ಕುಮಟಾ:ಎಟಿಎಂ ಕೇಂದ್ರದಲ್ಲಿ ಹಣ ತೆಗೆಯುವಾಗ ಏನಾದರೂ ಬೇರೆಯವರಿಂದ ಸಹಾಯ ಕೇಳುವ ಮುನ್ನ ಅಥವಾ ಯಾರಾದರೂ ಸಹಾಯ ಮಾಡುವುದಾಗಿ ಬಂದಾಗ ಅದಕ್ಕೆ ಒಪ್ಪಿಕೊಳ್ಳುವ ಮೊದಲು ಒಂದೆರಡು ಸಲ ಯೋಚಿಸಿಯೇ ಮುಂದುವರಿಯುವುದು ಒಳಿತು. ಏಕೆಂದರೆ ಸಹಾಯದ ಸೋಗಿನಲ್ಲಿ ಕಣ್ಮುಂದೆಯೇ ಕೈಚಳಕ ತೋರಿ ಬಳಿಕ ಸಾವಿರಾರು ರೂಪಾಯಿ ದೋಚಿರುವ ಪ್ರಕರಣವೊಂದು ವರದಿಯಾಗಿದೆ.
ಕುಮಟಾದ ನ್ಯಾಯಾಲಯದಲ್ಲಿ ಕೆಲಸ ಮಾಡುತ್ತಿರುವ ಶಿರಸಿ ಹುಲೇಕಲ್​ ನಿವಾಸಿ ಮಂಜುನಾಥ್​ ಬೋರ್ಕರ್​ ಎಂಬ 54 ವರ್ಷದ ವ್ಯಕ್ತಿ ಹೀಗೊಂದು ವಂಚನೆಗೊಳಗಾಗಿ 70 ಸಾವಿರ ರೂಪಾಯಿ ಕಳೆದುಕೊಂಡಿದ್ದಾರೆ.
ಕುಮಟಾ ಎಸ್​​ಬಿಐ ಎಟಿಎಂನಲ್ಲಿ ಬೋರ್ಕರ್ ಹಣ ತೆಗೆಯುತ್ತಿರುವಾಗ ಮಾಸ್ಕ್ ಧರಿಸಿದ ಅಪರಿಚಿತ ವ್ಯಕ್ತಿ ಸಹಾಯ ಮಾಡುವುದಾಗಿ ಬಂದು, ಬೋರ್ಕರ್ ಅವರ ಎಟಿಎಂ ಪಿನ್ ಕೇಳಿ ತಿಳಿದುಕೊಂಡ. ನಂತರ ಅವರಿಗೆ ಗೊತ್ತಾಗದಂತೆ ಅವರ ಎಟಿಎಂ ಕಾರ್ಡ್ ಬದಲು ಬೇರೆ ಕಾರ್ಡ್ ನೀಡಿ, ಆಮೇಲೆ 70,905 ರೂ. ಬ್ಯಾಂಕ್ ಖಾತೆಯಿಂದ ಡ್ರಾ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಇದೀಗ ವಂಚಕ ಕಾಣಿಸಿಕೊಂಡಿರುವ ಸಿಸಿಟಿವಿ ವಿಡಿಯೋ ತುಣುಕನ್ನು ಬಿಡುಗಡೆ ಮಾಡಿದ್ದಾರೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಉದ್ಯೋಗಿಗಳಿಗೆ ಗುಡ್​ ನ್ಯೂಸ್​! ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಾಗಲಿದೆ ವೇತನ

ಕಬಡ್ಡಿ ಆಟಗಾತಿಯ ತಲೆಗೂದಲನ್ನೇ ಕತ್ತರಿಸಿದ್ರು, ಅವಳ ತಾಯಿ ಮೇಲೂ ಹಲ್ಲೆ ನಡೆಸಿದ್ರು; ಇದು ‘ಗಂಡ-ಹೆಂಡತಿ ಮತ್ತು ಅವನು’ ಕಥೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 10 =
Remember me
