ತುಮಕೂರು:ಇಲ್ಲೊಬ್ಬ ಬೈಕ್​ ಸವಾರ, ಕರಡಿ ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ಇನ್ನೊಂದು ಅಪಘಾತಕ್ಕೆ ಒಳಗಾದ ಆಘಾತಕಾರಿ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಹನುಮಂತಪುರದ ನಿವಾಸಿ ಕೃಷ್ಣ (34) ಎಂಬುವವರು ಮಿಡಿಗೇಶಿಯಿಂದ ತಮ್ಮ ಊರಿಗೆ ಹಿಂತಿರುಗುತ್ತಿದ್ದರು. ಈ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಸ್ವಂತ ಊರಿಗೆ ಬೈಕ್​ ಮೇಲೆ ಹಿಂತಿರುಗುತ್ತಿದ್ದಾಗ ಧಿಡೀರನೆ ಕರಡಿ ಅಡ್ಡಬಂದಿದ್ದು ಗಾಬರಿಗೆ ಒಳಗಾದ ಕೃಷ್ಣ, ಅದರಿಂದ ತಪ್ಪಿಸಿಕೊಳ್ಳಲು ಹೋಗಿ ಬೈಕ್​ ಚಾಲನೆಯಲ್ಲಿ ವ್ಯತ್ಯಯವಾಗಿದೆ. ಈ ಸಂದರ್ಭ ಬೈಕ್​ನಿಂದ ಆಯತಪ್ಪಿ ಬಿದ್ದ ಕೃಷ್ಣ, ಮಾರಣಾಂತಿಕ ಅಲ್ಲದಿದ್ದರೂ ತೀವ್ರವಾಗಿ ಗಾಯಗೊಂಡಿದ್ದಾರೆ.
ನಂತರ ಸ್ಥಳೀಯರ ಸಹಾಯದಿಂದ ಕೃಷ್ಣ ಮಧುಗಿರಿ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಾಹಿತಿ ತಿಳಿದ ಅರಣ್ಯಾಧಿಕಾರಿ ಮುತ್ತುರಾಜ್, ತಕ್ಷಣವೇ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಬಿಜೆಪಿಯವರು ಪ್ಲಾಸ್ಟಿಕ್​ ಆಕಳನ್ನು ಪೂಜಿಸುತ್ತಾರೆ, ಅವರು ಮನೆಯಲ್ಲಿ ಆಕಳು ಕಟ್ಟಿಲ್ಲ: ವಿನಯ್ ಕುಲಕರ್ಣಿ ವಾಗ್ದಾಳಿ

ಗೋವುಗಳನ್ನು ಏಕೆ ಕಡಿಯಬಾರದು ಎಂದು ಹೇಳಿದ್ದ ಪಶುಸಂಗೋಪನಾ ಸಚಿವ; ಮಾಜಿ ಸಿಎಂ ಕೆಂಡ…

ವಿಜಯವಾಣಿ-ದಿಗ್ವಿಜಯ ನ್ಯೂಸ್ ಸಹಯೋಗದಲ್ಲಿ ಚಿತ್ರಕಲಾ ಸ್ಪರ್ಧೆ; ಮಕ್ಕಳಿಗೆ ನಟಿ ಅರ್ಚನಾ ಕಿವಿಮಾತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 3 =
Remember me
