|ಕೆ.ಎಸ್.ಪ್ರಣವಕುಮಾರ್ಚಿತ್ರದುರ್ಗ
ಬೇಸಿಗೆ ಬಂದೊಡನೆ ನೀರಿಗಿಳಿದು ಬೇಗೆ ತಣಿಸಿಕೊಳ್ಳಲು ಮನಸು ಹಾತೊರೆಯುವುದು ಸಹಜ. ಆದರೆ ನೀರಿಗೆ ಇಳಿಯುವ ಮುನ್ನ ಸಾಕಷ್ಟು ಎಚ್ಚರಿಕೆ ಅಗತ್ಯವಾಗಿದೆ. ಬೇಸಿಗೆ ಬಿಸಿಲು ಚುರುಕಾಗುತ್ತಿದ್ದಂತೆಯೇ ಮಕ್ಕಳಲ್ಲಿ ನೀರಿನ ಸೆಳೆತ ಹೆಚ್ಚಾಗುತ್ತದೆ. ರಜೆಯ ಮಜಾ ಅನುಭವಿಸಲು ಮಕ್ಕಳು ವಿವಿಧ ಕಾರಣ ಹೇಳಿ ಸ್ನೇಹಿತರೊಂದಿಗೆ ಹೊಲ ಗದ್ದೆಗಳಿಗೆ ತೆರಳುತ್ತಾರೆ. ಸಮೀಪದ ಕೆರೆ, ಕಾಲುವೆಗಳಲ್ಲಿ ಸ್ನೇಹಿತರೊಂದಿಗೆ ಈಜಲು ಹೋಗಿ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುತ್ತಾರೆ. ಈಜಲು ಹೋಗಿ ನೀರುಪಾಲಾದವರಲ್ಲಿ ಹದಿಹರೆಯದ ಮಕ್ಕಳೇ ಸಂಖ್ಯೆಯಲ್ಲಿದ್ದಾರೆ.
ರಾಜ್ಯದಲ್ಲಿ 2022ರಲ್ಲಿ 10 ರಿಂದ 25 ವರ್ಷದೊಳಗಿನ ಬಾಲಕರು, ಯುವಕರು ಸೇರಿ ಅಂದಾಜು ಸಾವಿರ ಮಂದಿ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇದರಲ್ಲಿ ಯುವತಿಯರೂ ಇದ್ದಾರೆ. 2023ರಲ್ಲೂ ಇಂತಹ ಕಹಿ ಘಟನೆಗಳು ಮುಂದುವರಿದಿದ್ದು, ಮಕ್ಕಳನ್ನು ಕಳೆದುಕೊಂಡ ಪಾಲಕರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ.
ಕಹಿ ಘಟನೆಗಳ ಸಾಲು:2023ರ ಮಾ.26ರಂದು ಚಿತ್ರದುರ್ಗ ನಗರದ ಕರವರ್ತಿ ಸಮೀಪದ ಹೊಂಡದಲ್ಲಿ ಈಜಲು ಹೋಗಿದ್ದ 10, 11 ವರ್ಷದ ಬಾಲಕರಿಬ್ಬರು ನೀರು ಪಾಲಾಗಿದ್ದರು. ತಾಲೂಕಿನ ಜಾನುಕೊಂಡ ಚೆಕ್​ಡ್ಯಾಂನಲ್ಲಿ ಯುಗಾದಿ ಚಂದ್ರದರ್ಶನದ ದಿನ ಕೂಡ ಒಬ್ಬ ಯುವಕ ನೀರುಪಾಲಾಗಿದ್ದ.
ಹೊಳಲ್ಕೆರೆ ತಾಲೂಕಿನ ನಂದನಹೊಸೂರು ಗ್ರಾಮ ಸಮೀಪದ ಗುಂಡಿಕೆರೆಯಲ್ಲಿ ದ್ವಿತೀಯ ಪಿಯು ಪರೀಕ್ಷೆ ಬರೆದು ಈಜಲು ಹೋಗಿ, ಒಬ್ಬರ ರಕ್ಷಣೆಗೆ ಮತ್ತೊಬ್ಬರು ತೆರಳಿ ಮಾ.28ರಂದು ಮೂವರು ಸ್ನೇಹಿತರು ಮೃತಪಟ್ಟಿದ್ದರು.
