ಮೈಸೂರು: ಜನರು ಸೂಕ್ಷ್ಮತೆ ಮತ್ತು ಜಾಗರೂಕತೆಯಿಂದ ವರ್ತಿಸುವ  ಮೂಲಕ ಕರೊನಾ ವೈರಸ್ ಹರಡುವಿಕೆಯಿಂದ ಪಾರಾಗುವ ಕಡೆಗೆ ಗಮನಹರಿಸಬೇಕು. ಈ ನಿಟ್ಟಿನಲ್ಲಿ ಪ್ರತಿಯೊºರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸುತ್ತೂರು ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಲಹೆ ನೀಡಿದ್ದಾರೆ.
ಕರೊನಾ ವೈರಸ್ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಇದು ತೀಕ್ಷ್ಣವಾಗಿ ಹರಡುವ ಮಾರಣಾಂತಿಕ ರೋಗವಾಗಿದೆ. ಆದರೆ, ಇದರಿಂದ ಜನತೆ ಭಯಭೀತರಾಗಬೇಕಾಗಿಲ್ಲ ಮತ್ತು ವಿಚಲಿತರಾಗಬೇಕಿಲ್ಲ ಎಂದು ಪ್ರಕಟಣೆಯಲ್ಲಿ ಧೈರ್ಯ ಹೇಳಿದ್ದಾರೆ. ಸೋಂಕು ಹರಡá-ವಿಕೆಯ ನಿಯಂತ್ರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಯೋಚಿತವಾಗಿ ಹಾಗೂ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಮನೆಗಳಲ್ಲಿ ಏಕಾಂತತೆಯ ಭಾವನೆಯನ್ನು ಉಂಟುಮಾಡಿಕೊಳ್ಳಬಾರದು. ಕುಟುಂಬದ ಸದಸ್ಯರು, ಸ್ನೇಹಿತರೊಂದಿಗೆ ಸೌಹಾರ್ದಯುತ ಸನ್ನಿವೇಶ ಕಲ್ಪಿಸಿಕೊಳ್ಳಬೇಕು. ಯುಗಾದಿಯನ್ನು ವೈಭವವಾಗಿ ಆಚರಿಸುವುದರ ಬದಲಾಗಿ, ಸರಳವಾಗಿ ಮನೆಯಲ್ಲೇ ಆಚರಿಸಿ ಎಂದು ಕೋರಿದ್ದಾರೆ.
ಭಕ್ತರ ಪ್ರವೇಶಕ್ಕೆ ನಿರ್ಬಂಧ
ರಾಜ್ಯದಲ್ಲಿ ಕರೊನಾ ಸೋಂಕು ದಿನೇದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿದ್ಧಗಂಗಾ ಮಠಕ್ಕೆ ಸಾರ್ವಜನಿಕರ, ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ತಿಳಿಸಿದ್ದಾರೆ. ಶ್ರೀಮಠದಲ್ಲಿ 1,500 ವಿದ್ಯಾರ್ಥಿಗಳು ಇದ್ದಾರೆ. ಇವರ್ಯಾರೂ ಮನೆಗೆ ತೆರಳಲು ಇಷ್ಟಪಟ್ಟಿಲ್ಲ. ಹಾಗಾಗಿ, ಅವರನ್ನು ಇಲ್ಲೇ ಉಳಿಸಿಕೊಳ್ಳಲಾಗಿದೆ. ಈ ವಿದ್ಯಾರ್ಥಿಗಳ ಸೂಕ್ತ ತಪಾಸಣೆ ಮಾಡಿ ನಿಗಾ ವಹಿಸಲಾಗುತ್ತಿದೆ ಎಂದು ಶ್ರೀಗಳು ತಿಳಿಸಿದ್ದಾರೆ.
ಯುಗಾದಿ ಹಬ್ಬವನ್ನು ಸರಳವಾಗಿ ಆಚರಿಸಿ
ಶ್ರೀಶೈಲಂ: ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ ಎಂಬ ಕವಿವಾಣಿಯಂತೆ ನಾವು ಆರೋಗ್ಯವಾಗಿದ್ದರೆ ಮತ್ತು ಜೀವಂತವಾಗಿದ್ದರೆ ಇಂಥ ಹಲವಾರು ಯುಗಾದಿ ಹಬ್ಬಗಳನ್ನು ಆಚರಿಸಬಹುದು. ದೇಶದಲ್ಲಿ ಕರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ಅದನ್ನು ನಿಯಂತ್ರಿಸಲು ನಾವೆಲ್ಲ ಕಡ್ಡಾಯವಾಗಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕಾಗಿದೆ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದ್ದಾರೆ. ಕೇಂದ್ರ ಹಾಗೂ ಎಲ್ಲ ರಾಜ್ಯ ಸರ್ಕಾರಗಳು ನಮ್ಮ ಆರೋಗ್ಯವನ್ನು ಕಾಪಾಡುವುದಕ್ಕಾಗಿಯೇ ಯಾರೂ ತಂತಮ್ಮ ಮನೆಗಳಿಂದ ಹೊರಬರಬೇಡಿ ಎಂದು ನಿಷೇಧಾಜ್ಞೆ ಹೊರಡಿಸಿವೆೆ. ದೇಶದ ಪ್ರತಿಯೊಬ್ಬರೂ ಇದನ್ನು ಚಾಚೂ ತಪ್ಪದೆ ಪಾಲಿಸಬೇಕೆಂದು ಸಾರ್ವಜನಿಕರಿಗೆ ಈ ಮೂಲಕ ಕರೆ ಕೊಡುತ್ತಿದ್ದೇವೆ ಎಂದಿದ್ದಾರೆ. ಶ್ರೀಶೈಲದ ಮಲ್ಲಿಕಾರ್ಜುನ ದೇವಸ್ಥಾನದಲ್ಲೂ ಈ ವೈರಸ್ ನಿಯಂತ್ರಣಕ್ಕಾಗಿ ಮಹಾ ಮೃತ್ಯುಂಜಯ ಹೋಮ, ಜಪ, ತಪ ಮುಂತಾದ ಪೂಜೆಗಳು ಏಕಾಂತದಲ್ಲಿ ನಿರಂತರ ನಡೆದಿರುತ್ತವೆ. ಇದಲ್ಲದೆ, ಶ್ರೀಶೈಲದ ಯುಗಾದಿ ಜಾತ್ರೆಯನ್ನೂ ಅತ್ಯಂತ ಸರಳವಾಗಿ ಮತ್ತು ಏಕಾಂತವಾಗಿ ಆಚರಿಸಲಾಗುತ್ತದೆ. ಇದನ್ನೇ ಮಲ್ಲಯ್ಯನ ಭಕ್ತರು ಕೂಡ ಸ್ವಗ್ರಾಮಗಳಲ್ಲಿ ಮನೆಗಳಲ್ಲಿ ಅನುಸರಿಸಬೇಕು ಎಂದು ತಿಳಿಸಿದ್ದಾರೆ.
ಮನೆಯಿಂದ ಹೊರ ಬಂದ ಕರೊನಾ ಸೋಂಕಿತ ವ್ಯಕ್ತಿ ವಿರುದ್ಧ ಕೇಸು ದಾಖಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + ten =
Remember me
