ಕುಂದಾಪುರ:ಹನಿಮೂನ್ ಬದಲು ಕಡಲ ಕಿನಾರೆ ಸ್ವಚ್ಛ ಮಾಡಿದ ನವದಂಪತಿ ಪ್ರಧಾನಿ ನರೇಂದ್ರ ಮೋದಿ ಅವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಭಾನುವಾರ ನಡೆದ ವರ್ಷದ ಕೊನೆಯ ಮನ್​ ಕೀ ಬಾತ್​ ಕಾರ್ಯಕ್ರಮದಲ್ಲಿ ನವಜೋಡಿಯ ಕಾರ್ಯವನ್ನು ಶ್ಲಾಘಿಸಿದ ಮೋದಿ, ಇದು ಯುವ ಪೀಳಿಗೆಗೆ ದಾರಿದೀಪ ಎಂದು ಬಣ್ಣಿಸಿದ್ದಾರೆ. ಬೈಂದೂರು ಮೂಲದ ಅನುದೀಪ ಹೆಗ್ಡೆ ಹಾಗೂ ಮಿನುಷಾ ಕಾಂಚನ್ ಮದುವೆ ಬಳಿಕ ಜಿಲ್ಲೆಯ ಸೋಮೇಶ್ವರ ಬೀಚ್ ಸ್ವಚ್ಛ ಮಾಡಿದ್ದರು.
ಅನುದೀಪ್ ವೃತ್ತಿಯಲ್ಲಿ ಡಿಜಿಟಲ್ ಮಾರ್ಕೆಟರ್, ಸ್ಟುಡಿಯೋ ಪ್ರೊಡಕ್ಷನ್ ಹೊಂದಿದ್ದಾರೆ. ಮಿನುಷಾ ಫಾರ್ವಸ್ಯುಟಿಕಲ್ ಕಂಪನಿ ಉದ್ಯೋಗಿ. ನವೆಂಬರ್ 16ರಂದು ಇವರು ವಿವಾಹವಾಗಿದ್ದರು. ಮದುವೆ ನೆನಪು ಚಿರಸ್ಥಾಯಿಯಾಗಬೇಕು ಎಂಬ ಉದ್ದೇಶದಿಂದ ಬೀಚ್ ಸ್ವಚ್ಛ ಮಾಡಿದ್ದರು. ನ.27ರಿಂದ ಪ್ರತಿದಿನ ಸಂಜೆ ಎರಡು ಗಂಟೆಯಂತೆ ನಿರಂತರ 9 ದಿನ ಸ್ವಚ್ಛತಾ ಕಾರ್ಯ ಕೈಗೊಂಡ ದಂಪತಿ, 800 ಕೆ.ಜಿ.ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡಿದ್ದರು.
ಮದುವೆ ನಂತರ ವಿದೇಶ ಟೂರ್ ಅಥವಾ ಬೇರೆ ಕಡೆ ಸ್ವಚ್ಛತಾ ಕಾರ್ಯ ಮಾಡಬೇಕು ಎಂದು ನಿಶ್ಚಯಿಸಿದ್ದೆವು. ಕೋವಿಡ್ ನಮ್ಮ ಉದ್ದೇಶಕ್ಕೆ ಅಡ್ಡಿಯಾಯಿತು. ನಮ್ಮೂರಿನ ಕಡಲ ಕಿನಾರೆಯನ್ನೇ ಆಯ್ಕೆ ಮಾಡಿ ಸ್ವಚ್ಛ ಮಾಡುವ ನಿರ್ಧಾರಕ್ಕೆ ಬಂದೆವು. ಸ್ಥಳೀಯರು ಕೈ ಜೋಡಿಸಿದ್ದರಿಂದ ಸೋಮೇಶ್ವರ ಕಡಲ ತೀರ ಸ್ವಚ್ಛವಾಗಿದೆ. ನಮ್ಮ ಕೆಲಸವನ್ನು ಪ್ರಧಾನಿ ಕಾರ್ಯಾಲಯ ಗುರುತಿಸಿತು. ಪ್ರಧಾನಿ ಮೋದಿಯವರು ಮನ್ ಕೀ ಬಾತ್​ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿರುವುದು ಖುಷಿ ತಂದಿದೆ.| ಅನುದೀಪ ಹೆಗ್ಡೆ-ಮಿನುಷಾನವದಂಪತಿ
ಯಾವ ಜಯಂತಿನ್ಲಾ? ಹನುಮ ಹುಟ್ಟಿದ ತಾರೀಖು‌‌ ನಿನಗೆ ಗೊತ್ತಾ? ಸುಮ್ನೆ ಚಿಕನ್​ ತಿನ್ಲಾ: ಸಿದ್ದರಾಮಯ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × three =
Remember me