ಈ ಕಹಿ ಘಟನೆಗಳು ಮಾಸುವ ಮುನ್ನವೇ ಏ.1 ರಂದು ಚಿಕ್ಕಬಳ್ಳಾಪುರ ತಾಲೂಕಿನ ಶ್ರೀನಿವಾಸ ಸಾಗರ ಜಲಾಶಯಕ್ಕೆ ವಾರಾಂತ್ಯದ ಪ್ರವಾಸಕ್ಕೆಂದು ಬಂದಿದ್ದ ಇಬ್ಬರು ಯುವತಿಯರು, ಒಬ್ಬ ಯುವಕ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಏ.4ರಂದು ಜಗಳೂರು ಕೆರೆಯಲ್ಲಿ ಈಜಲು ಹೋದ ಯುವಕರಿಬ್ಬರು ಮೃತಪಟ್ಟಿದ್ದರು.
2023ರ ಜ.2ರಂದು ರಾಣೇಬೆನ್ನೂರು ತಾಲೂಕಿನ ಮುದೇನೂರು ಗ್ರಾಮದಲ್ಲಿ ಮೂವರು, ಫೆ.11ರಂದು ಸುಳ್ಯ ತಾಲೂಕಿನ ದೊಡ್ಡೇರಿ ಸಮೀಪದ ಪಯಸ್ವಿನಿ ನದಿಯಲ್ಲಿ ಇಬ್ಬರು, 2022ರ ಏ.22ರಂದು ತುಮಕೂರು ನಗರ ಹೊರವಲಯದ ತಿಮ್ಮಲಾಪುರದಲ್ಲಿ, ಜೂ.19ರಂದು ಕಡೂರು ತಾಲೂಕಿನ ಅಣೀಗೆರೆಯಲ್ಲಿ, ಡಿ.17 ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯ ಹೊರವಲಯದ ಕಾಲುವೆಯಲ್ಲಿ, ಹೆಬ್ರಿಯ ಶಿವಪುರ ಗ್ರಾಮದ ಬಟ್ರಾಡಿ ಬಳಿಯ ಶಿವಪುರ ಹೊಳೆಯಲ್ಲಿ ತಲಾ ಮೂವರು ನೀರು ಪಾಲಾಗಿದ್ದಾರೆ.
ಪಾಲಕರಲ್ಲಿ ಎಚ್ಚರಿಕೆ ಅಗತ್ಯ:ಪ್ರತಿ ವರ್ಷ ಬೇಸಿಗೆ ರಜೆಯ ಏಪ್ರಿಲ್, ಮೇ ಹಾಗೂ ಮಳೆಗಾಲ ಮತ್ತು ದಸರಾ ರಜೆಯ ಅಕ್ಟೋಬರ್​ನಲ್ಲೇ ಈಜಲು ಹೋಗಿ ಸಾವು-ನೋವಾದ ಘಟನೆಗಳ ಸಂಖ್ಯೆ ಹೆಚ್ಚು. ಪಾಲಕರು ತಮ್ಮ ಮಕ್ಕಳ ಮೇಲೆ ಹೆಚ್ಚು ನಿಗಾ ಇಡಬೇಕು. ಇಂತಹ ದುರ್ಘಟನೆಗಳು ಪುನರಾವರ್ತನೆ ಆಗದಂತೆ ಎಚ್ಚರವಹಿಸಬೇಕು.
ಆಳ-ಅಗಲ ಗೊತ್ತಿರದ ಕೆರೆ, ಕಟ್ಟೆ, ಬಾವಿ, ಹೊಂಡ ಸೇರಿ ಯಾವುದೇ ಸ್ಥಳಗಳಲ್ಲಿಯೂ ಈಜಾಡುವುದು ಸೂಕ್ತವಲ್ಲ. ಈಜು ಬಾರದವರು ನುರಿತ ತರಬೇತುದಾರರಿಂದಲೇ ಈಜು ಕಲಿತರೆ ಮುಂದಾಗುವ ಅಪಾಯ ತಪ್ಪಿಸಬಹುದು.
|ಜಿ.ಎನ್.ದೀಪಕ್​ಕುಮಾರ್ರಾಷ್ಟ್ರೀಯ ಈಜುಪಟು

ಅಪರಿಚಿತರ ಬಳಿ ಲಿಫ್ಟ್ ಕೇಳಿಯೇ ಏಕಾಂಗಿಯಾಗಿ ಇಡೀ ರಾಜ್ಯ ಸುತ್ತಲಾರಂಭಿಸಿದ್ದಾಳೆ ಈ ಯುವತಿ: ಉದ್ದೇಶವಾದರೂ ಏನು?
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:seven − four =
Remember me
