕಡ್ಡಾಯವಾಗಿ ಜಾರಿಗೊಳಿಸಿವೆ. ಹಲವು ಬ್ಯಾಂಕ್​ಗಳು ಇದರ ಆಯ್ಕೆಯನ್ನು ಗ್ರಾಹಕರಿಗೆ ಬಿಟ್ಟಿವೆ. ಈ ಅವಕಾಶವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಸೈಬರ್​ ಕಳ್ಳರು ಗ್ರಾಹಕರ ಬ್ಯಾಂಕ್​ ಖಾತೆಗಳಿಗೆ ಕನ್ನ ಹಾಕಲಾರಂಭಿಸಿದ್ದಾರೆ.
ಬ್ಯಾಂಕ್​ಗಳ ಗ್ರಾಹಕರಿಗೆ ಕರೆ ಮಾಡುತ್ತಿರುವ ಸೈಬರ್​ ಕಳ್ಳರು ಇಎಂಐ ಪಾವತಿಯ ವಿನಾಯ್ತಿ ಪಡೆದುಕೊಳ್ಳಲು ಸಹಕರಿಸುವುದಾಗಿ ಹೇಳಿ, ಒಟಿಪಿಗಳನ್ನು ಕಳುಹಿಸುತ್ತಿದ್ದಾರೆ. ಆ ಒಟಿಪಿಯನ್ನು ಕೊಡುವಂತೆ ಗ್ರಾಹಕರಿಗೆ ಸೂಚಿಸುತ್ತಾರೆ. ಒಟಿಪಿ ಕೊಡುತ್ತಲೇ ಗ್ರಾಹಕರ ಬ್ಯಾಂಕ್​ ಖಾತೆಗಳಿಂದ ಹಣ ದೋಚುತ್ತಿದ್ದಾರೆ.
ಈ ರೀತಿಯ ಸಾಕಷ್ಟು ದೂರುಗಳು ಬೆಂಗಳೂರು ಸೈಬರ್​ ಕ್ರೈಂ ಬ್ರ್ಯಾಂಚ್​ನಲ್ಲಿ ದಾಖಲಾಗುತ್ತಿವೆ. ಈ ಹಿನ್ನೆಲೆಯಲ್ಲಿ ಯಾರಾದರೂ ಕರೆ ಮಾಡಿ ಇಎಂಐ ಪಾವತಿಯ ವಿನಾಯ್ತಿ ಕೊಡುವುದಾಗಿಯೂ, ಒಟಿಪಿ ಹೇಳುವಂತೆ ತಿಳಿಸಿದರೆ ಯಾರೂ ಕೂಡ ಕೊಡಬಾರದು ಎಂದು ಐಪಿಎಸ್​ ಅಧಿಕಾರಿ ಡಿ. ರೂಪಾ ಟ್ವೀಟ್​ ಮಾಡಿ, ಜನರನ್ನು ಎಚ್ಚರಿಸಿದ್ದಾರೆ.
There's is a new cyber fraud that's come to light. Modus operandi is,customers get calls requesting for OTP to postpone their EMI. Once OTP is shared,amount is withdrawn. Requesting all to spread this message .@CyberDost.@CybercrimeCID.@KarnatakaVarthe.@BlrCityPolice.@bommai
— D Roopa IPS (@D_Roopa_IPS)April 5, 2020

ಕಾಶ್ಮೀರ ಕಣಿವೆಗೆ ನುಸುಳಲು ಯತ್ನಿಸಿದ 9 ಉಗ್ರರ ಹತ್ಯೆ, ಭದ್ರತಾ ಪಡೆಯ ಮೂವರು ಸಿಬ್ಬಂದಿ ಹುತಾತ್ಮ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
