ಬೆಂಗಳೂರು:ಜಲಸಂರಕ್ಷಣೆ, ಎಲ್ಲರಿಗೂ ಉತ್ತಮ ಆಹಾರ, ಆರೋಗ್ಯ ಹಾಗೂ ಎಲ್ಲರಿಗೂ ಸಮಾನ ಗೌರವ… ಇವು ಸಮರ್ಥ ಭಾರತ ಟ್ರಸ್ಟ್​ನ ಈ ಬಾರಿಯ ‘ಬಿ ಗುಡ್ ಡೂ ಗುಡ್’ ಅಭಿಯಾನದ ಧ್ಯೇಯವಾಕ್ಯ.
ಸಮರ್ಥ ಭಾರತ ಟ್ರಸ್ಟ್ ಸ್ವಾಮಿ ವಿವೇಕಾನಂದರ 157ನೇ ಜನ್ಮದಿನಾಚರಣೆ ಅಂಗವಾಗಿ ಜಯನಗರ ಆರ್.ವಿ. ಟೀಚರ್ರ್ಸ್ ಕಾಲೇಜಿನಲ್ಲಿ ಭಾನುವಾರ ಏರ್ಪಡಿಸಿದ್ದ ‘ಬಿ ಗುಡ್ ಡೂ ಗುಡ್’ (ಉತ್ತಮನಾಗು-ಉಪಕಾರಿಯಾಗು) ಅಭಿಯಾನಕ್ಕೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಸುರೇಶ್​ಕುಮಾರ್, ಸಂಸದ ತೇಜಸ್ವಿ ಸೂರ್ಯ ಚಾಲನೆ ನೀಡಿದರು.
ಸುರೇಶ್ ಕುಮಾರ್ ಮಾತನಾಡಿ, ನಮ್ಮ ದೇಶದಲ್ಲಿ ಕೆಲವು ವ್ಯಕ್ತಿಗಳಿದ್ದಾರೆ. ಅವರ ಹೆಸರು ನೆನಪಿಸಿಕೊಂಡರೆ ರೋಮಾಂಚನವಾಗುತ್ತದೆ. ಅಂತವರ ಸಾಲಿನಲ್ಲಿ ವಿವೇಕಾನಂದ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ಅವರ ಜೀವನ, ವಿಚಾರ, ವ್ಯಕ್ತಿತ್ವ ಪ್ರತಿನಿತ್ಯ ಶಕ್ತಿ ಕೊಡುವ ಸಂಗತಿಗಳಾಗಿವೆ. ಇವುಗಳನ್ನು ಎಲ್ಲರೂ ಮೈಗೊಡಿಸಿಕೊಳ್ಳಬೇಕು ಎಂದು ಹೇಳಿದರು.
ಸಮಾಜದ ಒಳಿತಿನ ದುಡಿಮೆ ದೇಶಭಕ್ತಿ: ದೇಶಭಕ್ತಿ ಅಂದರೆ ಆ.15ರ ಬೆಳಗ್ಗೆ ತ್ರಿವರ್ಣ ಧ್ವಜಕ್ಕೆ ವಂದಿಸಿ, ರಾಷ್ಟ್ರಗೀತೆ ಹಾಡುವುದು. ಭಾರತ-ಪಾಕ್ ಕ್ರಿಕೆಟ್ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಬೌಂಡರಿ ಬಾರಿಸಿದಾಗ ಭಾರತದ ಧ್ವಜ ಎತ್ತಿ ಹಿಡಿಯುವುದು, ಭಾರತ ಗೆದ್ದಾಗ ಭಾರತ್ ಮಾತಾಕೀ ಜೈ ಅನ್ನುವುದಷ್ಟೇ ಅಲ್ಲ. ದೈನಂದಿನ ಜೀವನದಲ್ಲಿ ಸಾಮಾಜದ ಒಳಿತಿಗಾಗಿ ಕೆಲಸ ಮಾಡುವುದು ದೇಶಭಕ್ತಿ ಎಂದು ಹೇಳಿದರು.
ಆರ್.ವಿ. ಟೀಚರ್ಸ್ ಕಾಲೇಜಿನ ಪ್ರಾಂಶುಪಾಲ ಡಾ. ಕೃಷ್ಣಯ್ಯ, ಸಮರ್ಥ ಭಾರತ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ದೇವಾನಂದ್, ರಾಜೇಶ್ ಪದ್ಮಾರ್ ಮತ್ತಿತರರಿದ್ದರು.
ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಸೈನ್ಸ್ ಬೆಂಗಳೂರಿನಲ್ಲೇ ಉಳಿದಿದೆ ಎಂದರೆ ಅದಕ್ಕೆ ಸ್ವಾಮಿ ವಿವೇಕಾನಂದರೇ ಕಾರಣ. ಈ ಸಂಸ್ಥೆಯನ್ನು ಬೆಂಗಳೂರಿನಿಂದ ಬೇರೆಡೆಗೆ ಸ್ಥಳಾಂತರಿಸಲು ಹುನ್ನಾರ ನಡೆದಿತ್ತು. ಅದನ್ನು ಖಂಡಿಸಿ ವಿವೇಕಾನಂದರು ಹೋರಾಟ ಮಾಡಿದರು. ಹಾಗಾಗಿ ಆ ಸಂಸ್ಥೆ ಬೆಂಗಳೂರಿನಲ್ಲೇ ಉಳಿಯಿತು.| ಸುರೇಶ್ ಕುಮಾರ್ಶಿಕ್ಷಣ ಸಚಿವ
ವಿವೇಕಾನಂದರ ಹೆಸರಲ್ಲೇ ವಿವೇಕ ಮತ್ತು ಆನಂದ ಇದೆ. ವಿವೇಕದಡಿ ಬದುಕಿದರೆ ನಿಮಗೂ ಆನಂದ ಸಿಗುತ್ತದೆ ಎಂಬುದನ್ನು ಜನತೆಗೆ ಅವರು ತೋರಿಸಿಕೊಟ್ಟಿದ್ದಾರೆ. ವಿವೇಕಾನಂದರ ವಿಚಾರಧಾರೆಗಳು ಇಂದಿಗೂ ಪ್ರಸ್ತುತ. ಪ್ರತಿಯೊಬ್ಬರು ಅವರ ಚಿಂತನೆಗಳನ್ನು ಮೈಗೂಡಿಸಿ ಕೊಂಡು ಮುಂದೆ ಸಾಗಬೇಕು.| ತೇಜಸ್ವಿ ಸೂರ್ಯಸಂಸದ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − fifteen =
Remember me
